ಹೊಸ ಬಜಾಜ್ ಬೈಕ್ ಅನಾವರಣ: ಕೇವಲ 1 ಲಕ್ಷದೊಳಗೆ ಬಿಡುಗಡೆ ಸಾಧ್ಯತೆ, ವಿಶೇಷತೆಗಳೇನು?

ಕಮ್ಯೂಟರ್ ಸೆಗ್ಮೆಂಟ್ ದ್ವಿಚಕ್ರವಾಹನ ವಿಭಾಗದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಕಂಪನಿಯು ತನ್ನ ಪಲ್ಸರ್ ಶ್ರೇಣಿಯಲ್ಲಿ ಹೊಸ ಅಪ್‌ಡೇಟ್‌ನೊಂದಿಗೆ ಬಂದಿದೆ. ತನ್ನ ಬಹುನಿರೀಕ್ಷಿತ ಪಲ್ಸರ್ ಎನ್‌ - 125 ಮೋಟಾರ್‌ ಸೈಕಲ್ ಅನ್ನು ಈ ಬಾರಿ ಸ್ಪೋರ್ಟಿ ಡಿಸೈನ್‌ನೊಂದಿಗೆ ಅನಾವರಣಗೊಳಿಸಿದೆ. ಶೀಘ್ರದಲ್ಲೆ 125 ಸಿಸಿ ಸ್ಪೋರ್ಟಿ ಕಮ್ಯೂಟರ್ ಪಲ್ಸರ್ ಎನ್-125 ಬೈಕ್ ಅನ್ನು ಕಂಪನಿಯು ಬಿಡುಗಡೆಗೊಳಿಸಲಿದೆ. ಅದಕ್ಕೂ ಮುಂಚಿತವಾಗಿ, ಕಂಪನಿಯು ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ಮೋಟಾರ್‌ ಸೈಕಲ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ವಿಡಿಯೋದಲ್ಲಿ ಮೋಟಾರ್ಸೈಕಲ್ ಕುರಿತಂತೆ ಸಾಕಷ್ಟು ವಿವರಗಳು ಬಹಿರಂಗಗೊಂಡಿವೆ.

ಅನಾವರಣಗೊಂಡ ಹೊಸ ಬಜಾಜ್ ಪಲ್ಸರ್ ಎನ್ - 125 ವೀಡಿಯೊದ ಪ್ರಕಾರ, ಈ ಬೈಕ್ ಅನೇಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಬೈಕ್ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಬಜಾಜ್‌ನ ಪ್ರಸ್ತುತ ಸರಣಿಯಲ್ಲಿರುವ ಇತರ ಯಾವುದೇ ಪಲ್ಸರ್‌ಗಿಂತ ಭಿನ್ನವಾಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

bajaj-pulsar-n125-motorcycle-unveiled-in-india

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಮೋಟಾರ್ ಸೈಕಲ್ ಸಂಪೂರ್ಣವಾಗಿ ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ. ಇದು ಬಹುಶಃ ಬ್ಲೂಟೂತ್ ಸಂಪರ್ಕವನ್ನು ಸಹ ಪಡೆದಿರಬಹುದಾಗಿದೆ, ಈಗಿನ ಪ್ರತಿಸ್ಪರ್ಧಿ ಮೋಟಾರ್‌ ಸೈಕಲ್‌ಗಳಂತೆ ಹಲವು ಆಧುನಿಕ ಡಿಜಿಟಲ್ ಫೀಚರ್‌ಗಳನ್ನು ಹೊಂದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೆಯೇ ಮೈಲೇಜ್ ಕೂಡ ಪ್ರತಿ ಲೀಟರ್‌ಗೆ 60 ಕಿ.ಮೀಗಿಂತ ಹೆಚ್ಚು ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಹೊಸ ಬಜಾಜ್ ಪಲ್ಸರ್ ಎನ್ - 125 ಬೈಕ್ ಎಂಜಿನ್ ಬಗ್ಗೆ ಹೇಳುವುದಾದ್ರೆ, ಅನಾವರಣದ ವಿಡಿಯೋದಲ್ಲಿ ಕಾಣುವಂತೆ ಮೇಲ್ನೋಟಕ್ಕೆ ಇದು ಈಗಿರುವ ಪಲ್ಸರ್ ಎನ್‌ಎಸ್ 125 ಬೈಕಿನಂತೆಯೇ ಕಾಣುತ್ತಿದ್ದು, ಸ್ಟೀಲ್ ಪೆರಿಮೀಟರ್ ಫ್ರೇಮ್, ಅಲಾಯ್ ವೀಲ್‌ಗಳು ಮತ್ತು ಡಿಸ್ಕ್ ಬ್ರೇಕ್‌ನಂತಹ ಎಲಿಮೆಂಟ್‌ಗಳನ್ನು ಬಹುಬೇಡಿಕೆಯ ಪಲ್ಸರ್ ಎನ್150 ಮೋಟಾರ್‌ ಸೈಕಲ್‌ನಿಂದ ಎರವಲು ಪಡೆಯಲಾಗಿದೆ ಎಂದು ತೋರುತ್ತಿದೆ.

