Bajaj Chetak: ಶೀಘ್ರ ಅತ್ಯಂತ ಕಡಿಮೆ ಬೆಲೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ಖಚಿತ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ (Bajaj Auto) ಮಾರಾಟಗೊಳಿಸುವ ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್‌ಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದ್ದು, ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಅತ್ಯಂತ ಕಡಿಮೆ ಬೆಲೆಗೆ ಚೇತಕ್ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಲು ಕಂಪನಿ ತಯಾರಿಯನ್ನು ನಡೆಸುತ್ತಿದೆ.

ಈ ಬಗ್ಗೆ ಸ್ವತಃ ಬಜಾಜ್ ಆಟೋದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಕೇಶ್ ಶರ್ಮಾ ಅವರು ಖಚಿತಪಡಿಸಿದ್ದು, 'ಚೇತಕ್ ಲೈನ್ಅಪ್ ವಿಸ್ತರಿಸಿವ ಕೆಲಸದಲ್ಲಿ ನಿರತರಾಗಿದ್ದೇವೆ. ಜೊತೆಗೆ ಹೊಸ ವಾಹನದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು ಬೃಹದಾಕಾರವಾಗಿ ಅಭಿವೃದ್ಧಿಪಡಿಸಲು ಗಮನ ಹರಿಸಿದ್ದೇವೆ. ಮುಂಬರುವ ತಿಂಗಳಲ್ಲಿ ನೂತನ ಉತ್ಪನ್ನವನ್ನು (ಸ್ಕೂಟರ್) ಮಾರುಕಟ್ಟೆಗೆ ಪರಿಚಯಿಸಲಾಗುವುದು' ಎಂದು ಹೇಳಿದ್ದಾರೆ.

Bajaj Chetak Electric Scooter New Variant Launch Soon Under Rs 1 Lakh Price

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಲು ಯೋಜಿಸಿದೆ. ಆದರೂ ಬಜಾಜ್ ಪ್ರತಿಸ್ಪರ್ಧಿಗಳಾದ ಓಲಾ ಹಾಗೂ ಎಥರ್ ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇವುಗಳಿಗೆ ಪೈಪೋಟಿ ನೀಡಲು ಬಜಾಜ್ ಕೂಡ ಕಡಿಮೆ ದರಕ್ಕೆ ಚೇತಕ್ ಇ-ಸ್ಕೂಟರ್ ಪರಿಚಯಿಸಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಸ್ಕೂಟರ್ 1 ಲಕ್ಷಕ್ಕಿಂತ ಕಡಿಮೆ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರಬಹುದು ಎಂದು ಹೇಳಲಾಗಿದೆ.

ಮುಂಬರಲಿರುವ ಹೊಸ ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್ ಅಗ್ಗದ ಬೆಲೆಗೆ ದೇಶೀಯ ಮಾರುಕಟ್ಟೆಗೆ ಬರುವ ನಿರೀಕ್ಷೆಯಿರುವುದರಿಂದ ಸಣ್ಣದಾದ ಬ್ಯಾಟರಿ ಪ್ಯಾಕ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿರಬಹುದು. ಈಗಿರುವ ಮಾದರಿಗೆ ಹೋಲಿಕೆ ಮಾಡಿದರೆ ಒಂದಷ್ಟು ಪ್ರಮುಖ ವೈಶಿಷ್ಟ್ಯಗಳು ಪಡೆದಿರುವುದಿಲ್ಲ ಎನ್ನಲಾಗಿದ್ದು, ಮೊನೋಕ್ರೋಮ್ ಎಲ್‌ಸಿಡಿ ಕನ್ಸೋಲ್ ಒಳಗೊಂಡಿರುವ ಸಾಧ್ಯತೆಯಿದೆ.

Bajaj Chetak Electric Scooter New Variant Launch Soon Under Rs 1 Lakh Price

ನೂತನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಹುಶಃ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಬಹುದು. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ 'ಬಜಾಜ್ ಚೇತಕ್' ಮೂರನೇ ಅತಿ ಹೆಚ್ಚು ಮಾರಾಟವಾಗುವ ಇ-ಸ್ಕೂಟರ್‌ ಆಗಿದೆ. ಇದು 2 ಆಕರ್ಷಕ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, ಅರ್ಬೆನ್ ಹಾಗೂ ಪ್ರೀಮಿಯಂ. ಕ್ರಮವಾಗಿ ಸುಮಾರು ರೂ.1.15 ಲಕ್ಷದಿಂದ ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿವೆ.

ಬಜಾಜ್ ಚೇತಕ್ ಅರ್ಬೆನ್ ರೂಪಾಂತರ ಸಂಪೂರ್ಣ ಚಾರ್ಜ್ ನಲ್ಲಿ 113 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡಲಿದ್ದು, ಗಂಟೆಗೆ 73 ಕಿ.ಮೀ (ಟಾಪ್ ಸ್ವೀಡ್) ಗರಿಷ್ಠ ವೇಗವನ್ನು ಪಡೆಯಲಿದೆ. ಚೇತಕ್ ಪ್ರೀಮಿಯಂ ಮಾದರಿ ಭರ್ತಿ ಚಾರ್ಜ್ ನಲ್ಲಿ 108 ಕಿ.ಮೀ ರೇಂಜ್ ಕ್ರಮಿಸಲಿದ್ದು, ಗಂಟೆಗೆ 63 ಕಿಲೋಮೀಟರ್ ಗರಿಷ್ಠ ವೇಗವನ್ನು ಹೊಂದಲಿದೆ.

ಈ ಇವೆರೆಡು ಬಜಾಜ್ ಚೇತಕ್ ರೂಪಾಂತರಗಳು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಮತ್ತು ಡಿಸ್ಪ್ಲೇ ಥೀಮ್ ಅನ್ನು ಒಳಗೊಂಡಿವೆ. ಪ್ರೀಮಿಯಂ ಮಾದರಿ ಇಂಡಿಗೋ ಬ್ಲೂ, ಬ್ರೂಕ್ಲಿನ್ ಬ್ಲಾಕ್ ಮತ್ತು ಹ್ಯಾಝೆಲ್ನಟ್ ಹಾಗೂ ಅರ್ಬೇನ್ ಆವೃತ್ತಿ ಕೋರ್ಸ್ ಗ್ರೇ, ಸೈಬರ್ ವೈಟ್, ಬ್ರೂಕ್ಲಿನ್ ಬ್ಲಾಕ್ ಸೇರಿದಂತೆ 4 ಬಣ್ಣಗಳೊಂದಿಗೆ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, March 25, 2024, 11:13 [IST]
English summary
Bajaj chetak electric scooter new variant launch soon under rs 1 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+