BAJAJ CNG ಬೈಕ್ ಚಿತ್ರಗಳು ಸೋರಿಕೆ: ಬೆಲೆ ಕೇಳಿದರೆ ಶಾಕ್ ಆಗುವುದಂತೂ ಪಕ್ಕಾ!
ಭಾರತೀಯ ಬೈಕ್ ನಿರ್ಮಾಣ ಕಂಪನಿಯಾದ ಬಜಾಜ್, ಸದಾ ಒಂದಿಲ್ಲೊಂದು ರೀತಿಯಲ್ಲಿ ಟೆಕ್ನಾಲಜಿಯನ್ನು ಅಭಿವೃದ್ದಿ ಪಡಿಸುತ್ತಾ ಗ್ರಾಹಕರಿಗೆ ಹೆಚ್ಚಿನ ಅನುಭವವನ್ನು ಕೊಡಲು ಪ್ರಯತ್ನಿಸುತ್ತಲೇ ಇರುತ್ತದೆ. ಇದಕ್ಕೆ ಪ್ರಮುಖ ಸಾಕ್ಷಿ ಎಂದರೆ ಕೆಲವು ದಿನಗಳ ಹಿಂದೆಯಷ್ಟೇ ಬಂದ ಬಜಾಜ್ ಸಿಎನ್‌ಜಿ ಚಾಲಿತ ಬೈಕ್ ಅನ್ನು ಅಭಿವೃದ್ದಿ ಪಡಿಸುತ್ತಿರುವುದರ ಸುದ್ದಿ.
ಬಜಾಜ್ ಆಟೋ (Bajaj Auto) ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ (ಆಟೋ) ವಾಹನ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಆ ರೀತಿಯ ಪ್ರಗತಿಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದೆ ಎಂದು ವರದಿಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಸಿಎನ್‌ಜಿ ಬೈಕ್‌ಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು ಕಡಿಮೆಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

ಇದೀಗ ಬಜಾಜ್ ಸಿಎನ್‌ಜಿ (BAJAJ CNG) ಚಾಲಿತ ಬೈಕ್ ಬಗ್ಗೆ ಬಹು ದೊಡ್ಡ ಅಪ್‌ಡೇಟ್ ಒಂದು ಬಂದಿದ್ದು, ಇಂದಿನ ಈ ಲೇಖನದಲ್ಲಿ ಆ ಕುರಿತಾಗಿ ನೊಡಲಿದ್ದೇವೆ. ನಿಮಗೇನಾದರೂ ಇ ಕುರಿತಾಗಿ ಅಂದರೆ ಬಜಾಜ್ ಸಿಎನ್‌ಜಿ ಬೈಕ್‌ಗಳ ಕುರಿತಾಗಿ ಆಸಕ್ತಿ ಇದ್ದರೆ ಈ ಲೇಖನವನ್ನು ಕೊನೆಯ ವರೆಗೆ ಓದಿ.
ಬಜಾಜ್ ತನ್ನ ಸಿಎನ್‌ಜಿ ಚಾಲಿತ ಬೈಕ್‌ನ ಟೆಸ್ಟ್ ರನ್ ಮಾಡುತ್ತಿರುವ ವೇಳೆಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಈ ಕುರಿತಾದ ಚಿತ್ರಗಳೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಭಾರೀ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಬಜಾಜ್, ತನ್ನ ಹೊಸ ಸಿಎನ್‌ಜಿ ಬೈಕ್‌ಗೆ ಬ್ರೂಝರ್ ಎಂಬ ನಾಮಕರಣವನ್ನು ಮಾಡಲಿದೆ ಎಂದು ತಿಳಿದು ಬಂದಿದೆ.

ಬಜಾಜ್ ಸಿಎನ್‌ಜಿ ಆಯ್ಕೆಯನ್ನು 102cc, 115cc ಅಥವಾ 124cc ಎಂಜಿನ್‌ಗೆ ನೀಡಲಿದೆ. ಈ ಬೈಕ್ ಹೊಸ ಅಲಾಯ್ ವಿನ್ಯಾಸವನ್ನು ಹೊಂದಿರಲಿದ್ದು, ಬೈಕ್‌ಗೆ ಹ್ಯಾಂಡ್ ಗಾರ್ಡ್ ಸಹ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬೈಕ್‌ನ ಬೆಲೆಯ ಬಗ್ಗೆ ಎಲ್ಲರೂ ಕುತೂಹಲ ವ್ಯಕ್ತಪಡಿಸುತ್ತಿದ್ದು, ಬಜಾಜ್ ಪ್ಲಾಟಿನಾ ಬೈಕ್‌ನ ಬೆಲೆಯ ಆಸುಪಾಸಿನಲ್ಲಿ ಈ ಬೈಕ್ ಬೆಲೆಯೂ ಇರಲಿದೆ ಎನ್ನಲಾಗುತ್ತಿದೆ.
ಬಜಾಜ್ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೈಕ್ ಗಳು ಕೊಂಚ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣವೆಂದರೆ, ತಯಾರಿಕಾ ವೆಚ್ಚ ಹೆಚ್ಚಾಗಿರುವುದು ಎನ್ನಲಾಗಿದೆ. ಮುಂಬರಲಿರುವ ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ಕೊಂಚ ಭಿನ್ನವಿರಲಿದೆ. ಆದರೆ, ಸಿಎನ್‌ಜಿ ಬೈಕ್ ನಿರ್ವಹಣಾ ವೆಚ್ಚ ಕಡಿಮೆಯಿದ್ದು, ಹೆಚ್ಚಿನ ಮೈಲೇಜ್ ನೀಡುವುದರಿಂದ ಬೆಲೆ ಏರಿಕೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಸಿಎನ್‌ಜಿ ಬೈಕ್ ಬಿಡುಗಡೆಗೊಂಡರೆ ಕಂಪನಿ ಈ ವಿಭಾಗದಲ್ಲಿ ಮತ್ತಷ್ಟು ಬಲಗೊಳ್ಳಲಿದೆ. ಜೊತೆಗೆ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸಿಎನ್‌ಜಿ ಮೋಟಾರ್‌ಸೈಕಲ್‌ಗಳಿಂದ ಭಾರೀ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








