Ather: ಸಿಹಿಸುದ್ದಿ.. ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ದೊಡ್ಡ ಇಳಿಕೆ

ಬೆಂಗಳೂರು (Bengaluru) ಮೂಲದ ಪ್ರಮಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ (Ather Energy) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ವೃದ್ಧಿಸಿಕೊಳ್ಳಲು ಆರಂಭಿಕ ಆವೃತ್ತಿ (Entry-level mode) 450ಎಸ್ ಇ-ಸ್ಕೂಟರ್ ಬೆಲೆಯನ್ನು ದೊಡ್ಡಮಟ್ಟದಲ್ಲಿ ಇಳಿಸಿದೆ.

ಎಥರ್ ಎನರ್ಜಿ, 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ರೂ.20,000 ಕಡಿಮೆ ಮಾಡಿದೆ. ಇದರಿಂದಾಗಿ ಈ ಸ್ಕೂಟರ್ ಬೆಲೆ ಬೆಂಗಳೂರಿನಲ್ಲಿ ರೂ.1.09 ಲಕ್ಷ ಹಾಗೂ ದೆಹಲಿಯಲ್ಲಿ ರೂ. 97,500 (ಎಕ್ಸ್ ಶೋರೂಂ) ಆಗಿದೆ. ಜೊತೆಯಲ್ಲಿ ಪ್ರೊ ಪ್ಯಾಕ್ (Pro Pack) ಹೊಂದಿರುವ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ದರ ರೂ.25,000 ಇಳಿಕೆಯಾಗಿದೆ.

Ather

ಗ್ರಾಹಕರು 'ಪ್ರೊ ಪ್ಯಾಕ್' ಪಡೆದಿರುವ 'ಎಥರ್ 450ಎಸ್' ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ರೈಡ್ ಅಸಿಸ್ಟ್, ಎಥರ್ ಬ್ಯಾಟರಿ ಪ್ರೊಟೆಕ್ಟ್, ಎಥರ್‌ಸ್ಟಾಕ್ ಅಪ್‌ಡೇಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳು ದೊರೆಯುತ್ತವೆ. ಹೆಚ್ಚುವರಿಯಾಗಿ ರೂ.10,000 ಪಾವತಿಸಿದರೆ ಎಥರ್ ಕನೆಕ್ಟ್ (3 ವರ್ಷಗಳವರೆಗೆ ಉಚಿತ) ಫೀಚರ್ ಕೂಡ ಸಿಗುತ್ತದೆ. ಹೀರೊ ಕಂಪನಿ ಬಂಡವಾಳದೊಂದಿಗೆ ಎಥರ್ ದೇಶೀಯ ಮಾರುಕಟ್ಟೆಯಲ್ಲಿ ಭಾರೀ ವೇಗದಲ್ಲಿ ಮುನ್ನುಗ್ಗುತಿದೆ.

ಈ ಎಥರ್ 450ಎಸ್ (Ather 450S) ಎಲೆಕ್ಟ್ರಿಕ್ ಸ್ಕೂಟರ್ 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ 5.4 kW ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 ಕಿ.ಮೀ (IDC) ರೇಂಜ್ ನೀಡುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯುತ್ತದೆ.

ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ 90 kmph ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಈ ಸ್ಕೂಟರ್ ಬ್ಯಾಟರಿ ಪ್ಯಾಕ್ ಶೇಕಡ 0 - 80% ಚಾರ್ಜ್ ಆಗಲು 6 ಗಂಟೆ 36 ನಿಮಿಷ ತೆಗೆದುಕೊಳ್ಳುತ್ತದೆ. ಇದು 7 - ಇಂಚಿನ ಡೀಪ್‌ವ್ಯೂ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.

ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಕ್ರಮವಾಗಿ ಪೂರ್ತಿ ಚಾರ್ಜ್ ನಲ್ಲಿ 115 ಕಿ.ಮೀ ರಿಂದ 145 ಕಿ.ಮೀ ಕ್ರಮಿಸಬಲ್ಲದು. ರೂ.1.26 ಲಕ್ಷ ಆರಂಭಿಕ ದರವನ್ನು ಹೊಂದಿದೆ. 7 - ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಇತ್ತೀಚೆಗೆ ಬಿಡುಗಡೆಗೊಂಡ ಎಥರ್ 450ಎಕ್ಸ್ ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ರೂ.1.89 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದರಲ್ಲಿ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 157 ಕಿ.ಮೀ ರೇಂಜ್ ಕೊಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ಹೊಂದಲಿದ್ದು, 100 kmph ಟಾಪ್ ಸ್ವೀಡ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 12, 2024, 16:44 [IST]
English summary
Ather 450s electric scooter gets big price cut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+