Ather Rizta: ಬಿಡುಗಡೆಗೂ ಮುನ್ನ ಎಥರ್ ರಿಜ್ಟಾ ಫ್ಯಾಮಿಲಿ ಸ್ಕೂಟರ್ ವಿವರಗಳು ಬಹಿರಂಗ
ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ಕೆಲವೇ ದಿನಗಳಲ್ಲಿ 'ರಿಜ್ಟಾ' ಹೆಸರಿನ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ವೊಂದನ್ನು ಮಾರುಕಟ್ಟೆಗೆ ತರಲಿದೆ. ಏಪ್ರಿಲ್ 6 ರಂದು ಇದನ್ನು ಪರಿಚಯಿಸಲಿದ್ದು, ಪ್ರಿ ಬುಕ್ಕಿಂಗ್ ಕೂಡ ಆರಂಭವಾಗಿದೆ. ಇದೀಗ ಈ ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಒಂದಷ್ಟು ಮಾಹಿತಿ ಬಹಿರಂಗಗೊಂಡಿದೆ.
ಹೊಸ ಎಥೆರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಕಂಪನಿಯು ಇನ್ಸ್ಟಾಗ್ರಾಂನಲ್ಲಿ ವೀಡಿಯೊ ಮೂಲಕ ಸ್ಕೂಟರ್‌ನ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ವೀಡಿಯೊದಲ್ಲಿ ಮರೆಮಾಚಲ್ಪಟ್ಟ ರಿಜ್ಟಾ ಸ್ಕೂಟರ್ ಅಂಡರ್ ಸೀಟ್ ಸ್ಟೋರೇಜ್ ತೆರೆದಿರುವುದನ್ನು ತೋರಿಸಲಾಗಿದೆ. ಶೇಖರಣಾ ಪ್ರದೇಶವು ಆಳವಾದ ಮತ್ತು ಅಗಲವಾದ ಸ್ಟೋರೇಜ್ ಹೊಂದಿದ್ದು, ಇದು ಅರ್ಧ ಮುಖದ ಹೆಲ್ಮೆಟ್, ಕೆಲವು ದಿನಸಿ ವಸ್ತುಗಳು, ಚೀಲ, ಲಂಚ್ ಬಾಕ್ಸ್ ಮತ್ತು ಇನ್ನೂ ಕೆಲವು ವಸ್ತುಗಳನ್ನು ಹೊಂದಿಸುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆ ಹೊಸ ಸ್ಕೂಟರ್ ಅಂಡರ್ ಸೀಟ್ ಸ್ಟೋರೇಜ್ ಸಾಕಷ್ಟು ಶೇಖರಣಾ ಸ್ಥಳವನ್ನು ಹೊಂದಿರುವುದನ್ನು ಈ ವಿಡಿಯೋ ಖಚಿತಪಡಿಸಿದೆ.

ಕೇವಲ ಬೃಹತ್ ಅಂಡರ್ ಸೀಟ್ ಸ್ಟೋರೇಜ್ ಮಾತ್ರವಲ್ಲದೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ದೊಡ್ಡದಾದ ಆಸನ (ಸೀಟ್) ವ್ಯವಸ್ಥೆಯನ್ನು ಪಡೆದಿರಲಿದೆ. ಇದರೊಟ್ಟಿಗೆ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿರುವ ಸಾಧ್ಯತೆಯಿದ್ದು, ಗೂಗಲ್ ಮ್ಯಾಪ್, ಒಟಿಎ ಅಪ್ಡೇಟ್, ಚಾರ್ಜಿಂಗ್ ಸಾಕೆಟ್ ಹಾಗೂ ಎಲ್ಇಡಿ ಲೈಟಿಂಗ್ ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಈಗಾಗಲೇ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ರೂ.999 ಮುಂಗಡ ಹಣವನ್ನು ಪಾವತಿಸುವ ಮೂಲಕ ಈ ಸ್ಕೂಟರ್ನ್ನು ಕಾಯ್ದಿರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಸಣ್ಣ ಶೇಖರಣಾ ಪ್ರದೇಶ: ಮುಖ್ಯ ಶೇಖರಣಾ ಕಂಪಾರ್ಟ್ಮೆಂಟ್ ಜೊತೆಗೆ, ವ್ಯಾಲೆಟ್ / ಪರ್ಸ್ ನಂತಹ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಸೀಟಿನ ಕೀಲಿನ ಬಳಿ ಸಣ್ಣ ಶೇಖರಣಾ ಪ್ರದೇಶವೂ ಇದೆ. ಈ ಹಿಂದಿನ ಅಪ್‌ಡೇಟ್‌ಗಳಲ್ಲಿ ಎಥರ್ ಗಮನಾರ್ಹವಾಗಿ ರಿಜ್ಟಾದ ಉದ್ದ ಮತ್ತು ಅಗಲವಾದ ಆಸನವನ್ನು ಹೈಲೈಟ್ ಮಾಡಿತ್ತು. ಇದೀಗ ಎರಡನೇ ಶೇಖರಣಾ ಪ್ರದೇಶದಲ್ಲಿ ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್ ಅಥವಾ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಒದಗಿಸುವ ಬಗ್ಗೆ ಸುಳಿವು ನೀಡಿದೆ.

