370 ರೂ.ಖರ್ಚು ಮಾಡಿದರೆ 330 KM ಓಡುವ ಬಜಾಜ್‌ CNG ಬೈಕ್‌: 'ಟೈಗರ್‌ ಜಿಂದಾ ಹೈ' ಹೀರೋಗೆ ಡೈರೆಕ್ಟ್‌ ಮೆಸೇಜ್‌!

ವಿಶ್ವದ ಮೊತ್ತ ಮೊದಲ ಸಿಎನ್‌ಜಿ ಬೈಕ್‌ ಅನ್ನು ಬಜಾಜ್‌ ಇಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಈ ಮೂಲಕ ದ್ವಿಚಕ್ರ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಸಾಮಾನ್ಯ ಜನರೂ ಖರೀದಿಸುವ ರೀತಿಯಲ್ಲಿ ಅತೀ ಕಡಿಮೆ ಬೆಲೆಗೆ ಈ ಬೈಕ್‌ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿರುವ ಬಜಾಜ್‌ಹೀರೋ ಸೇರಿದಂತೆ ತನ್ನ ಎಲ್ಲಾ ಎದುರಾಳಿಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಚ್ಚರಿಕೆಯನ್ನು ರವಾನಿಸಿದೆ. ಇನ್ನು ಈ ಬೈಕಿಗೆ ಬಜಾಜ್ ಫ್ರೀಡಂ 125 (Bajaj Freedom 125) ಎಂಬ ಹೆಸರನ್ನು ನೀಡಲಾಗಿದೆ.

ಬಜಾಜ್‌ನ ಮುಖ್ಯ ಅಧಿಕಾರಿಗಳು ಇಂದಿನ ಲಾಂಚ್‌ನಲ್ಲಿ ಈ ದಿನವನ್ನು ಒಂದು ಗೇಮ್‌ ಚೇಜಿಂಗ್ ದಿನ ಎಂದು ಕರೆದಿದ್ದಾರೆ. ಹಿಂದಿನ ಪೈಪೋಟಿಯನ್ನು ನೆನಪಿಸಿಕೊಳ್ಳುತ್ತಾ ಹೀರೋ ಹೋಂಡಾವನ್ನು ಮೀರಿಸುವ ಬಯಕೆಯನ್ನು ವ್ಯಕ್ತಪಡಿಸಿತು. "1997 ರಿಂದ ನಾವು ಹೀರೋ ಹೋಂಡಾಗೆ ಒಂದು ವಿಷಯವನ್ನು ಮರರಳಿಸಲು ಕಾಯುತ್ತಿದ್ದೇವೆ. ಯಾಕೆಂದರೆ ಅದು ಬಜಾಜ್ ಆಟೋವನ್ನು ಹೀರೋ ಹೋಂಡಾ ಹಿಂದಿಕ್ಕಿದ್ದ ವರ್ಷ. ಇಂದು ಫ್ರೀಡಂ ಬೈಕ್‌ನೊಂದಿಗೆ ಟೈಗರ್ ಜಿಂದಾ ಹೈ ಎಂಬ ಸಂದೇಶವಿದೆ" ಎಂದು ಅವರು ಹೇಳಿದರು.

Bajaj Freedom 125 CNG 330 Kilometer Range On Full Tanks

ಹೀರೋ ಹೋಂಡಾ ಎಂದು ಪ್ರಾರಂಭವಾದ ಹೀರೋ ಮೋಟೋಕಾರ್ಪ್, ಭಾರತದ ಹೀರೋ ಸೈಕಲ್ಸ್ ಮತ್ತು ಜಪಾನ್‌ನ ಹೋಂಡಾ ನಡುವಿನ ಜಂಟಿ ಉದ್ಯಮವಾಗಿತ್ತು. ಕಂಪನಿಯು ತನ್ನ ಹಿಂದಿನ ಜಪಾನೀ ಪ್ರವರ್ತಕರಾದ ಹೋಂಡಾ ಕಂಪನಿಯಿಂದ ನಿರ್ಗಮಿಸಿದ ನಂತರ 2011 ರಲ್ಲಿ ಹೀರೋ ಪ್ರತ್ಯೇಕವಾಗಿ ಮೋಟಾರ್‌ ಸೈಕಲ್‌ಗಳನ್ನು ನಿರ್ಮಿಸಲು ಆರಂಭ ಮಾಡಿತ್ತು.

