ಒಂದಕ್ಕಿಂತ ಒಂದು ಅದ್ಭುತ: ಒಂದು ಲಕ್ಷ ಬಜೆಟ್‌ ಒಳಗೆ 70 - 90 ಕಿಮೀ ಮೈಲೇಜ್‌ ಕೊಡುವ ಬೈಕ್‌ಗಳು

ನಾವು ಭಾರತೀಯರಿಗೆ ಬೈಕ್‌ನ ಪರ್ಫಾಮೆನ್ಸ್‌ಗಿಂತಲೂ ಮೈಲೇಜ್‌ ಮುಖ್ಯ. ಬಹುತೇಕ ಮಧ್ಯಮ ವರ್ಗದ ಕುಟುಂಬ ಇರುವ ಭಾರತದಲ್ಲಿ ಸಾಧಾರಣ ಬೈಕ್‌ಗಳ ಬಳಕೆಯೇ ಹೆಚ್ಚು. ಹೆಚ್ಚು ಬಾಳಿಕೆ ಬರುವ, ಕಡಿಮೆ ಬೆಲೆಯ ಮತ್ತು ಹೆಚ್ಚುಮೈಲೇಜ್‌ ಕೊಡುವ ಬೈಕ್‌ಗಳ ಕುರಿತಾಗಿ ಇಂದಿನ ಈ ಲೇಖನದಲ್ಲಿ ನೋಡೋಣ.

ಹೀರೋ HF ಡೀಲಕ್ಸ್: ಈ ಹೊಸ ಹೀರೋ HF ಡೀಲಕ್ಸ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.60,760 ಆಗಿದೆ. ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಈ ಬೈಕ್ ಹೆಚ್ಚು ಜನಪ್ರಿಯವಾಗಿದೆ. 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನ ನವೀಕರಿಸಿದ ಆವೃತ್ತಿಯೊಂದಿಗೆ Hero HF ಡೀಲಕ್ಸ್ ಬೈಕಿನಲ್ಲಿ ನೀಡಲಾಗಿದೆ. ಈ ಎಂಜಿನ್ ಈಗ 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದ್ದು ಸುಮಾರು ೭೦ ಕಿಮೀ ಮೈಲೇಜ್‌ ನೀಡುತ್ತದೆ.

Best Bikes Under Rs 1 Lakh

ಬಜಾಜ್‌ ಪ್ಲಾಟಿನಾ: ಬಜಾಜ್ ಪ್ಲಾಟಿನಾ 110 (Bajaj Platina 110) ಬೈಕ್ ರೂ.70,451 ದಿಂದ 80,012 ಎಕ್ಸ್ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಇದು 115.45 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 8.6 ಪಿಎಸ್ ಗರಿಷ್ಠ ಪವರ್ ಮತ್ತು 9.81 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಈ ಪ್ಲಾಟಿನಾ 110 ಮೋಟಾರ್‌ಸೈಕಲ್, 70 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 123 ಕೆಜಿ ತೂಕವಿರುವ ಈ ಬೈಕ್, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿದೆ. ಟ್ಯೂಬ್ ಲೈಸ್ ಟೈಯರ್ಸ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ (DRL), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

Best Bikes Under Rs 1 Lakh

ಟಿವಿಎಸ್ ಸ್ಪೋರ್ಟ್: ಇದರ ರೂಪಾಂತರಗಳಿಗೆ ಅನುಗುಣವಾಗಿ ರೂ.59,431 ದಿಂದ ರೂ.70,773 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಬೈಕ್, 109.7ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.29 PS ಗರಿಷ್ಠ ಪವರ್, 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಸಿಗಲಿದ್ದು, 90 kmph ಟಾಪ್ ಸ್ವೀಡ್ ಒಳಗೊಂಡಿದೆ.

ಮೈಲೇಜ್ ವಿಚಾರದಲ್ಲೂ ಟಿವಿಎಸ್‌ ಏನೂ ಹಿಂದೆ ಬಿದ್ದಿಲ್ಲ. ಬರುವುದಾದರೆ, ಈ ಟಿವಿಎಸ್ ಸ್ಪೋರ್ಟ್ ಬೈಕ್ 70 ಕಿ.ಮೀ ಮೈಲೇಜ್ ಕೊಡುತ್ತದೆ. ಎಲ್ಇಡಿ ಹೆಡ್ ಲೈಟ್, ಡಿಜಿಟಲ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಹೇಳುವುದಾದರೆ, ಮುಂಭಾಗ 130 ಎಂಎಂ, ಹಿಂಭಾಗ 110 ಎಂಎಂ ಡ್ರಮ್ ಬೈಕ್ ಆಯ್ಕೆಯನ್ನು ಪಡೆದಿದ್ದು, 112 ಕೆ.ಜಿ ತೂಕವಿದೆ.

Best Bikes Under Rs 1 Lakh

ಹೀರೋ ಪ್ಯಾಶನ್‌ ಪ್ಲಸ್‌: ಹೀರೋ ಮೋಟೊಕಾರ್ಪ್ ಪ್ಯಾಶನ್ ಪ್ಲಸ್ ಬೈಕ್‌ನ್ನು ರೂ.76,065 (ಎಕ್ಸ್ ಶೋರೂಂ) ಬೆಲೆಯಲ್ಲಿ ಲಾಂಚ್ ಮಾಡಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ರೂ.64,900 ದರದ ಹೋಂಡಾ ಶೈನ್ ಹಾಗೂ ರೂ.67,808 ಆರಂಭಿಕ ಬೆಲೆಯ ಬಜಾಜ್ ಪ್ಲಾಟಿನಾ ಬೈಕ್‌ಗೆ ಹೊಸ ಪ್ಯಾಶನ್ ಪ್ಲಸ್ ಪ್ರತಿಸ್ಪರ್ಧಿಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 26, 2024, 17:57 [IST]
English summary
Best bikes under rs 1 lakh with 70 km hero tvs bajaj and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+