Ather: ಬೆಂಗಳೂರಿನ ಎಥರ್‌ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಏ.6ರಂದು ಪರಿಚಯ.. ವಿಶೇಷತೆಗಳೇನು?
ಬೆಂಗಳೂರು (Bengaluru) ಮೂಲದ ಎಥರ್ ಎನರ್ಜಿ (Ather Energy) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಖ್ಯಾತಿ ಗಳಿಸಿದೆ. ತನ್ನ ಹೊಸ ಕುಟುಂಬ ಇ-ಸ್ಕೂಟರ್ ಎನ್ನಲಾದ ರಿಜ್ಟಾ (Rizta)ವನ್ನು ಏಪ್ರಿಲ್ 6 ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ .
ಈಗಾಗಲೇ ಎಥರ್ ರಿಜ್ಟಾ (Ather Rizta)ವನ್ನು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಎಂದು ಪ್ರಚಾರ ಮಾಡಲಾಗಿದೆ. ಸದ್ಯ ಭಾರತದಲ್ಲಿ ಕಂಪನಿ ಮಾರಾಟಗೊಳಿಸುವ 450 ಸರಣಿ ಸ್ಕೂಟರ್‌ಗಳಿಗೆ ಹೋಲಿಸಿದರೆ ಕೊಂಚ ದೊಡ್ಡದಾಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಟೀಸರ್ ಹಾಗೂ ಸ್ಪೈ ಫೋಟೋಗಳು ಕೂಡ ಅದನ್ನು ಸಾಬೀತುಪಡಿಸಿವೆ. ಈ ರಿಜ್ಟಾ ಇ-ಸ್ಕೂಟರ್ ಸೀಟ್ ಗಳು ವಿಶಾಲವಾಗಿದ್ದು, ಸವಾರರು ಆರಾಮದಾಯಕವಾಗಿ ಪ್ರಯಾಣಿಯಬಹುದು.

ಮುಂಬರಲಿರುವ ನೂತನ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್, 450 ಸರಣಿ ಸ್ಕೂಟರ್‌ಗಳಂತೆಯೇ ವೈಶಿಷ್ಟ್ಯವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಬಹುದಾದ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಹಲವು ರೈಡ್ ಮೋಡ್‌ಗಳು, ನ್ಯಾವಿಗೇಷನ್, ಫಾಸ್ಟ್ ಚಾರ್ಜಿಂಗ್, ದೊಡ್ಡದಾದ ಸೀಟ್ ಸ್ಟೋರೇಜ್ ಪಡೆದಿರುವ ಸಾದ್ಯತೆಯಿದೆ.
ಈ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ, ಬ್ರೇಕಿಂಗ್ ಸಿಸ್ಟಮ್, ಸಸ್ಪೆನ್ಷನ್ ಸೆಟಪ್ ಹಾಗೂ ಬೆಲೆ ಕುರಿತ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಕೆಲವೇ ದಿನಗಳಲ್ಲಿ ಆ ಬಗ್ಗೆ ತಿಳಿಯಲಿದೆ. ಪ್ರಸ್ತುತ ದೇಶದಲ್ಲಿ ಎಥರ್ ಎನರ್ಜಿ (Ather Energy) 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಳಿಸುತ್ತಿದ್ದು, ವಿದೇಶಕ್ಕೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ.

ಭಾರತದಲ್ಲಿ ಎಥರ್ 450 ಅಪೆಕ್ಸ್ (Ather 450 Apex) ಎಲೆಕ್ಟ್ರಿಕ್ ಸ್ಕೂಟರ್, ರೂ.1.89 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಂಡಿತ್ತು. ಕೆಲವೇ ದಿನಗಳ ಹಿಂದೆ, ಈ ಸ್ಕೂಟರ್‌ನ್ನು ಶೋರೂಂಗಳಿಗೆ ತಲುಪಿಸಲು ಶುರು ಮಾಡಲಾಗಿದೆ. ಈ ಅಪೆಕ್ಸ್ ಸ್ಕೂಟರ್ 3.7 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 157 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.
ಎಥರ್ ಎಂಟ್ರಿ ಲೆವೆಲ್ (ಆರಂಭಿಕ) ಮಾದರಿ 450ಎಸ್ (450S) ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನಲ್ಲಿ ರೂ.1,16,969 ಆನ್ ರೋಡ್ ದರವನ್ನು ಪಡೆದಿದೆ. ಇದು 2.9 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 ಕಿ.ಮೀ ಕ್ರಮಿಸುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, 90 ಕೆಎಂಪಿಹೆಚ್ ಟಾಪ್ ಸ್ವೀಡ್ ಹೊಂದಿದೆ.
ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ರೂ.1.26 ಲಕ್ಷದಿಂದ ರೂ.1.29 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ರೂಪಾಂತರಗಳಿಗೆ ಅಣುಗುಣವಾಗಿ 115 ಕಿ.ಮೀ ರಿಂದ 145 ಕಿ.ಮೀ ರೇಂಜ್ ನೀಡಲಿದ್ದು, ಯುವ ಗ್ರಾಹಕರನ್ನು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಎಥರ್ ಎನರ್ಜಿ ಏಪ್ರಿಲ್ 6 ರಂದು ಕಮ್ಯುನಿಟಿ ಡೇ (ಸಮುದಾಯ ದಿನ) ಆಚರಿಸುತ್ತಿದ್ದು, ಅಂದೇ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸುತ್ತಿರುವುದರಿಂದ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