ಇನ್ನು ಬಜಾಜ್‌ನ ಹೊಸ ಸಿಎನ್‌ಜಿ ಬೈಕ್‌ ಬಗ್ಗೆ ನೋಡುವುದಾದರೆ, ಬಜಾಜ್‌ ಫ್ರೀಡಮ್ ಬೈಕ್ ಒಂದು ಬಟನ್ ಒತ್ತಿದರೆ ಚಲಿಸುವಾಗ ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸಬಹುದು. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಇದೀಗ ಮೊದಲ ಬಾರಿಗೆ ಮಾತ್ರ, ಭಾರತಕ್ಕೆ ಮಾತ್ರವಲ್ಲದೆ ವಿಶ್ವಲ್ಲೇ ಇದೇ ಮೊದಲು ಆಗಿದೆ.(Bajaj Freedom 125 CNG)

Bajaj Freedom 125 CNG 330 Kilometer Range On Full Tanks

ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕಿನ ಬೆಲೆಯು ರೂ.95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷದವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಸಿಎನ್‌ಜಿ-ಚಾಲಿತ ಮೋಟಾರ್‌ಸೈಕಲ್ ಸಾಮಾನ್ಯ ಪೆಟ್ರೋಲ್ ಬೈಕಿಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ. ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ ಬಿಡುಗಡೆಯು ಇಂತಹ ತಂತ್ರಜ್ಞಾನವನ್ನು ಹೆಚ್ಚಿನ ಮಾದರಿಗಳಿಗೆ ಕೊಂಡೊಯ್ಯಲು ದಾರಿ ಮಾಡಿಕೊಂಡಿದೆ. ಜಾಜ್ ಫ್ರೀಡಮ್ ಒಂದು ಕಮ್ಯೂಟರ್-ಕ್ಲಾಸ್ ಮೋಟಾರ್‌ಸೈಕಲ್ ಆಗಿದ್ದು, ಸಿಎನ್‌ಜಿ ಟ್ಯಾಂಕ್ ಅನ್ನು ಒಳಗೊಂಡಿದೆ.

ಮುಖ್ಯವಾಗಿ ಈ ಬೈಕಿನ ಪವರ್‌ಟ್ರೇನ್‌ಗಾಗಿ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಮ್ ಬೈಕ್ 125ಸಿಸಿ ಎಂಜಿನ್ ಅನ್ನು ಹೊಂದಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕಿನ ಟ್ರೆಲ್ಲಿಸ್ ಫ್ರೇಮ್ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಫ್ರೀಡಮ್‌ನ ಸೀಟಿನ ಕೆಳಗೆ ಬಜಾಜ್ ಸಂಯೋಜಿಸಿದೆ.

2-ಲೀಟರ್ ಪೆಟ್ರೋಲ್ ಟ್ಯಾಂಕ್ ಸೀಟ್ ಸ್ವಲ್ಪ ಮುಂದೆ ಇರುತ್ತದೆ, ಮತ್ತು ಎರಡೂ ಟ್ಯಾಂಕ್‌ಗಳು ಒಟ್ಟಿಗೆ 330 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ. CNG ಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂ CNG ಗೆ 102 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುತ್ತದೆ. CNG ನಲ್ಲಿ ಚಾಲನೆಯಲ್ಲಿರುವಾಗ, ಫ್ರೀಡಮ್ ದೈನಂದಿನ ಚಾಲನೆಯ ವೆಚ್ಚವನ್ನು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ, 26 ಪ್ರತಿಶತದಷ್ಟು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 6, 2024, 11:00 [IST]
English summary
Bajaj freedom 125 cng 330 kilometer range on full tanks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+