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎರಡು ಆಕರ್ಷಕ ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದ್ದು, 2.9 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ನೊಂದಿಗೂ ದೊರೆಯಬಹುದು ಎಂದು ಹೇಳಲಾಗಿದೆ. ಆದರೆ, ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 'ಸ್ವೀಕರ್'ಗಳನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಈ ಸ್ಕೂಟರ್ ಅನಾವರಣಗೊಂಡ ಮೇಲೆಯೇ ಎಲ್ಲದಕ್ಕೂ ಅಧಿಕೃತವಾಗಿ ತೆರೆಬೀಳಲಿದೆ.
ವಿಶಾಲವಾದ ಫ್ಲಾಟ್ ಫ್ಲೋರ್ ಸ್ಪೇಸ್, 12-ಇಂಚಿನ 5-ಸ್ಪೋಕ್ ವೀಲ್‌ಗಳು ಮತ್ತು ಡಿಸ್ಕ್-ಡ್ರಮ್ ಬ್ರೇಕ್ ಸೆಟಪ್ ಅನ್ನು ಒಳಗೊಂಡಿದೆ. ವೆಚ್ಚವನ್ನು ನಿಯಂತ್ರಣದಲ್ಲಿಡಲು ಮತ್ತು ಇದು ಫ್ಯಾಮಿಲಿ ಸ್ಕೂಟರ್ ಎಂದು ಪರಿಗಣಿಸಿ ಆಲ್ - ಡಿಸ್ಕ್ ಸೆಟಪ್ ಗಿಂತ ಭಿನ್ನವಾಗಿ ಡಿಸ್ಕ್ - ಡ್ರಮ್ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ತೋರುತ್ತಿದೆ. ಕೊನೆಯದಾಗಿ, ರಿಜ್ಟಾದ ಪರ್ಫಾಮೆನ್ಸ್ ಎಥರ್‌ನ ಜನಪ್ರಿಯ 450 ಎಕ್ಸ್ ನಷ್ಟು ಪ್ರಬಲವಾಗಿರುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಈ ಸ್ಕೂಟರ್ ಇತರ 450 ಮಾದರಿಗಳಂತೆಯೇ ಎಂಆರ್‌ಎಫ್ ಜಾಪರ್ ಟೈರ್‌ಗಳನ್ನು ಹೊಂದಿರಲಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಹೊಂದಿದೆ. ಈ ಸ್ಕೂಟರ್ ಕಲರ್ ಟಿಎಫ್ ಟಿ ಡಿಸ್ ಪ್ಲೇಯನ್ನು ಹೊಂದಿರಲಿದ್ದು, ಬಹುಶಃ 450ಎಕ್ಸ್ ನಂತೆಯೇ ಇರಲಿದೆ. ಆದ್ದರಿಂದ ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ ಮತ್ತು ಇನ್ನೂ ಕೆಲವು ವೈಶಿಷ್ಟ್ಯಗಳೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








