ಬಜಾಜ್‌ನ ಹೊಸ 250cc ಬೈಕ್‌ನ ಟೀಸರ್‌ ಬಿಡುಗಡೆ: ಕೆಟಿಎಂ, ಟಿವಿಎಸ್‌ ಎದೆಯಲ್ಲಿ ನಡುಕ ಶುರು!

ಭಾರತೀಯ ಬಜಾಜ್‌ ಪ್ರೇಮಿಗಳು ಬಹುದಿನದಿಂದ ಕಾಯುತ್ತಿದ್ದ ಸುದಿನ ಕೊನೆಗೂ ಹತ್ತಿರವಾಗುತ್ತಿದೆ. ಬಜಾಜ್‌ನ ಬಹುನಿರೀಕ್ಷಿತ ಬೈಕ್‌ ಆದ ಎನ್‌೨೫೦ ನಾಳೆ ಲಾಂಚ್‌ ಆಗಲಿದ್ದು, ಲಾಂಚ್‌ಗೆ ಒಂದು ದಿನ ಮುಂಚಿತವಾಗಿ ಕಂಪನಿ ಈ ಬೈಕ್‌ನ ಟೀಸರ್‌ ಅನ್ನು ಬಿಡುಗಡೆ ಮಾಡಿದ್ದು, ಇದು ಬಜಾಜ್‌ ಪ್ರೇಮಿಗಳ ಮುಖದಲ್ಲಿ ಸಂತಸವನ್ನು ತುಂಬಿದೆ.

ಬಜಾಜ್‌ ತನ್ನ ಪಲ್ಸರ್‌ ಬೈಕ್‌ನ ಔದ್ಯೋಗಿಕ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೊಸ ಬಜಾಜ್‌ ಪಲ್ಸರ್‌ N250 ಬೈಕ್‌ನ ಟೀಸರ್ ಅನ್ನು ಲಾಂಚ್ ಮಾಡಿದೆ. ಟೀಸರ್ ಬಿಡುಗಡೆಯಾದ ಕೆಲವೇ ಸಮಯಗಳಲ್ಲಿ ಸಾವಿರಾರು ಲೈಕ್‌ಗಳ ಸುರಿ ಮಳೆಯಾಗಿದ್ದು ಎಲ್ಲರೂ ತಮ್ಮ ನಿರೀಕ್ಷೆಗಳನ್ನು ವಿಡಿಯೋದ ಕಾಮೆಂಟ್‌ ಸೆಕ್ಷನ್‌ನಲ್ಲಿ ಹರಿಬಿಡುತ್ತಿದ್ದಾರೆ.

Bajaj Pulsar N250 Teaser Released Ahead Of Its launch

ಬಜಾಜ್‌ ಬಿಡುಗಡೆಮಾಡಿದ ಟೀಸರ್‌ನಲ್ಲಿ ಕೆಂಪು ಮತ್ತು ಸಿಲ್ವರ್‌ ಇನ್ಸರ್ಟ್‌ಗಳಿರು ಬೈಕ್‌ನ ಮುಂಭಾಗ ಕಾಣಬಹುದಾಗಿದೆ. ಇದು ಪಲ್ಸರ್‌ N160 ಯನ್ನು ಹೋಲುತ್ತಿದ್ದು, ಅದಕ್ಕಿಂತ ಕೊಂಚ ಹೆಚ್ಚು ಮಸ್ಕುಲರ್‌ ಲುಕ್‌ನೊಂದಿಗೆ ಮಾರುಕಟ್ಟೆಗೆ ಕಾಲಿಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬೈಕ್ನಲ್ಲಿ ಇನ್ನೂ ಏನೇನು ವಿಶೇಷತೆಗಳಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೆಲವು ಸಮಯಗಳ ಹಿಂದೆ ಬಜಾಜ್‌ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ N160 ಎಂಬ ನೇಕೆಡ್‌ ಸ್ಟ್ರೀಟ್‌ ಬೈಕ್‌ ಅನ್ನು ಲಾಂಚ್ ಮಾಡಿತ್ತು. ಆಕರ್ಷಕ ಅಗ್ರೆಸಿವ್‌ ವಿನ್ಯಾಸ ಮತ್ತು ಉತ್ತಮ ಪರ್ಫಾಮೆನ್ಸ್‌ ಕಾಂಬೋ ಜೊತೆ ರಸ್ತೆಗಿಳಿದ ಈ ಬೈಕ್‌ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಭಾರತೀಯರ ಹಾಟ್‌ ಫೇವರೀಟ್‌ ಆಗಿತ್ತು. ಮುಂಭಾಗದಲ್ಲಿ ಆಕರ್ಷಕ ಎಲ್‌ಇಡಿ ಲೈಟ್‌ನ ಹೆಡ್‌ಲ್ಯಾಂಪ್‌ ಜೊತೆ ಬಂದ ಈ ಬೈಕ್‌, ಆಧುನಿಕ ಫೀಚರ್‌ಗಳನ್ನು ಸಹ ಹೊಂದಿತ್ತು.

