Bajaj CNG: ಬಜಾಜ್ CNG ಬೈಕ್ ಹೊಸ ಮಾಹಿತಿ ಬಹಿರಂಗ! ನೀಲನಕ್ಷೆ ಸೋರಿಕೆ!
ಬಜಾಜ್ ಆಟೋನ ಮುಂಬರಲಿರುವ CNG ಮೋಟಾರ್‌ಸೈಕಲ್, ಪೆಟ್ರೋಲ್-ಸಿಎನ್‌ಜಿ ಸೆಟಪ್ ಹೊಂದಿರುವ ವಿಶ್ವದ ಮೊದಲ ಬೈಕ್ ಆಗಿದ್ದು, ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದೆ. ಕಂಪನಿಯು ಈ ಬೈಕನ್ನು ಜೂನ್ 18 ರಂದು ಬಿಡುಗಡೆ ಮಾಡಲಿದೆ. ಆದರೇ ಅದಕ್ಕೂ ಮುನ್ನವೇ ಹೊಸ ಮಾಹಿತಿ ಬಹಿರಂಗಗೊಂಡಿದ್ದು, ಅದರ ಹೊಸ ವಿವರಗಳು ಇಲ್ಲಿವೆ.
ನೀಲನಕ್ಷೆ ಸೋರಿಕೆ: ಬಜಾಜ್ CNG ಬೈಕಿನ ನೀಲನಕ್ಷೆಗಳು (blueprints) ಹೊರಬಿದ್ದಿವೆ. ಈ ಫೋಟೋಗಳು ಹೊಸ CNG ಮೋಟಾರ್‌ಸೈಕಲ್‌ನ ಚಾಸಿಸ್ ವಿನ್ಯಾಸ ವಿವರಗಳು, CNG ಮತ್ತು ಪೆಟ್ರೋಲ್ ಟ್ಯಾಂಕ್‌ನ ಸ್ಥಾನ ಮತ್ತು ಒಟ್ಟಾರೆ ರಚನೆಯನ್ನು ಬಹಿರಂಗಪಡಿಸಿವೆ. ನೀಲನಕ್ಷೆಗಳ ಪ್ರಕಾರ, ಬಜಾಜ್ CNG ಬೈಕ್ CNG ಸಿಲಿಂಡರ್ ಅನ್ನು ಹಿಡಿದಿಡಲು ಬ್ರೇಸ್‌ಗಳೊಂದಿಗೆ ಡಬಲ್ ಕ್ರೇಡಲ್ ಫ್ರೇಮ್ ಅನ್ನು ಹೊಂದಿದೆ. CNG ತುಂಬಲು ನಾಜಿಲ್ ಅನ್ನು ಮುಂಭಾಗದ ತುದಿಯಲ್ಲಿ ಇರಿಸಲಾಗಿದೆ. ಅಲ್ಲಿಯೇ ಪ್ರಾಥಮಿಕ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ನೋಡಬಹುದು. ಪೆಟ್ರೋಲ್ ಟ್ಯಾಂಕ್ ಒಂದು ಸಣ್ಣ ಘಟಕದಂತೆ ಕಾಣುತ್ತಿದ್ದು, ಇಂಧನ ಚಾಲಿತ ಬೈಕುಗಳಂತೆಯೇ ಮೇಲ್ಭಾಗದಲ್ಲಿ ಮುಚ್ಚಳವನ್ನು ಇರಿಸಲಾಗಿದೆ.

ಈ ಬೈಕ್‌ಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್ ಟ್ಯಾಂಕ್‌ಗಳಿಗೆ ಸ್ಥಳಾವಕಾಶ ಕಲ್ಪಿಸಲು 'ಸ್ಲೋಪರ್ ಎಂಜಿನ್' ಅನ್ನು ನೀಡಲಾಗಿದೆ. ಎಂಜಿನ್ ಹೆಡ್ ಸಾಮಾನ್ಯಕ್ಕಿಂತ ಕಡಿಮೆ ಸ್ಥಾನದಲ್ಲಿ (ಹಳೆಯ ಹೀರೋ ಸ್ಪ್ಲೆಂಡರ್ ನಂತೆ) ಕೇಂದ್ರೀಕೃತವಾಗಿರುವುದರಿಂದ, ಮೇಲ್ಭಾಗಕ್ಕಿಂತ ಮುಂಭಾಗವನ್ನು ಹೆಚ್ಚು ಸೂಚಿಸುತ್ತದೆ. ಇದು ಸಿಎನ್‌ಜಿ ಟ್ಯಾಂಕ್ ಅನ್ನು ಇರಿಸಲು ಸ್ಥಳಾವಕಾಶವನ್ನು ನೀಡುತ್ತದೆ.
