Ather: ಎಥರ್ ಗ್ರಾಹಕರಿಗೆ ಸಿಹಿಸುದ್ದಿ: ಸರ್ವಿಸ್ ಚಿಂತೆ ಬೇಡ! ಕೇವಲ 60 ನಿಮಿಷ ಸಾಕು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ (Ather Energy), ಎಕ್ಸ್‌ಪ್ರೆಸ್‌ಕೇರ್ (ExpressCare) ಅನ್ನು ಪರಿಚಯಿಸಿದ್ದು, ಇದರಡಿ ಗ್ರಾಹಕರು ತಮ್ಮ ಸ್ಕೂಟರ್‌ಗಳನ್ನು 60 ನಿಮಿಷಗಳಲ್ಲಿ ಗುಣಮಟ್ಟದ ಸರ್ವಿಸ್ ಮಾಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಎಥರ್ ಪ್ರಕಟಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೊಣ.

ತ್ವರಿತ, ಪರಿಣಾಮಕಾರಿ ಮತ್ತು ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಗ್ರಾಹಕರಿಗೆ ವಾಹನ ಸೇವೆಯ ಅನುಭವವನ್ನು ಹೆಚ್ಚಿಸಲು ಎಕ್ಸ್‌ಪ್ರೆಸ್‌ಕೇರ್ (ExpressCare) ಅನ್ನು ಪರಿಚಯಿಸಲಾಗಿದೆ. ಪ್ರಸ್ತುತ, ಅಗ್ರ 11 ನಗರಗಳಲ್ಲಿ 20 ಎಕ್ಸ್‌ಪ್ರೆಸ್‌ಕೇರ್ ಸೇವಾ ಕೇಂದ್ರಗಳಿವೆ. ಕಂಪನಿಯು ತನ್ನ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿ ಮಾರ್ಚ್ 2024 ರ ವೇಳೆಗೆ ಈ ಸಂಖ್ಯೆಯನ್ನು 50 ಕ್ಕೆ ಹೆಚ್ಚಿಸಲು ಯೋಜಿಸಿರುವುದಾಗಿ ತಿಳಿಸಿದೆ.

ather-energy-unveils-expresscare-ev-servicing-in-60-minutes

ಎಕ್ಸ್‌ಪ್ರೆಸ್‌ಕೇರ್ ಗ್ರಾಹಕರ ಸಮಯಕ್ಕೆ ಆದ್ಯತೆ ನೀಡುವ ಮತ್ತು ತ್ವರಿತ ಮತ್ತು ಸುಗಮ ಸೇವೆಯನ್ನು ಖಾತ್ರಿಪಡಿಸುವ ಒಂದು ಸೂಕ್ಷ್ಮವಾಗಿ ರಚಿಸಲಾದ ಸೇವಾ ವಿಧಾನವಾಗಿದೆ. ಈ ಪ್ರಕ್ರಿಯೆಯು 60 ನಿಮಿಷಗಳಲ್ಲಿ ಸಮಗ್ರ ಸೇವೆಯನ್ನು ಪೂರ್ಣಗೊಳಿಸಲು ಸ್ಕೂಟರ್‌ನಲ್ಲಿ ಕೆಲಸ ಮಾಡುವ ಇಬ್ಬರು ಹೆಚ್ಚು ನುರಿತ ತಂತ್ರಜ್ಞರನ್ನು ಒಳಗೊಂಡಿರಲಿದ್ದು, ಇವರು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ.

ಪ್ರಮಾಣಿತ ಸೇವಾ ಸಮಯವನ್ನು ವ್ಯರ್ಥಗೊಳಿಸಿದೆ ಗಮನಾರ್ಹವಾದ ಸರ್ವಿಸ್ ಒದಗಿಸಿ, ನಮ್ಮ ಗ್ರಾಹಕರು ತ್ವರಿತವಾಗಿ ರಸ್ತೆಗೆ ಮರಳಲು ಅನುವು ಮಾಡಿಕೊಡುತ್ತಾರೆ. ಎಕ್ಸ್‌ಪ್ರೆಸ್‌ಕೇರ್ (ExpressCare) ಕಾರ್ಯಾಗಾರಗಳು ದೃಢವಾದ ಅಪಾಯಿಂಟ್‌ಮೆಂಟ್ ಸಿಸ್ಟಮ್‌ನೊಂದಿಗೆ ಸುಸಜ್ಜಿತವಾಗಿದ್ದು, ಗ್ರಾಹಕರ ವಿಳಂಬವನ್ನು ತಪ್ಪಿಸಲು ಹಾಗೂ ವರ್ಧಿತ ಅನುಕೂಲಕ್ಕಾಗಿ ಮುಂಚಿತವಾಗಿಯೇ ಕಾಯ್ದಿರಿಸಬಹುದು ಎಂದು Ather Energy ತಿಳಿಸಿದೆ.

