Bajaj CNG Bike: ಬಿಡುಗಡೆಗೆ 1 ತಿಂಗಳಷ್ಟೇ ಬಾಕಿ.. ಮತ್ತೆ ಕಾಣಿಸಿಕೊಂಡ ಬಜಾಜ್ ಸಿಎನ್‌ಜಿ ಬೈಕ್, ವಿಶೇಷತೆಗಳೇನು?

ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಮೋಟಾರ್‌ಸೈಕಲ್‌ಗಳು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಬಜಾಜ್ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಬೈಕ್‌ನ್ನು ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ.

ಇತ್ತೀಚೆಗೆ ಪುಣೆಯಲ್ಲಿ ಹೊಸ 'ಪಲ್ಸರ್ ಎನ್ಎಸ್400ಝಡ್' ಮೋಟಾರ್‌ಸೈಕಲ್‌ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ ಅವರು, ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ್ನು ಜೂನ್ 18ರಂದು ಪರಿಚಯಿಸುವುದಾಗಿ ಘೋಷಣೆ ಮಾಡಿದ್ದರು. ಬಿಡುಗಡೆಗೆ 1 ತಿಂಗಳಷ್ಟೇ ಬಾಕಿಯಿದ್ದು, ನೂತನ ಸಿಎನ್‌ಜಿ ಚಾಲಿತ ಮೋಟಾರ್‌ಸೈಕಲ್‌ ಮತ್ತೊಮ್ಮೆ ಪರೀಕ್ಷಾರ್ಥ ಸಂಚಾರವನ್ನು ನಡೆಸುವಾಗ ಕಂಡುಬಂದಿದ್ದು, ಆ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

Bajaj CNG Bike Spied Again Launch In June 18 Expected Price And Mileage

ಈ ಬಾರಿ ಎರಡು ರೂಪಾಂತರ (ವೇರಿಯೆಂಟ್)ಗಳನ್ನು ಪ್ರಾಯೋಗಿಕ ಓಡಾಟದ ವೇಳೆಯಲ್ಲಿ ಗುರುತಿಸಲಾಗಿದೆ. ಸಾಮಾನ್ಯ ಮಾದರಿಯು ಸಿಂಗಲ್-ಪೀಸ್ ಸೀಟ್, ಹ್ಯಾಂಡ್ ಗಾರ್ಡ್‌ಗಳು, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಎಲ್‌ಇಡಿ ಹೆಡ್‌ಲೈಟ್‌ಗಳು, ಬಲ್ಬ್ ಇಂಡಿಕೇಟರ್‌ಗಳು, ಎಂಜಿನ್ ಸೈಡ್ ಲೆಗ್ ಗಾರ್ಡ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದೆ.

ಅಲ್ಲದೆ, ಸಿಂಗಲ್ ಚಾನಲ್ ಎಬಿಎಸ್‌ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಕೂಡ ಒಳಗೊಂಡಿದೆ. ಪರೀಕ್ಷಾರ್ಥ ಸಂಚಾರವನ್ನು ನಡೆಸಿದ ಮತ್ತೊಂದು ಮಾದರಿಯು ಸಹ ಹೆಚ್ಚು ಅತ್ಯಾಧುನಿಕವಾಗಿದ್ದು, ಕಾಂಪ್ಯಾಕ್ಟ್ ವಿಂಡ್‌ಸ್ಕ್ರೀನ್ ಮತ್ತು ಸ್ಲೀಕ್ ಮಿರರ್ ಅನ್ನು ಪಡೆದಿದೆ. ಇದರ ಬಹುತೇಕ ವಿನ್ಯಾಸ (ಡಿಸೈನ್) ಬಜಾಜ್ ಸಿಟಿ125ಎಕ್ಸ್ ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುತ್ತದೆ.

Bajaj CNG Bike Spied Again Launch In June 18 Expected Price And Mileage

ಬಜಾಜ್ ಆಟೋ (Bajaj Auto) ಸಿಎನ್‌ಜಿ ಬೈಕ್‌ಗೆ 'ಪ್ಲಾಟಿನಾ' ಎಂಬ ಹೆಸರನ್ನು ಇಡಬಹುದು. ಬ್ರೂಜರ್ ಇ101 ಕೋಡ್ ನೇವ್ (ಸಂಕೇತ ನಾಮ) ಪಡೆದಿರುವ ಮೋಟಾರ್‌ಸೈಕಲ್‌ವೊಂದನ್ನು ಅಂತಿಮ ಹಂತದಲ್ಲಿ ವಿನ್ಯಾಸಗೊಳಿಸುತ್ತಿದೆ ಎಂದು 2023ರ ಅಕ್ಟೋಬರ್‌ನಲ್ಲಿಯೇ ವಿವಿಧ ಮಾಧ್ಯಮಗಳು ವರದಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗೆ ಹೋಲಿಸಿದರೆ, ಸಿಎನ್‌ಜಿ ಬೈಕ್‌ಗಳು ಕೊಂಚ ಅಧಿಕ ದರವನ್ನು ಪಡೆದಿರಬಹುದು ಎನ್ನಲಾಗಿದೆ.

ಸಿಎನ್‌ಜಿ ಬೈಕ್ (CNG Bike) ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸವು ಭಿನ್ನವಿರಲಿದ್ದು, ಈ ಕಾರಣಕ್ಕೆ ಬೆಲೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ನೂತನ ಮೋಟಾರ್‌ಸೈಕಲ್‌ ಸರಿ ಸುಮಾರು ರೂ.80 ಸಾವಿರ ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಪ್ರತಿ ಕೆಜಿಗೆ 70 ಕಿಲೋಮೀಟರ್‌ಗೂ ಹೆಚ್ಚಿನ ಮೈಲೇಜ್ ಕೊಡಬಹುದು ಎಂದು ಹೇಳಲಾಗಿದೆ.

Bajaj CNG Bike Spied Again Launch In June 18 Expected Price And Mileage

ಬಜಾಜ್ ಕಂಪನಿಯು ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಗತಿಯನ್ನು ಸಾಧಿಸಿದೆ. ಅದೇ ರೀತಿಯ ಬೆಳವಣಿಗೆಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸುವ ಆಸಕ್ತಿಯನ್ನು ಹೊಂದಿದೆ. ಇದರಿಂದಾಗಿ ಸಾಮಾನ್ಯ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲು ಅಣಿಯಾಗುತ್ತಿದೆ. ಈ ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಬಂದ ಮೇಲೆ ಹೊಸ ಯುಗಕ್ಕೆ ನಾಂದಿಯಾದರೂ ಅಚ್ಚರಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Acko Drive

More from DriveSpark

Article Published On: Monday, May 13, 2024, 13:31 [IST]
English summary
Bajaj cng bike spied again launch in june 18 expected price and mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+