ಬಜಾಜ್ CNG ಬೈಕ್ ವೇರಿಯೆಂಟ್‌ಗಳ ವಿವರಗಳು: ಅಗ್ಗವಾಗಿ ಸಿಗುವ ರೂಪಾಂತರವುದು!
ಬಜಾಜ್ ಆಟೋ ಕಂಪನಿಯು ವಿಶ್ವದ ಮೊದಲ CNG ಚಾಲಿತ ಫ್ರೀಡಂ 125 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಇದು CNG ಹಾಗೂ ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲದು, ಇದಕ್ಕಾಗಿ ಕಂಪನಿ ಬೈಕ್‌ನಲ್ಲಿ 2 ಕೆ.ಜಿ CNG ಟ್ಯಾಂಕ್ ಮತ್ತು 2 ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ನೀಡಿದೆ. ಕಂಪನಿಯ ಪ್ರಕಾರ, CNG ಮೋಡ್‌ನಲ್ಲಿ 90 ಕಿ.ಮೀ ಮತ್ತು ಪೆಟ್ರೋಲ್‌ನಲ್ಲಿ 93.4 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕ್ ಒಟ್ಟು ಮೂರು ವೇರಿಯೆಂಟ್‌ಗಳನ್ನು ಹೊಂದಿದ್ದು, ಬೆಲೆ ರೂ.95,000 ದಿಂದ ಆರಂಭವಾಗುತ್ತದೆ. ಈ ಮೂರು ವೇರಿಯೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಬಜಾಜ್ ಫ್ರೀಡಂ ಡಿಸ್ಕ್ LED: ಇದು ಟಾಪ್ ವೇರಿಯೆಂಟ್ ಆಗಿದ್ದು, LED DRL ಗಳೊಂದಿಗೆ LED ಹೆಡ್ಲ್ಯಾಂಪ್ ಹೊಂದಿದೆ. ಕಂಬೈನ್ಡ್ ಬ್ರೇಕ್ ಸಿಸ್ಟಮ್(CBS)ನೊಂದಿಗೆ 240 mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 130 mm ಹಿಂಭಾಗದ ಡ್ರಮ್ ಬ್ರೇಕ್ ಪಡೆಯುವ ಮೂಲಕ ಇತರ ಎರಡು ವೇರಿಯೆಂಟ್‌ಗಳಿಗಿಂತ ಬೆಲೆ ಹೆಚ್ಚಳವನ್ನು ಹೊಂದಿದ್ದೆ. ಇದರ ಬೆಲೆಯು 1.10 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಇದೆ.

ಬಜಾಜ್ ಫ್ರೀಡಂ ಡ್ರಮ್ LED: ಇದು ಮಧ್ಯಮ ವೇರಿಯಂಟ್ ಆಗಿದ್ದು, ಟಾಪ್ ವೇರಿಯೆಂಟ್‌ನಂತೆಯೇ LED DRL ಗಳೊಂದಿಗೆ LED ಹೆಡ್ಲ್ಯಾಂಪ್ ಹೊಂದಿದೆ. ಮುಂಭಾಗದಲ್ಲಿ 130 mm ಡ್ರಮ್ ಬ್ರೇಕ್, ಹಿಂಭಾಗದಲ್ಲಿ CBS ನೊಂದಿಗೆ 130 mm ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಡಿಸ್ಕ್ ನೀಡದ ಕಾರಣ ತುಸು ಬೆಲೆ ಕಡಿಮೆ ಆಗಿದೆ, ಇದರ ಬೆಲೆಯು 1.05 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಇದೆ.
ಬಜಾಜ್ ಫ್ರೀಡಂ ಡ್ರಮ್: ಇದು ಎಂಟ್ರಿ ಲೆವೆಲ್ ಬೇಸ್ ವೇರಿಯೆಂಟ್ ಆಗಿದ್ದು, ಹ್ಯಾಲೋಜೆನ್ ಹೆಡ್‌ಲೈಟ್, 130 mm ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 mm CBS ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಮೇಲಿನ ಎರಡೂ ವೇರಿಯೆಂಟ್‌ಗಳಲ್ಲಿ ಸಿಗುವ ಕೆಲವು ಫೀಚರ್‌ಗಳನ್ನು ಈ ಬೇಸ್ ವೇರಿಯೆಂಟ್ ಕಳೆದುಕೊಳ್ಳುವ ಕಾರಣ ಇದರ ಬೆಲೆ ಕಡಿಮೆ ಇದೆ. ಇದರ ಬೆಲೆಯು ರೂ.95,000 (ದೆಹಲಿ ಎಕ್ಸ್ ಶೋರೂಂ) ಇದೆ.

