Ather: ಬೆಂಗಳೂರಿನ ಎಥರ್‌ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಬುಕ್ಕಿಂಗ್ ಆರಂಭ, ರೂ.999 ಪಾವತಿಸಿದರೆ ಸಾಕು!

ಬೆಂಗಳೂರು ಮೂಲದ ಎಥರ್‌ ಎನರ್ಜಿ (Ather Energy) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, 450 ಸರಣಿ ಇ-ಸ್ಕೂಟರ್ ಗಳನ್ನು ಮಾರಾಟಗೊಳಿಸುವ ಮೂಲಕ ಮನೆಮಾತಾಗಿದೆ. ಕೆಲವೇ ದಿನಗಳಲ್ಲಿ 'ರಿಜ್ಟಾ' ಹೆಸರಿನ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್​​ವೊಂದನ್ನು ಮಾರುಕಟ್ಟೆಗೆ ತರಲಿದೆ.

ಎಥರ್‌ ಎನರ್ಜಿ ಹೊಚ್ಚ ಹೊಸ ರಿಜ್ಟಾ (Rizta) ಎಲೆಕ್ಟ್ರಿಕ್ ಸ್ಕೂಟರ್​​ನ್ನು ಏಪ್ರಿಲ್ 6 ರಂದು ಪರಿಚಯಿಸಲಿದ್ದು, ಸದ್ಯ ಪ್ರಿ ಬುಕ್ಕಿಂಗ್ ಶುರು ಮಾಡಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.999 ಮುಂಗಡ ಹಣವನ್ನು ಪಾವತಿಸುವ ಮೂಲಕ ಈ ಸ್ಕೂಟರ್​​ನ್ನು ಕಾಯ್ದಿರಿಸಬಹುದು.

Bengaluru Ather Rizta Electric Scooter Pre-Booking Begins

ನೂತನ ಎಥರ್‌ ರಿಜ್ಟಾ (Ather Rizta) ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ. ಈಗಾಗಲೇ ಟೀಸರ್ ಚಿತ್ರಗಳಿಂದ ಅದು ಸ್ಪಷ್ಟವಾಗಿದೆ. ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ದೊಡ್ಡದಾದ ಆಸನ (ಸೀಟ್) ವ್ಯವಸ್ಥೆಯನ್ನು ಪಡೆದಿರಲಿದೆ. ಇದರೊಟ್ಟಿಗೆ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿರುವ ಸಾಧ್ಯತೆಯಿದ್ದು, ಗೂಗಲ್ ಮ್ಯಾಪ್, ಒಟಿಎ ಅಪ್ಡೇಟ್, ಚಾರ್ಜಿಂಗ್ ಸಾಕೆಟ್ ಹಾಗೂ ಎಲ್ಇಡಿ ಲೈಟಿಂಗ್ ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎರಡು ಆಕರ್ಷಕ ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದ್ದು, 2.9 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ನೊಂದಿಗೂ ದೊರೆಯಬಹುದು ಎಂದು ಹೇಳಲಾಗಿದೆ. ಆದರೆ, ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಎಥರ್‌ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 'ಸ್ವೀಕರ್'ಗಳನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಈ ಸ್ಕೂಟರ್ ಅನಾವರಣಗೊಂಡ ಮೇಲೆಯೇ ಎಲ್ಲದಕ್ಕೂ ಅಧಿಕೃತವಾಗಿ ತೆರೆಬೀಳಲಿದೆ.

Bengaluru Ather Rizta Electric Scooter Pre-Booking Begins

ಕಳೆದ ಫೆಬ್ರವರಿ 23ರಿಂದ ಎಥರ್ ಕಂಪನಿಯ ನೂತನ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಶೋರೂಂ ತಲುವುದಕ್ಕೆ ಶುರುವಾಗಿದ್ದವು. ಇದು ವಿನ್ಯಾಸದಲ್ಲಿ ಕೊಂಚ ಬದಲಾವಣೆಯನ್ನು ಹೊಂದಿದ್ದು, ರೂ.1.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 3.7 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 157 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.

ಹೊಸ ಎಥರ್ 450 ಅಪೆಕ್ಸ್ (Ather 450 Apex) ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಉಪಯೋಗಿಸಿರುವ ಪಿಎಂಎಸ್ ಮೋಟಾರ್ 7 ಕೆಡಬ್ಲ್ಯೂ (9.3 ಬಿಹೆಚ್‍ಪಿ) ಗರಿಷ್ಠ ಪವರ್ (ಶಕ್ತಿ) ಉತ್ಪಾದಿಸುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದ್ದು, ನವೀನವಾದ 'ವ್ರಾಪ್ ಪ್ಲಸ್' ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿದೆ.

ಎಥರ್ ಕಂಪನಿಯ ಆರಂಭಿಕ ಆವೃತ್ತಿಯಾಗಿರುವ '450ಎಸ್' ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನಲ್ಲಿ ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರಲ್ಲಿ 2.9 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಭರ್ತಿ ಚಾರ್ಜ್ ನಲ್ಲಿ 115 ಕಿ.ಮೀ ಓಡುತ್ತದೆ. 3.9 ಸೆಕೆಂಡುಗಳಲ್ಲಿ 0 - 40 ಕೆಎಂಪಿಹೆಚ್ ವೇಗವನ್ನು ಹೊಂದಲಿದ್ದು, ಗಂಟೆಗೆ 90 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ.

ಎಥರ್ 450ಎಕ್ಸ್ (Ather 450X) ಎಲೆಕ್ಟ್ರಿಕ್ ಸ್ಕೂಟರ್ ರೂ.1.38 ಲಕ್ಷದಿಂದ ರೂ.1.45 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 2.9 ಕೆಡಬ್ಲ್ಯೂಹೆಚ್ ಹಾಗೂ 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಕ್ರಮವಾಗಿ ಭರ್ತಿ ಚಾರ್ಜ್ ನಲ್ಲಿ 115 ಕಿ.ಮೀ ರಿಂದ 145 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 29, 2024, 18:06 [IST]
English summary
Bengaluru ather rizta electric scooter pre booking begins
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+