ಈಜಿಪ್ಟ್, ಕೊಲಂಬಿಯಾ‌ ಸೇರಿದಂತೆ 6 ದೇಶಗಳಲ್ಲಿ ಸದ್ದು ಮಾಡಲಿದೆ ಬಜಾಜ್‌ನ ಈ ಬೈಕ್‌: ಕಾರಣ ಏನು ಗೊತ್ತಾ?

ವಿಶ್ವದ ಮೊಟ್ಟಮೊದಲ ಸಿಎನ್‌ಜಿ ಬೈಕ್‌ ಅನ್ನು ಕೆಲವು ದಿನಗಳ ಹಿಂದೆಯಷ್ಟೇ ಬಜಾಜ್‌ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಈ ಮೂಲಕ ಸಿಎನ್‌ಜಿ ಬೈಕ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿರುವ ಬಜಾಜ್‌, ಈ ಕ್ಷೇತ್ರದಲ್ಲಿ ದೊಡ್ಡಣ್ಣನಾಗಿ ಮೆರೆಯಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಜಾಜ್‌ ಫ್ರೀಡಂ 125 ಸಿಎನ್‌ಜಿ ಬೈಕ್‌ ಇದಾಗಿದ್ದು ಈ ಬೈಕ್‌ನಲ್ಲಿ ಎರಡು ಲೀಟರ್‌ ಪೆಟ್ರೋಲ್‌ ಮತ್ತು ಎರಡು ಕೆಜಿ ಸಿಎನ್‌ಜಿಗಳನ್ನು ತುಂಬಬಹುದಾಗಿದೆ. ಇದರ ಸಹಾಯದಿಂದ ಸುಮಾರು 330 ಕಿಮೀ ವರೆಗೆ ಈ ಬೈಕ್‌ ರೇಂಜ್‌ ಅನ್ನು ಸಹ ನೀಡುತ್ತದೆ.

ಮಾಹಿತಿಗಳ ಪ್ರಕಾರ ಬಜಾಜ್‌ ಈ ಸಿಎನ್‌ಜಿ ಬೈಕ್‌ ಅನ್ನು ಇತರ ದೇಶಗಳಿಗೂ ರಫ್ತು ಮಾಡಲಿದೆ ಎಂದು ತಿಳಿದು ಬಂದಿದೆ. ಈ ಮೂಳಕ ಭಾರತೀಯ ಮೂಲದ ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಸದ್ಯದಲ್ಲೇ ಜಾಗತಿಕವಾಗಲಿದೆ. ಆದರೂ ಬಜಾಜ್‌ನ ಪ್ರಮುಖ ಗುರಿ ಭಾರತೀಯ ಮಾರುಕಟ್ಟೆಯಾಗಿರಲಿದ್ದು, ನಂತರದಲ್ಲಿ ಇಂಡೋನೇಷ್ಯಾ, ತಾಂನ್ಝಾನಿಯಾ, ಪೆರು, ಈಜಿಪ್ಟ್, ಬಾಂಗ್ಲಾದೇಶ ಮತ್ತು ಕೊಲಂಬಿಯಾ ದೇಶಗಳಲ್ಲಿ ತನ್ನ ಈ ಬೈಕ್‌ ಅನ್ನು ಮಾರಾಟ ಮಾಡಲಿದೆ ಎಂದು ತಿಳಿದು ಬಂದಿದೆ.

Bajaj to export Freedom 125 CNG bike to six countries

ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕಿನ ಬೆಲೆಯು ರೂ.95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷದವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಸಿಎನ್‌ಜಿ-ಚಾಲಿತ ಮೋಟಾರ್‌ಸೈಕಲ್ ಸಾಮಾನ್ಯ ಪೆಟ್ರೋಲ್ ಬೈಕಿಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಜಾಜ್ ಫ್ರೀಡಂ 125 ಬೈಕ್ ಡ್ರಮ್ (Freedom 125 CNG), ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ. ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ ಬಿಡುಗಡೆಯು ಇಂತಹ ತಂತ್ರಜ್ಞಾನವನ್ನು ಹೆಚ್ಚಿನ ಮಾದರಿಗಳಿಗೆ ಕೊಂಡೊಯ್ಯಲು ದಾರಿ ಮಾಡಿಕೊಂಡಿದೆ. ಜಾಜ್ ಫ್ರೀಡಮ್ ಒಂದು ಕಮ್ಯೂಟರ್-ಕ್ಲಾಸ್ ಮೋಟಾರ್‌ಸೈಕಲ್ ಆಗಿದ್ದು, ಸಿಎನ್‌ಜಿ ಟ್ಯಾಂಕ್ ಅನ್ನು ಒಳಗೊಂಡಿದೆ.