ಇದೀಗ ಇದೇ ಬೈಕ್‌ನ 250 ಸಿಸಿ ಆವೃತ್ತಿಯನ್ನು ಬಜಾಜ್‌ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದ್ದು ಈ ಬೈಕ್‌ನಲ್ಲಿ ಟ್ರಾಕ್ಷನ್ ಕಂಟ್ರೋಲ್‌ ಸಹ ಇರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಟ್ರಾಕ್ಷನ್‌ ಕಂಟ್ರೋಲ್‌ ಪಡೆಯುತ್ತಿರುವ ಬಜಾಜ್‌ನ ಮೊದಲ ಬೈಕ್ ಎಂಬ ಹೆಗ್ಗಳಿಕೆ ‌ ಈ ಬಜಾಜ್‌ N250 (BAJAJ Pulsar N250) ಪಡೆದುಕೊಳ್ಳಲಿದೆ.

ಇದರ ಜೊತೆ ಈ ಬೈಕ್‌ ಇನ್ನೂ ಹಲವಾರು ಆಧುನಿಕ ಫೀಚರ್‌ಗಳನ್ನು ಪಡೆದುಕೊಳ್ಳಲಿದ್ದು, ಅದರಲ್ಲಿ ಪ್ರಮುಖವಾದುದು ಎಬಿಎಸ್‌ ಮೋಡ್‌. ಮಾಹಿತಿಗಳ ಪ್ರಕಾರ ಇದರಲ್ಲಿ ಎಬಿಎಸ್‌ ಮೋಡ್‌ ಸಹ ಇರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದ್ದು, ಹಲವಾರು ಬಾರಿ ಈ ಬೈಕ್‌ ಅನ್ನು ಕಂಪನಿ ಟೆಸ್ಟ್‌ರೈಡ್‌ ಮಾಡುವ ವೇಳೆ ಕಂಡು ಬಂದಿದೆ.

Bajaj Pulsar N250 Teaser Released Ahead Of Its launch

ಸದ್ಯ ಭಾರತದಲ್ಲಿರುವ N160 ಬಗ್ಗೆ ನೊಡುವುದಾದರೆ, ಹೊಸ ಅಪ್‌ಡೇಟ್‌ ಭಾಗವಾಗಿ ಬಜಾಜ್ ಪಲ್ಸರ್ N160 ನಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ LCD ಕ್ಲಸ್ಟರ್ ನೀಡಲಾಗಿದೆ. ಇದು ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಪ್ರಯಾಣದಲ್ಲಿರುವಾಗ ಈ ಇಂಟರ್ಫೇಸ್ ಮೂಲಕ ಕಾರ್ಯನಿರ್ವಹಿಸಲು ಎಡ ಸ್ವಿಚ್‌ಗಿಯರ್‌ನಲ್ಲಿ ಹೊಸ ಮೋಡ್ ಬಟನ್ ನೀಡಲಾಗಿದೆ.

ಬ್ಲೂಟೂತ್ ಸಂಪರ್ಕದ ಜೊತೆಗೆ, ಬಳಕೆದಾರರು ಈಗ ತಮ್ಮ ಸ್ಮಾರ್ಟ್‌ಫೋನ್ ಅನ್ನು ಪಲ್ಸರ್ N160 ನೊಂದಿಗೆ ಸಂಪರ್ಕಿಸಬಹುದು. ಈ ಮೂಲಕ ನೀವು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಬಹುದು, ಮೊಬೈಲ್ ನೋಟಿಫಿಕೇಷನ್ ಅಲರ್ಟ್, ಮೊಬೈಲ್ ಸಿಗ್ನಲ್ ಸ್ಟ್ರೆಂತ್ ಮತ್ತು ಬ್ಯಾಟರಿ ಲೆವಲ್ ಅನ್ನು ನೋಡಬಹುದು. ಹಾಗೆಯೇ ಗೇರ್ ಇಂಟಿಕೇಟರ್, ಕ್ವಿಕ್ ಫ್ಯೂಯಲ್ ಎಕಾನಮಿ, ಆವರೇಜ್ ಫ್ಯೂಯಲ್ ಎಕಾನಮಿನಮಿಗಳ ಬಗ್ಗೆ ತಿಳಿದುಕೊಳ್ಳಬಹುದು.

Bajaj Pulsar N250 Teaser Released Ahead Of Its launch

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 9, 2024, 10:45 [IST]
English summary
Bajaj pulsar n250 teaser released ahead of its launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+