3 ವೇರಿಯೆಂಟ್‌ಗಳಲ್ಲಿ ಸಾಮಾನ್ಯ ಸಂಗತಿಗಳು: ಕಂಪನಿಯ ಪ್ರಕಾರ ಬಜಾಜ್ ಫ್ರೀಡಂ 125 ಬೈಕ್, ಪ್ರತಿ ಕೆ.ಜಿ ಸಿಎನ್‌ಜಿಗೆ 102 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದರಲ್ಲಿ ಪೆಟ್ರೋಲ್ ಆಯ್ಕೆ ಕೂಡ ಇದ್ದು, ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ 65 ಕಿ.ಮೀ ಮೈಲೇಜ್ ನೀಡುತ್ತದೆ. ಒಮ್ಮೆ ಪೆಟ್ರೋಲ್ ಹಾಗೂ ಸಿಎನ್‌ಜಿ ಟ್ಯಾಂಕ್‌ಗಳನ್ನು ಪೂರ್ಣ ತುಂಬಿಸಿದರೆ ಸುಮಾರು 330 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
ಬೈಕ್‌ನಲ್ಲಿ ಸಿಎನ್‌ಜಿ ಖಾಲಿಯಾದರೆ ಪೆಟ್ರೋಲ್ ಅನ್ನು ಸಹಾಯಕ ಇಂಧನವಾಗಿ ಬಳಸಬಹುದು. ಅಲ್ಲಿಗೆ ವಾಸ್ತವಿಕವಾಗಿ ಈ ಬೈಕ್ ಸುಮಾರು 200 ಕಿ.ಮೀ ಮಾತ್ರ ಸಿಎನ್‌ಜಿ ಮೂಲಕ ಮೈಲೇಜ್ ಪಡೆಯಬಹುದು. ಹಾಗೆಯೇ 2 ಲೀಟರ್ ಪೆಟ್ರೋಲ್‌ನಿಂದ 130 ಕಿ.ಮೀ ಮೈಲೇಜ್ ಪಡೆಯಬಹುದು ಎಂಬುದನ್ನು ಗಮನಿಸಬೇಕು.

ಬಜಾಜ್ ಫ್ರೀಡಂ 125 ನಿರ್ವಹಣಾ ವೆಚ್ಚ: ಬೆಂಗಳೂರಿನಲ್ಲಿ ಪ್ರಸ್ತುತ ಸಿಎನ್‌ಜಿ ಬೆಲೆಯು ಪ್ರತಿ ಕೆ.ಜಿ.ಗೆ 82.5 ರೂ. ಇದ್ದು, ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಪರಿಗಣಿಸಿದರೆ, ಚಾಲನೆಯ ವೆಚ್ಚವು ಪ್ರತಿ ಕಿ.ಮೀ.ಗೆ ಸುಮಾರು 78 ಪೈಸೆ ಬೀಳುತ್ತದೆ. ನಿಮ್ಮ ಸರಾಸರಿ ಮಾಸಿಕ ಓಡಾಟವು 1000 ಕಿ.ಮೀ ಆಗಿದ್ದರೆ, ಪ್ರತಿ ತಿಂಗಳು ಸಿಎನ್‌ಜಿಗಾಗಿ ನಿಮಗೆ 780 ರೂ. ಖರ್ಚಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications