Ather Rizta vs TVS iQube: ಖರೀದಿಗೆ ಯಾವುದು ಬೆಸ್ಟ್? ಬೆಲೆ, ಫೀಚರ್, ವಿಶೇಷತೆಗಳು!
Ather Rizta vs TVS iQube: ಎಥರ್ ಎನರ್ಜಿ (Ather energy) ಇತ್ತೀಚೆಗೆ ತನ್ನ ಬಹು ನಿರೀಕ್ಷಿತ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚು ಪ್ರಾಯೋಗಿಕ ಮತ್ತು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಹೊಸ ಬುಕಿಂಗ್‌ಗಳು ನಡೆಯುತ್ತಿವೆ. ವಿತರಣೆಗಳು ಜುಲೈ ತಿಂಗಳಿನಿಂದ ಪ್ರಾರಂಭವಾಗಲಿವೆ.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಥರ್ ಎನರ್ಜಿ ಸದ್ಯ ಟಿವಿಎಸ್ ಐಕ್ಯೂಬ್ (TVS iQube), ಓಲಾ ಎಸ್1 ಏರ್ (Ola S1 Air) ಮತ್ತು ಬಜಾಜ್ ಚೇತಕ್ ಇವಿಗಳೊಂದಿಗೆ ಸ್ಪರ್ಧಿಸುತ್ತದೆ. ಆದ್ರೆ ಮುಖ್ಯವಾಗಿ ಹೊಸ ಎಥರ್ ರಿಜ್ಟಾಗೆ ನೇರ ಪ್ರತಿಸ್ಪರ್ಧಿಯೆಂದರೆ ಟಿವಿಎಸ್ ಐಕ್ಯೂಬ್ ಆಗಿದೆ. ಏಕೆಂದರೆ ಬೆಲೆ ಸೇರಿದಂತೆ ವೇರರಿಯೆಂಟ್‌ಗಳು, ಫೀಚರ್‌ಗಳು ಹಾಗೂ ವಿಶೇಷತೆಗಳಲ್ಲಿ ಎರಡೂ ಸ್ಕೂಟರ್‌ಗಳು ಒಂದೇ ಹಂತದಲ್ಲಿವೆ. ಹಾಗಾಗಿ ಎಥರ್ ರಿಜ್ಟಾವನ್ನು TVS iQube ಜೊತೆಗೆ ಬೆಲೆ, ರೂಪಾಂತರಗಳು, ವೈಶಿಷ್ಟ್ಯಗಳು, ವಿಶೇಷತೆಗಳು ಸೇರಿದಂತೆ ಇನ್ನೂ ಹೆಚ್ಚಿನವುಗಳಿಗೆ ಹೋಲಿಕೆ ಮಾಡಿ ನೋಡೋಣ.

ವೈಶಿಷ್ಟ್ಯಗಳು: TVS iQube ಗೆ ಹೋಲಿಸಿದರೆ Ather Rizta ವೈಶಿಷ್ಟ್ಯಗಳ ದೀರ್ಘ ಪಟ್ಟಿಯೊಂದಿಗೆ ಬರುತ್ತದೆ. ಎಲ್ಇಡಿ ಲೈಟಿಂಗ್, ಎರಡು ರೈಡಿಂಗ್ ಮೋಡ್‌ಗಳನ್ನು ಅವಲಂಬಿಸಿ ರಿಜ್ಟಾ 'ಡೀಪ್‌ವ್ಯೂ' ಎಲ್‌ಸಿಡಿ ಕ್ಲಸ್ಟರ್ ಪಡೆದಿದೆ. ಜಿಪ್ ಮತ್ತು ಸ್ಮಾರ್ಟ್‌ಇಕೋ, ರಿವರ್ಸ್ ಮೋಡ್, ಮ್ಯಾಜಿಕ್ ಟ್ವಿಸ್ಟ್, ಹಿಲ್ ಹೋಲ್ಡ್, ಟ್ರಾಕ್ಷನ್ ಕಂಟ್ರೋಲ್, ಫಾಲ್-ಸೇಫ್ ಫಂಕ್ಷನ್, ಸ್ಕಿಡ್ ಕಂಟ್ರೋಲ್, 56 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.
TVS iQube ಒಂದು TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಯೋ-ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಥಿತಿ, ನ್ಯಾವಿಗೇಷನ್ ಅಸಿಸ್ಟ್, ಕೊನೆಯ ಪಾರ್ಕ್ ಸ್ಥಳ, ಇನ್‌ಕಮಿಂಗ್ ಕಾಲ್ ಅಲರ್ಟ್ / SMS ಎಚ್ಚರಿಕೆ, 32 ಲೀಟರ್ ಅಂಡರ್ ಸೀಟ್ ಸ್ಟೋರೇಜ್, ರೀಜೆನ್ ಬ್ರೇಕಿಂಗ್, ಅಮೆಜಾನ್ ಅಲೆಕ್ಸಾ ಕನೆಕ್ಟ್, ಎರಡು ರೈಡಿಂಗ್ ಮೋಡ್‌ಗಳು ಸೇರಿದಂತೆ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಬ್ಯಾಟರಿ ಮತ್ತು ರೇಂಜ್: ರಿಜ್ಟಾವನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಒಂದು 2.9kWh ಘಟಕ ಮತ್ತು ಇನ್ನೊಂದು 3.7kWh ಘಟಕವಾಗಿದೆ. ಮೊದಲನೆಯದು 123km IDC ರೇಂಜ್ ಹೊಂದಿದ್ದರೆ, ಎರಡನೆಯದು 160km IDC ರೇಂಜ್ ಹೊಂದಿದೆ. 2.9kWh ಬ್ಯಾಟರಿ ಪ್ಯಾಕ್ ಅನ್ನು 6.4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು, ದೊಡ್ಡದಾದ 3.7kWh ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರಿಜ್ಟಾ PMSM ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆದಿದ್ದು, ಇದು 80 ಕಿ.ಮೀ ಗರಿಷ್ಟ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
TVS iQube ಕೂಡ 3kWh ಮತ್ತು 4.5 kWh ಎಂಬ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದು 100 ಕಿ.ಮೀ ರೇಂಜ್, 78 ಕಿ.ಮೀ ಗರಿಷ್ಟು ವೇಗವನ್ನು ಹೊಂದಿದೆ. ಎರಡನೆಯದು 155 ಕಿ.ಮೀ ರೇಂಜ್, 82 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದೆ. 3 kWh ಅನ್ನು 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು, 4.5 kWh ಬ್ಯಾಟರಿ 4.3 ಗಂಟೆ ತೆಗೆದುಕೊಳ್ಳುತ್ತದೆ. BLDC ಮೋಟರ್ ಅನ್ನು ಹೊಂದಿದೆ.

ಬೆಲೆ ಮತ್ತು ರೂಪಾಂತರಗಳು:ಹೊಸ ಎಥರ್ ರಿಜ್ಟಾ S ಮತ್ತು Z ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಕ್ರಮವಾಗಿ 1.1 ಲಕ್ಷ ಮತ್ತು 1.45 ಲಕ್ಷ (ಎಕ್ಸ್ ಶೋರೂಂ) ಬೆಲೆಯಿದೆ. TVS iQube ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, STD ಬೆಲೆ 1.1 ಲಕ್ಷ, S ಬೆಲೆ 1.18 ಲಕ್ಷ ಮತ್ತು ST ಬೆಲೆ 1.25 ಲಕ್ಷ (ಎಲ್ಲ ಬೆಲೆಗಳು ಎಕ್ಸ್ ಶೋ ರೂಂ) ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