ather-energy-unveils-expresscare-ev-servicing-in-60-minutes

ಗ್ರಾಹಕರು ನಾಮಮಾತ್ರದ ಪ್ರೀಮಿಯಂ ಎಕ್ಸ್‌ಪ್ರೆಸ್ ಸೇವೆ (Premium Express Service) ಯನ್ನು ರೂ. 125 ರಿಂದ ರೂ. 150 ನಡುವಿನ ದರದಲ್ಲಿ ಪಡೆಯಬಹುದು. ಎಕ್ಸ್‌ಪ್ರೆಸ್‌ಕೇರ್ ಈಗಾಗಲೇ ಗ್ರಾಹಕರಿಂದ ಗಮನಾರ್ಹ ಪ್ರತಿಕ್ರಿಯೆ ಪಡೆದುಕೊಂಡಿದೆ, ಕಳೆದ ಎರಡು ತಿಂಗಳಲ್ಲಿ 2000 ಕ್ಕೂ ಹೆಚ್ಚು ಗ್ರಾಹಕರು ಸೇವೆಯನ್ನು ಪಡೆದುಕೊಂಡಿದ್ದು, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಕಂಪನಿ ಹೇಳಿದೆ.

ಎಥರ್ ಎನರ್ಜಿಯ ಮುಖ್ಯ ವ್ಯಾಪಾರ ಅಧಿಕಾರಿ (Chief Business Officer) ರವನೀತ್ ಸಿಂಗ್ ಫೋಕೆಲಾ ಮಾತನಾಡಿ, ತಡೆರಹಿತ ಸೇವಾ ಅನುಭವವನ್ನು ಒದಗಿಸುವುದರ ಜೊತೆಗೆ ಸೇವಾ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ನಾವು ಎಕ್ಸ್‌ಪ್ರೆಸ್‌ಕೇರ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ತ್ವರಿತ ಸೇವೆಯನ್ನು ಖಚಿತಪಡಿಸುತ್ತದೆ. ಗ್ರಾಹಕರಿಗೆ ತೊಂದರೆಯಿಲ್ಲದ ಅನುಭವವನ್ನು ಒದಗಿಸಲು ನಾವು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಸೇವೆಗಳನ್ನು ಪರಿಚಯಿಸುತ್ತೇವೆ ಎಂದರು.

ಪ್ರಸ್ತುತ, ಎಥರ್ ಎನರ್ಜಿ ಭಾರತದಾದ್ಯಂತ 156 ಸೇವಾ ಕೇಂದ್ರ (Service Center) ಗಳನ್ನು ಹೊಂದಿದ್ದು, ಮಾರ್ಚ್ 2024 ರ ವೇಳೆಗೆ ಇನ್ನೂ 50 ಸೇವಾ ಕೇಂದ್ರಗಳನ್ನು ವಿಸ್ತರಿಸುವ ಯೋಜನೆ ಇರುವುದಾಗಿ ಕಂಪನಿ ಹೇಳಿದೆ. ಪ್ರಸ್ತುತ ಇವಿ ಸ್ಕೂಟರ್ (Elelctric scooter) ವಿಭಾಗದಲ್ಲಿ ಓಲಾ (Ola) ಹಾಗೂ ಟಿವಿಎಸ್ (TVS)‌ ಗೆ ಬ್ರಾಂಡ್‌ಗಳಿಗೆ ಎಥರ್ ಗಟ್ಟಿ ಪೈಪೋಟಿ ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 18, 2024, 17:13 [IST]
English summary
Ather energy unveils expresscare ev servicing in 60 minutes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+