bajaj-pulsar-n125-motorcycle-unveiled-in-india

ಡಿಸೈನ್ ಬಗ್ಗೆ ಹೇಳುವುದಾದ್ರೆ ವೀಡಿಯೊದಲ್ಲಿ ಪ್ರದರ್ಶಿಸಲಾದ ಹನಿಕೋಂಬ್ ಶೈಲಿಯ ಗ್ರಾಫಿಕ್ಸ್ ಹೊಂದಿದ್ದು, ಹೆಡ್ ಲ್ಯಾಂಪ್ ವಿಭಾಗವು ಮಸ್ಕುಲರ್ ಹಾಗೂ ಚೂಪಾದ ವಿನ್ಯಾಸವನ್ನು ಹೊಂದಿದೆ. ಸಮತಲವಾಗಿ ಜೋಡಿಸಲಾದ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಬೈಕ್‌ಗೆ ಸ್ಟೈಲಿಷ್ ಲುಕ್ ನೀಡಿವೆ. ಸ್ಪ್ಲಿಟ್ ಸೀಟ್‌ಗಳು ಹಾಗೂ ಅದರ ಎತ್ತರವಾದ ಡಿಸೈನ್ 125 ಸಿಸಿ ಸೆಗ್ಮೆಂಟಿನಲ್ಲಿ ಈವರೆಗೆ ಯಾವ ಬ್ರಾಂಡ್‌ ನೀಡದಂತಹ ಆಕರ್ಷಕ ಲುಕ್ ಪಡೆದುಕೊಂಡಿದೆ.

ಮುಂಭಾಗದ ಫೋರ್ಕ್‌ಗಳು ಪ್ಲಾಸ್ಟಿಕ್ ಕವರ್ ಅನ್ನು ಪಡೆದಿವೆ, ಆದರೆ ಮಲ್ಟಿ ಲೇಯರ್ ಮುಂಭಾಗದ ಫೆಂಡರ್ ಅದರ ಮಸ್ಕುಲರ್ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ. ಇದಲ್ಲದೆ, ತೀಕ್ಷ್ಣವಾದ ವಿಸ್ತರಣೆಗಳೊಂದಿಗೆ ಡಿಸೈನ್ ಮಾಡಲಾದ ಇಂಧನ ಟ್ಯಾಂಕ್ ಕೂಡ ಆಕರ್ಷಕವಾಗಿದೆ, ಚೂಪಾದ ಹಿಂಭಾಗದ ಮೇಲೆ ಕುಳಿತಿರುವ ಸ್ಪ್ಲಿಟ್ ಶೈಲಿಯ ಆಸನವು ಗ್ರಾಬ್ ರೈಲ್‌ಗಳೊಂದಿಗೆ ಬೈಕಿನ ಸ್ಪೋರ್ಟಿ ನೋಟವನ್ನು ಇನ್ನಷ್ಟು ಹೆಚ್ಚಿಸಿದೆ.

ಒಟ್ಟಾರೆ ಈ ಮೋಟಾರ್‌ ಸೈಕಲ್ ಈವೆರೆಗೆ ಬಜಾಜ್ ಶ್ರೇಣಿಯಲ್ಲಿ ಕಾಣಸಿಗದ ಹೊಸ ಸ್ಪೋರ್ಟಿ ಲುಕ್‌ನೊಂದಿಗೆ ಅನಾವರಣಗೊಂಡಿದೆ. ಹಾಗೆಯೇ ತನ್ನ ವಿಭಾಗದಲ್ಲಿ ಅಂದರೆ 125 ಸಿಸಿ ಸೆಗ್ಮೆಂಟಿನಲ್ಲಿ ಪ್ರತಿಸ್ಪರ್ಧಿ ಮೋಟಾರ್‌ ಸೈಕಲ್‌ಗಳಲ್ಲಿ ಕಾಣಸಿಗದ ಸ್ಟೈಲಿಷ್ ಡಿಸೈನ್ ಪಡೆದುಕೊಂಡಿದೆ. ಈ ಮೋಟಾರ್‌ ಸೈಕಲ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ತನ್ನ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲಿದೆಯೇ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 17, 2024, 18:19 [IST]
English summary
Bajaj pulsar n125 motorcycle unveiled in india
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+