ಹೌದು, ನಿಮ್ಮ ಊಹೆ ನಿಜ: ಹೊಸ ಬಜಾಜ್‌ ಪಲ್ಸರ್‌ NS400 ಬೆಲೆ ಎರಡು ಲಕ್ಷದೊಳಗೆ ಇರಲಿದೆಯಂತೆ!

ಭಾರತದಲ್ಲಿ ಬಜಾಜ್‌ ಪಲ್ಸರ್‌ ಬೈಕ್‌ ಸರಣಿಯನ್ನು ಇಷ್ಟ ಪಡದೇ ಇರುವವರು ತೀರಾ ವಿರಳ ಎನ್ನಬಹುದು. 21 ನೇಶತಮಾನದ ಆರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಬೈಕ್‌, ದಶಕಗಳೇ ಕಳೆದರೂ ಹಲವಾರು ರೂಪದಲ್ಲಿ ಬದಲಾಗುತ್ತಿದ್ದರೂ ಭಾರತೀಯ ಯುವಕರ ರಕ್ತದಲ್ಲಿ ಬೆರೆತು ಹೋಗಿದೆ ಎನ್ನಬಹುದು.

ಇದೀಗ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್‌ ತನ್ನ ಬ್ರಾಂಡ್‌ ನ್ಯೂ ಪಲ್ಸರ್‌ NS400 (Bajaj Pulsar NS400) ಬೈಕ್‌ ಅನ್ನು ಲಾಂಚ್‌ ಮಾಡಲಿದ್ದು, ಇದು ಎಲ್ಲರೂ ನಿರೀಕ್ಷಿಸುತ್ತಿದ್ದ ಬಹುದೊಡ್ಡ ಲಾಂಚ್ ಆಗಲಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಬಜಾಜ್‌ ಪಲ್ಸರ್‌ ಎನ್‌ಎಸ್ 200 ಭಾರತೀಯ ಮಾರುಕಟ್ಟೆಯಲ್ಲಿದ್ದು, ಇದಕ್ಕಿಂತ ಹೆಚ್ಚು ಅಗ್ರಸಿವ್‌, ಸ್ಟೈಲಿಶ್‌ ಮತ್ತು ಪವರ್‌ಫುಲ್‌ ಆದ ಪಲ್ಸರ್‌ ಇದಾಗಿರಲಿದೆ.

Bajaj Pulsar NS400 Will Launch At Under 2 Lakh Positioned Below Dominar 400 Report Says

ಇನ್ನು ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಬಜಾಜ್‌ ಈ ಹೊಸ ಪಲ್ಸರ್‌ NS400 ಅನ್ನು ಡಾಮಿನಾರ್‌ 400 ನಂತರದ ಸ್ಥಾನದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದ್ದು ಇದರ ಬೆಲೆ ಡಾಮಿನಾರ್‌ಗಿಂತಲೂ ಕಡಿಮೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಬೈಕ್‌ನ ಬೆಲೆಯೂ ಸಹ ಸುಮಾರು 2 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಇರಲಿದೆ ಎನ್ನಲಾಗುತ್ತಿದೆ.

ಇನ್ನುಳಿದ ವಿಚಾರಗಳೆಂದರೆ ಈ ಬೈಕ್‌ ಸುಮಾರು 193 ಕೆಜಿ ಗಿಂತಲೂ ಕಡಿಮೆ ಇರಲಿದ್ದು, ಇದರಿಂದ ಡಾಮಿನಾರ್‌ಗಿಂತಲೂ ತೂಕದಲ್ಲಿ ಕಡಿಮೆ ಇರಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯನ್ನು ಕಂಡಿತು ಎನ್ನಬಹುದು.

Bajaj Pulsar NS400 Will Launch At Under 2 Lakh Positioned Below Dominar 400 Report Says

ಮಾರುಕಟ್ಟೆಯಲ್ಲಿ ಹಲವು ಹೊಸ ಬೈಕುಗಳ ಆಗಮನಗಳ ಬಳಿಕ ಅದರ ಜೊತೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಈ ನಡುವೆ ಬಜಾಜ್ ಆಟೋ ಭಾರತದಲ್ಲಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಹಲವಾರು ಹೊಸ ಬೈಕುಗಳು ಮತ್ತು ಸ್ಕೂಟರ್‌ಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ.

ಮಾರುಕಟ್ಟೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಜಾಜ್‌ ಗೆ ಒಂದು ಗೇಮ್‌ ಚೇಂಜರ್‌ನ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಇದೀಗ ಬಜಾಜ್ ಕಂಪನಿಯು ಅಂತಹ ಹೊಸ ಒಂದು ಮಾದರಿ ಪಲ್ಸರ್ 400 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಡೊಮಿನಾರ್‌ಗಿಂತಲೂ ಹೆಚ್ಚು ಬಜೆಟ್ ಸ್ನೇಹಿಯಾಗಿದ್ದು, ಕೆಲವು ದಿನಗಳ ಹಿಂದೆ ಬಜಾಜ್ ಪಲ್ಸರ್ 400 (Bajaj Pulsar 400) ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿತ್ತು.

Bajaj Pulsar NS400 Will Launch At Under 2 Lakh Positioned Below Dominar 400 Report Says

ಟೀಸರ್ ನಲ್ಲಿ ಈ ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗವಾಗಿದೆ. ಇದರ ಪ್ರಕಾರ, ಈ ವರ್ಷದ ಮೇ 3 ರಂದು ಬಿಡುಗಡೆಯಾಗಲಿದೆ. ಟೀಸರ್ ವೀಡಿಯೊವು ಹೊಸದಾಗಿ ಬಿಡುಗಡೆಯಾದ ಪಲ್ಸರ್ N250ಗೆ ಹೋಲುವ ಬೈಕ್‌ನ ಅಲಾಯ್ ವ್ಹೀಲ್ ಗಳನ್ನು ತೋರಿಸುತ್ತದೆ. ಪಲ್ಸರ್ 400 ಮಾದರಿಯು ಹಿಂಭಾಗದ ವಿಭಾಗದಲ್ಲಿ ಅಳವಡಿಸಲಾಗಿರುವ ಯುನಿಟ್ ಬದಲಿಗೆ ಅಂಡರ್ ಬೆಲ್ಲಿ ಎಕ್ಸಾಸ್ಟ್ನೊಂದಿಗೆ ಬರುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, April 28, 2024, 8:30 [IST]
English summary
Bajaj pulsar ns400 will launch at under 2 lakh positioned below dominar 400 report says
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+