Bajaj to export Freedom 125 CNG bike to six countries

ಮುಖ್ಯವಾಗಿ ಈ ಬೈಕಿನ ಪವರ್‌ಟ್ರೇನ್‌ಗಾಗಿ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಮ್ ಬೈಕ್ 125ಸಿಸಿ ಎಂಜಿನ್ ಅನ್ನು ಹೊಂದಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕಿನ ಟ್ರೆಲ್ಲಿಸ್ ಫ್ರೇಮ್ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಫ್ರೀಡಮ್‌ನ ಸೀಟಿನ ಕೆಳಗೆ ಬಜಾಜ್ ಸಂಯೋಜಿಸಿದೆ.

2-ಲೀಟರ್ ಪೆಟ್ರೋಲ್ ಟ್ಯಾಂಕ್ ಸೀಟ್ ಸ್ವಲ್ಪ ಮುಂದೆ ಇರುತ್ತದೆ, ಮತ್ತು ಎರಡೂ ಟ್ಯಾಂಕ್‌ಗಳು ಒಟ್ಟಿಗೆ 330 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ. CNG ಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂ CNG ಗೆ 102 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುತ್ತದೆ. CNG ನಲ್ಲಿ ಚಾಲನೆಯಲ್ಲಿರುವಾಗ, ಫ್ರೀಡಮ್ ದೈನಂದಿನ ಚಾಲನೆಯ ವೆಚ್ಚವನ್ನು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ, 26 ಪ್ರತಿಶತದಷ್ಟು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

Bajaj to export Freedom 125 CNG bike to six countries

ಶುದ್ಧ-ಪೆಟ್ರೋಲ್ 125 cc ಮೋಟಾರ್‌ಸೈಕಲ್‌ಗೆ ಹೋಲಿಸಿದರೆ 5 ವರ್ಷಗಳಲ್ಲಿ 75,000 ರೂ.ವರೆಗೆ ಇಂಧನ ವೆಚ್ಚವನ್ನು ಉಳಿಸಲು ಮಾಲೀಕರಿಗೆ ಅನುವು ಮಾಡಿಕೊಡುತ್ತದೆ. ಇನ್ನು ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಾಗಿ ಬುಕ್ಕಿಂಗ್‌ಗಳು ಈಗ ತೆರೆದಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತವೆ, ಉಳಿದ ರಾಜ್ಯಗಳು ಹಂತ ಹಂತವಾಗಿ ಪ್ರಾರಂಭವಾಗುತ್ತದೆ.

ಬಜಾಜ್‌ನ ಮುಖ್ಯ ಅಧಿಕಾರಿಗಳು ಇಂದಿನ ಲಾಂಚ್‌ನಲ್ಲಿ ಈ ದಿನವನ್ನು ಒಂದು ಗೇಮ್‌ ಚೇಜಿಂಗ್ ದಿನ ಎಂದು ಕರೆದಿದ್ದಾರೆ. ಹಿಂದಿನ ಪೈಪೋಟಿಯನ್ನು ನೆನಪಿಸಿಕೊಳ್ಳುತ್ತಾ ಹೀರೋ ಹೋಂಡಾವನ್ನು ಮೀರಿಸುವ ಬಯಕೆಯನ್ನು ವ್ಯಕ್ತಪಡಿಸಿತು. "1997 ರಿಂದ ನಾವು ಹೀರೋ ಹೋಂಡಾಗೆ ಒಂದು ವಿಷಯವನ್ನು ಮರರಳಿಸಲು ಕಾಯುತ್ತಿದ್ದೇವೆ. ಯಾಕೆಂದರೆ ಅದು ಬಜಾಜ್ ಆಟೋವನ್ನು ಹೀರೋ ಹೋಂಡಾ ಹಿಂದಿಕ್ಕಿದ್ದ ವರ್ಷ. ಇಂದು ಫ್ರೀಡಂ ಬೈಕ್‌ನೊಂದಿಗೆ ಟೈಗರ್ ಜಿಂದಾ ಹೈ ಎಂಬ ಸಂದೇಶವಿದೆ" ಎಂದು ಅವರು ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 9, 2024, 13:19 [IST]
English summary
Bajaj to export freedom 125 cng bike to six countries
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+