Bajaj Chetak vs Ather 450X Pro ಯಾವುದು ಬೆಸ್ಟ್? ಹಿಂದಿಕ್ಕುವ ತಾಕ್ಕತ್ತು ಯಾವುದಕ್ಕಿದೆ?

ಬಜಾಜ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು 2024 ಚೇತಕ್ ಅನ್ನು ಅರ್ಬೇನ್ ಮತ್ತು ಪ್ರೀಮಿಯಂ ಟ್ರಿಮ್‌ಗಳಲ್ಲಿ ಬಿಡುಗಡೆ ಮಾಡುವುದರೊಂದಿಗೆ ನವೀಕರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ Ather 450X Gen 3 ವಿರುದ್ಧ ಹೊಸ ಚೇತಕ್ ಅನ್ನು ಹೋಲಿಕೆ ಮಾಡಿದ್ದೇವೆ, ಇವೆರಡರಲ್ಲಿ ಯಾವುದು ಬೆಸ್ಟ್ ಎಂಬುದನ್ನು ಕೆಳಗೆ ನೋಡೋಣ.

ಬಜಾಜ್ ಚೇತಕ್ ಪ್ರೀಮಿಯಂ ಸಂಪೂರ್ಣವಾಗಿ ತನ್ನ ಹಳೆಯ ಲೆಜೆಂಡರಿ ಲುಕ್ ಅನ್ನು ಹಾಗೇ ಉಳಿಸಿಕೊಂಡಿದೆ. ರೌಂಡ್ ಹೆಡ್‌ಲೈಟ್, ಕರ್ವಿ ಬಾಡಿ ಪ್ಯಾನೆಲ್‌ಗಳು ಮತ್ತು ದುಂಡಾದ ಏಪ್ರನ್ ಹೊಂದುವ ಮೂಲಕ ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಹಳೆಯ ಪೆಟ್ರೋಲ್ ಚಾಲಿತ ಚೇತಕ್ ಅನ್ನು ನೆನಪಿಸುತ್ತದೆ.

bajaj-chetak-vs-ather-450x-pro-comparison-price-features-specs

ಎಥೆರ್ ಕಂಪನಿಯು ಬೆಂಗಳೂರು ಮೂಲದ ಹೊಸ ಎಲೆಕ್ಟ್ರಿಕ್ ತಯಾರಕಾ ಕಂಪನಿಯಾಗಿದೆ. ಎಥರ್ 450X ಅದರ ಸ್ಪೋರ್ಟಿ ವಿನ್ಯಾಸದೊಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದರ ಬಾಡಿ ನಿರ್ಮಾಣವು ತೀಕ್ಷ್ಣ ಮತ್ತು ಏರೋಡೈನಮಿಕ್ ಸ್ಟೈಲ್‌ನಲ್ಲಿ ಬರುತ್ತದೆ. ಒಟ್ಟಾರೆ ಇದರ ಡಿಸೈನ್ ಈಗಿನ ಯುವಜನತೆಯನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

ಬೆಲೆ: 2024 ಬಜಾಜ್ ಚೇತಕ್ ಪ್ರೀಮಿಯಂ ಬೆಲೆಯು 1,35,463 ರೂ.ನಿಂದ ಆರಂಭವಾಗಿ ಟೆಕ್‌ಪ್ಯಾಕ್ (TecPac) ಜೊತೆಗೆ ರೂ. 1,44,463 (ಎರಡೂ ಎಕ್ಸ್ ಶೋರೂಂ, ಪುಣೆ) ವೆರಗೆ ಇರುತ್ತದೆ. ಇತ್ತ Ather 450X ಬೆಲೆಯು ಅದರ ಸ್ಟ್ಯಾಂಡರ್ಡ್ ಟ್ರಿಮ್‌ಗೆ ರೂ. 1,44,921 ಮತ್ತು ಪ್ರೊ ಪ್ಯಾಕ್‌ನೊಂದಿಗೆ ರೂ. 1,67,999 (ಎರಡೂ ಎಕ್ಸ್ ಶೋರೂಂ, ಬೆಂಗಳೂರು) ವೆರೆಗೆ ಇದೆ.

