2.5 ಲಕ್ಷದೊಳಗೆ ಸ್ಟೈಲಿಶ್‌, ಅಗ್ರೆಸಿವ್‌ ಬೈಕ್‌ ಬೇಕೆ?: ಇದಕ್ಕಿಂತ ಒಳ್ಳೆ ಬೈಕ್‌ಗಳು ಸಿಗಲು ಸಾಧ್ಯವಿಲ್ಲ!

ನಾವು 2024 ಕ್ಕೆ ಕಾಲಿಟ್ಟು ನಾಲ್ಕನೇ ಒಂದು ಭಾಗ ಮುಗಿಯುತ್ತಾ ಬಂದಿದೆ. ಇಷ್ಟರಲ್ಲಾಗಲೆ ಭಾರತದಲ್ಲಿ ಹಲವಾರು ಬೈಕ್‌ಗಳು ಕಾಲಿಟ್ಟಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಬೈಕ್‌ ನಿರ್ಮಾಣ ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆಮಾಡುತ್ತಿದೆ. ಇಂದಿನ ಈ ಲೇಕನದಲ್ಲಿ 2.5 ಲಕ್ಷದೊಳಗೆ ಮಾರುಕಟ್ಟೆಯಲ್ಲಿ ಸಿಕ್ಕುವ ಟಾಪ್ ಬೈಕ್‌ಗಳನ್ನು ನೋಡೋಣ ಬನ್ನಿ.

1. ಅಪಾಚ್ಚಿ RTR 310 (ಬೆಲೆ: ₹2.42 ಲಕ್ಷ ಎಕ್ಸ್‌ಶೋ ರೂಮ್‌): ಹೊಸ ಟಿವಿಎಸ್ ಅಪಾಚೆ RTR 310 (TVS Apache RTR 310) ಬೈಕಿನಲ್ಲಿ ಪರಿಚಿತ 312.2cc, RR 310 ಮತ್ತು BMWನ G 310 ಲೈನ್‌ಅಪ್‌ನಲ್ಲಿ ಕಂಡುಬರುವ ರಿವರ್ಸ್-ಇನ್‌ಲೈನ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9700rpm ನಲ್ಲಿ 35bhp ಮತ್ತು 6650rpm ನಲ್ಲಿ 28.7Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Best Bikes Under 2 5 Lakhs In India TVS Apache RTR 310 Honda CB 300R And More

2. ಹೋಂಡಾ ಸಿಬCB300 R ( ₹2.40 ಲಕ್ಷ ಎಕ್ಸ್‌ಶೋ ರೂಮ್): ಹೊಸ ಹೋಂಡಾ ಸಿಬಿ300ಆರ್ (Honda CB 300R) ಬೈಕಿನಲ್ಲಿ 286 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ 31.14 ಬಿಹೆಚ್‍ಪಿ ಪವರ್ ಮತ್ತು 27.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ.

3. ಕೆಟಿಎಂ ಅಡ್ವೆಂಚರ್‌ 250 ( ₹2.45 ಲಕ್ಷ ಎಕ್ಸ್‌ಶೋ ರೂಮ್): 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕಿನಲ್ಲಿ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯನ್ನು ಹೊರತುಪಡಿಸಿ, ಎಂಜಿನ್ ಮತ್ತು ಪರ್ಫಾಮೆನ್ಸ್ ಎರಡು ಬೈಕ್ ಮಾದರಿಗಳು ತಮ್ಮದೆ ಆದ ಹಲವು ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿವೆ. ಹೊಸ 250 ಅಡ್ವೆಂಚರ್ ಬೈಕ್ ಮಾದರಿಯಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹೊಸ ಎಂಜಿನ್ ಲಿಕ್ವಿಡ್ ಕೂಲ್ಡ್ ಮಾದರಿಯಾಗಿದೆ.

Best Bikes Under 2 5 Lakhs In India TVS Apache RTR 310 Honda CB 300R And More

ಆಫ್ ರೋಡ್ ಮತ್ತು ಅಡ್ವೆಂಚರ್ ಟೂರರ್ ರೈಡಿಂಗ್ ಕೌಶಲ್ಯಕ್ಕಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ 250 ಅಡ್ವೆಂಚರ್ ಬೈಕ್ ಮಾದರಿಯಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಇದು 30-ಬಿಎಚ್‌ಪಿ ಮತ್ತು 24-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಸ್ಮೂತ್ ರೈಡಿಂಗ್ ಸೌಲಭ್ಯಕ್ಕಾಗಿ ಪವರ್ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

4. ರಾಯಲ್‌ ಎನ್‌ಫೀಲ್ಡ್‌ ಮೀಟಿಯರ್‌ 350 (ಬೆಲೆ: ₹2.03 ಲಕ್ಷ ಎಕ್ಸ್‌ಶೋ ರೂಮ್): ನವೀಕರಿಸಿದ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಅದೇ 349.34cc, ಸಿಂಗಲ್-ಸಿಲಿಂಡರ್, J-ಸೀರೀಸ್ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗೆ ಶಕ್ತಿ ನೀಡುವ ಏರ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 6,100rpm ನಲ್ಲಿ 19.94bhp ಪವರ್ ಮತ್ತು 4,000rpm ನಲ್ಲಿ 27Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

Best Bikes Under 2 5 Lakhs In India TVS Apache RTR 310 Honda CB 300R And More

5. ಯಮಾಹ R15 (ಬೆಲೆ: ₹1.82 ಲಕ್ಷ ಎಕ್ಸ್‌ಶೋ ರೂಮ್): ಹೊಸ Yamaha R 14 V 4 ಬೈಕಿನಲ್ಲಿ 155 ಸಿಸಿ, ಲಿಕ್ವಿಡ್-ಕೂಲ್ಡ್, ಎಸ್‌ಒಎಚ್‌ಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಕಾನ್ಸ್ಟಂಟ್ ಮೆಶ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 1, 2024, 16:25 [IST]
English summary
Best bikes under 2 5 lakhs in india tvs apache rtr 310 honda cb 300r and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+