ಪೆಟ್ರೋಲ್‌ಗೆ ಹೇಳಿ ಗುಡ್‌ಬೈ: ವಿಶ್ವದ ಮೊದಲ ಬಜಾಜ್ ಸಿಎನ್‌ಜಿ ಬೈಕ್ ಜುಲೈ 5ಕ್ಕೆ ಅನಾವರಣ.. ಬೆಲೆ ಎಷ್ಟು?
ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ ಆಟೋ (Bajaj Auto) ಖ್ಯಾತಿಗಳಿಸಿದೆ. ಕಂಪನಿಯು ಮಾರಾಟಗೊಳಿಸುವ ಮೋಟಾರ್‌ಸೈಕಲ್‌ಗಳು, ನಿರೀಕ್ಷೆಗೂ ಮೀರಿದ ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಬಜಾಜ್ ಕಂಪನಿಯು ದೇಶದ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಮೊದಲ ಸಿಎನ್‌ಜಿ ಬೈಕ್ (World's First Cng Bike) ಅನ್ನು ತಯಾರಿಸುತ್ತಿದೆ. ಕಡೆಗೂ ನೂತನ ಮೋಟಾರ್‌ಸೈಕಲ್ ಅನಾವರಣಗೊಳಿಸುವ ದಿನಾಂಕವನ್ನು ನಿಗದಿಪಡಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಜುಲೈ 5ರಂದು ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಬೈಕ್‌ನ್ನು ಪರಿಚಯಿಸಲಾಗುವುದು ಎಂದು ಬಜಾಜ್ ಆಟೋ ಘೋಷಿಸಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ (Minister for Road Transport & Highway) ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಹೊಚ್ಚ ಹೊಸ ಮೋಟಾರ್‌ಸೈಕಲ್‌ನ್ನು ಪ್ರದರ್ಶಿಸಲಾಗುತ್ತದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ನೂತನ ಬಜಾಜ್ ಸಿಎನ್‌ಜಿ ಚಾಲಿತ ಮೋಟಾರ್‌ಸೈಕಲ್ ಎನ್ನಲಾದ ಮಾದರಿ (ಮಾಡೆಲ್) ಸಾಕಷ್ಟು ಬಾರಿ ಪರೀಕ್ಷಾರ್ಥ ಸಂಚಾರವನ್ನು ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಕಳೆದ ತಿಂಗಳು ಈ ಬೈಕ್‌ನ ಎರಡು ರೂಪಾಂತರ (ವೇರಿಯೆಂಟ್)ಗಳನ್ನು ಪ್ರಾಯೋಗಿಕ ಓಡಾಟದ ವೇಳೆ ಗುರುತಿಸಲಾಗಿತ್ತು. ಸಾಮಾನ್ಯ ಆವೃತ್ತಿಯು ಸಿಂಗಲ್-ಪೀಸ್ ಸೀಟ್, ಹ್ಯಾಂಡ್ ಗಾರ್ಡ್‌ಗಳು, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಎಲ್‌ಇಡಿ ಹೆಡ್‌ಲೈಟ್‌ಗಳು, ಬಲ್ಬ್ ಇಂಡಿಕೇಟರ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಂಜಿನ್ ಸೈಡ್ ಲೆಗ್ ಗಾರ್ಡ್‌ಗಳನ್ನು ಹೊಂದಿತ್ತು.
ಮತ್ತೊಂದು ಮಾದರಿಯು ಅತ್ಯಾಧುನಿಕವಾಗಿತ್ತು. ಕಾಂಪ್ಯಾಕ್ಟ್ ವಿಂಡ್‌ಸ್ಕ್ರೀನ್ ಹಾಗೂ ಸ್ಲೀಕ್ ಮಿರರ್‌ನ್ನು ಪಡೆದಿತ್ತು. ಇದರ ಬಹುತೇಕ ವಿನ್ಯಾಸ (ಡಿಸೈನ್) ಬಜಾಜ್ ಸಿಟಿ125ಎಕ್ಸ್ ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುತ್ತಿತ್ತು. ಬಜಾಜ್ ಕಂಪನಿಯು ಸಿಎನ್‌ಜಿ ಬೈಕ್‌ಗೆ 'ಪ್ಲಾಟಿನಾ' ಎಂಬ ಹೆಸರನ್ನು ಇಡಬಹುದು ಎನ್ನಲಾಗಿದೆ. ಆದಾಗ್ಯೂ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗೆ ಹೋಲಿಸಿದರೆ, ಸಿಎನ್‌ಜಿ ಬೈಕ್ ಸ್ವಲ್ಪ ಅಧಿಕ ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸವು ಭಿನ್ನವಿರಲಿದ್ದು, ಈ ಕಾರಣಕ್ಕೆ ಹೆಚ್ಚಿನ ದರವಿರಬಹುದು ಎಂದು ಅಂದಾಜಿಸಲಾಗಿದೆ. ನೂತನ ಬೈಕ್ ರೂ.80,000 (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯಬಹುದು ಎನ್ನಲಾಗಿದೆ.
ಹೊಸ ಬಜಾಜ್ ಸಿಎನ್‌ಜಿ ಬೈಕ್ ಪ್ರತಿ ಕೆಜಿಗೆ 70 ಕಿಲೋಮೀಟರ್‌ಗೂ ಹೆಚ್ಚಿನ ಮೈಲೇಜ್ ಕೊಡಬಹುದು ಎಂದು ತಿಳಿದುಬಂದಿದ್ದು, ಜುಲೈ 5ಕ್ಕೆ ಇಂಧನ ದಕ್ಷತೆ ಎಷ್ಟಿರಲಿದೆ ಎಂಬ ಅಂಶವು ಬಹಿರಂಗಗೊಳ್ಳಲಿದೆ. ಬಜಾಜ್ ಕಂಪನಿಯು ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ (Three Wheeler) ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಸಾಧಿಸಿದೆ. ಅದನ್ನು ದ್ವಿಚಕ್ರ ವಾಹನ (Two-Wheeler) ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದ್ದು, ಸಿಎನ್‌ಜಿ ಬೈಕ್ ಮೂಲಕ ಸಾಕಾರಗೊಳಿಸಿಕೊಳ್ಳಲು ನಿರ್ಧರಿಸಿದಂತೆ ತೋರುತ್ತಿದೆ.

ನೂತನ ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ಬಜಾಜ್ ಕಂಪನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತಯಾರಿಸುತ್ತಿದೆ. ಸಿಎನ್‌ಜಿ ಇಂಧನ ಪೆಟ್ರೋಲ್‌ಗಿಂತ ಅಗ್ಗವಾಗಿರುವುದರಿಂದ ಜನರಿಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ. ಈ ಬೈಕ್ ಮಾರಾಟ ದೇಶೀಯ ಮಾರುಕಟ್ಟೆಯಲ್ಲಿ ಶುರುವಾದ ಮೇಲೆ ಹೊಸ ಯುಗಕ್ಕೆ ನಾಂದಿಯಾದರೂ ಅಚ್ಚರಿಯಿಲ್ಲ. ಇನ್ನೂ 15 ದಿನಗಳಲ್ಲಿ ಹೊಸ ಸಿಎನ್‌ಜಿ ಮೋಟಾರ್‌ಸೈಕಲ್ ಬಗ್ಗೆ ಇರುವಂತಹ ಎಲ್ಲ ಗೊಂದಲಗಳಿಗೂ ತೆರೆಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