ಈ ಚಿತ್ರಗಳು ಮುಖ್ಯ ಫ್ರೇಮ್‌ಗೆ ವೆಲ್ಡ್ ಮಾಡಲಾದ ವೃತ್ತಾಕಾರದ ಬ್ರೇಸ್‌ಗಳು ಮತ್ತು ಸಿಎನ್‌ಜಿ ಟ್ಯಾಂಕ್ ಅನ್ನು ಹಿಡಿದಿಡಲು ಸಬ್ ಫ್ರೇಮ್ ಸೇರಿದಂತೆ ಚಾಸಿಸ್‌ನ ಇತರ ವಿವರಗಳನ್ನು ಸಹ ಬಹಿರಂಗಪಡಿಸಿವೆ. ಒಟ್ಟಾರೆ ತೂಕಕ್ಕೆ ಮೂರು ಪ್ರಮುಖ ಅಂಶಗಳು ಕೊಡುಗೆ ನೀಡುವುದರಿಂದ (ಎಂಜಿನ್, ಸಿಎನ್‌ಜಿ ಸಿಲಿಂಡರ್ ಮತ್ತು ಫ್ಯೂಯಲ್ ಟ್ಯಾಂಕ್) ಬೈಕಿನ ತೂಕ ವಿತರಣೆಯ ಸುತ್ತಲೂ ಬಜಾಜ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಉಳಿದಂತೆ ಬಜಾಜ್ ಕಂಪನಿಯು ಈ ಮುಂಬರಲಿರುವ ಸಿಎನ್‌ಜಿ ಬೈಕಿನ ಹಾರ್ಡ್ ವೇರ್ ಕುರಿತು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬ್‌ಗಳು, ಫ್ರಂಟ್ ಡಿಸ್ಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಸೆಟಪ್ ಸೇರಿದಂತೆ ಇತರ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಿದೆ. ಇನ್ನೇನು ಕಂಪನಿಯು ಈ ಬೈಕನ್ನು ಜೂನ್ 18 ರಂದು ಬಿಡುಗಡೆ ಮಾಡಲು ಸಜ್ಜಾಗಿದ್ದು, ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಬೈಕ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಇದು ವರದಾನವಾಗಲಿದೆ. ಪ್ರತಿ ಕೆ.ಜಿ.ಗೆ ಸಿಎನ್‌ಜಿ ಬೆಲೆಯು ಲೀಟರ್ ಪೆಟ್ರೋಲ್‌ಗಿಂತ ಸುಮಾರು 25 ರಿಂದ 30 ರೂ.ಗಳಷ್ಟು ಅಗ್ಗವಾಗಿದೆ.
ಬೆಲೆ ತುಸು ಹೆಚ್ಚಿರಬಹುದು: ಬಜಾಜ್ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೈಕ್‌ಗಳು ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ. ಮುಂಬರಲಿರುವ ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ಕೊಂಚ ಭಿನ್ನವಿರಲಿದ್ದು, ಇದರಿಂದ ತಯಾರಿಕಾ ವೆಚ್ಚ ಹೆಚ್ಚಾಗಲಿದೆಯಂತೆ. ಆದರೆ, ನಿರ್ವಹಣಾ ವೆಚ್ಚ ಅಗ್ಗವಾಗಿರುವುದರಿಂದ ದರ ಏರಿಕೆ ಪ್ರಮಾಣ ಗ್ರಾಹಕರ ಮೇಲೆ ಅಷ್ಟೇನು ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಹೊಸ ಸಿಎನ್‌ಜಿ ಬೈಕ್ ರೂ.80,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು. ಪ್ರತಿ ಕೆ.ಜಿಗೆ 70 ಕಿಲೋಮೀಟರ್‌ಗೂ ಅಧಿಕ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಆದರೆ, ಈ ಕುರಿತು ಬಜಾಜ್ ಕಂಪನಿಯಿಂದ ಯಾವುದೇ ಅಧಿಕೃತ ವಿವರಗಳು ಬಹಿರಂಗಗೊಂಡಿಲ್ಲ. ಆದರೂ ಈ ಸಿಎನ್‌ಜಿ ಮೋಟಾರ್‌ಸೈಕಲ್ ಕುರಿತ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