bajaj-chetak-vs-ather-450x-pro-comparison-price-features-specs

ವೈಶಿಷ್ಟ್ಯಗಳು: ಎರಡೂ ಸ್ಕೂಟರ್‌ಗಳನ್ನು ಅವುಗಳ ವೈಶಿಷ್ಟ್ಯದ ಪ್ಯಾಕ್‌ಗಳೊಂದಿಗೆ ಪರಿಗಣಿಸಿದರೆ, ಬಜಾಜ್ ಚೇತಕ್ ಪ್ರೀಮಿಯಂ TecPac ಜೊತೆಗೆ ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡ್ ಮೋಡ್‌ಗಳನ್ನು ಪಡೆಯುತ್ತದೆ. ಜೊತೆಗೆ ಹಿಲ್ ಹೋಲ್ಡ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಸೀಕ್ವೆನ್ಷಿಯಲ್ ಬ್ಲಿಂಕರ್‌ಗಳು, ಐದು-ಇಂಚಿನ ಕಲರ್ TFT ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಪ್ರೊ ಪ್ಯಾಕ್‌ನೊಂದಿಗೆ ಎಥರ್ 450X ಐದು ರೈಡಿಂಗ್ (ಸ್ಮಾರ್ಟ್ ಇಕೋ, ಇಕೋ, ರೈಡ್, ಸ್ಪೋರ್ಟ್ ಮತ್ತು ವಾರ್ಪ್) ಮೋಡ್‌ಗಳ ಜೊತೆಗೆ ಹಿಲ್ ಅಸಿಸ್ಟ್, ಬ್ಲೂಟೂತ್ ಕನೆಕ್ಟ್, ಮ್ಯೂಸಿಕ್ ಮತ್ತು ಕಾಲ್ ಡಿಸ್ಪ್ಲೆ, ನ್ಯಾವಿಗೇಷನ್, ಗೈಡ್-ಮಿ -ಹೋಮ್ ಲೈಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡಾಕ್ಯುಮೆಂಟ್ ಸ್ಟೋರೇಜ್, OTA (ಓವರ್ ದಿ ಏರ್) ಅಪ್‌ಡೇಟ್‌ಗಳು ಮತ್ತು ರಿಮೋಟ್ ಚಾರ್ಜ್ ಮಾನಿಟರಿಂಗ್‌ನಂತಹ ವೈಶಿಷ್ಟ್ಯಗಳು ಬರುತ್ತವೆ.

bajaj-chetak-vs-ather-450x-pro-comparison-price-features-specs

ಮೋಟಾರ್ ಮತ್ತು ಬ್ಯಾಟರಿ: ಬಜಾಜ್ ಚೇತಕ್ 3.2kWh ಬ್ಯಾಟರಿಯೊಂದಿಗೆ, ಗರಿಷ್ಠ 127km ರೇಂಜ್ ನೀಡುತ್ತದೆ. ಗರಿಷ್ಠ ವೇಗವು 73kmph ಗೆ ಸೀಮಿತವಾಗಿದೆ. ಸಂಪೂರ್ಣ ಜಾರ್ಜ್‌ ಮಾಡಲು ನಾಲ್ಕು ಗಂಟೆ 30 ನಿಮಿಷಗಳು ಬೇಕು. ಎಥರ್ 450X, 3.7kWh ಬ್ಯಾಟರಿಯನ್ನು 6.2kW ಮೋಟಾರ್‌ಗೆ ಜೋಡಿಸಲಾಗಿದೆ. ಇದು 90kmph ಗರಿಷ್ಠ ವೇಗ, 110km ರೇಂಜ್ ನೀಡುತ್ತದೆ. ಜಾರ್ಜ್‌ ಮಾಡಲು ನಾಲ್ಕು ಗಂಟೆ 30 ನಿಮಿಷಗಳು ಬೇಕು.

ಹಾರ್ಡ್‌ವೇರ್: ಚೇತಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ ಮಾತ್ರ ಡಿಸ್ಕ್ ಅನ್ನು ಹೊಂದಿದ್ದು, 12 ಇಂಚಿನ ವೀಲ್‌ಗಳೊಂದಿಗೆ ಬರುತ್ತದೆ. ಇನ್ನು ಎಥರ್ 450X ಅನ್ನು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಮೊನೊಶಾಕ್‌ನೊಂದಿಗೆ ಸಜ್ಜುಗೊಳಿಸಿದೆ. ಇದರ ಬ್ರೇಕ್‌ಗಳು 12 ಇಂಚಿನ ವೀಲ್‌ಗಳಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಅನ್ನು ಒಳಗೊಂಡಿವೆ.

bajaj-chetak-vs-ather-450x-pro-comparison-price-features-specs

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 6, 2024, 13:24 [IST]
English summary
Bajaj chetak vs ather 450x pro comparison price features specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+