Tvs-Hero-Bajaj: ದೇಶದಲ್ಲಿ ಸಿಗುವ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು, ಎಲ್ಲದರಲ್ಲೂ ಬೆಸ್ಟ್!

ದೇಶದಲ್ಲಿ ಕಳೆದ 2 ವರ್ಷಗಳಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿದೆ. ವಿವಿಧ ಕಂಪನಿಗಳು ಸಹ ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಪರಿಚಯಿಸುತ್ತಿವೆ. ಅದಕ್ಕೆ ಟಿವಿಎಸ್ ಹೀರೋ ಮತ್ತು ಬಜಾಜ್ ಕಂಪನಿಗಳು ಹೊರತಾಗಿಲ್ಲ.

ಮೊದಲಿಗೆ ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ಅರ್ಬೆನ್ ಹಾಗೂ ಪ್ರೀಮಿಯಂ ಎಂಬ 2 ರೂಪಾಂತರದ ಆಯ್ಕೆಯಲ್ಲಿ ಸಿಗಲಿದ್ದು, ಸುಮಾರು ರೂ.1.15 ಲಕ್ಷದಿಂದ ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ದರಗಳು ನಗರದಿಂದ ನಗರಕ್ಕೆ ಬೇರೆಯಿರಲಿದೆ. ಅರ್ಬೆನ್ ಮಾದರಿ ಭರ್ತಿ ಚಾರ್ಜ್ ನಲ್ಲಿ 113 ಕಿಲೋಮೀಟರ್ ಕ್ರಮಿಸಲಿದ್ದು, ಗಂಟೆಗೆ 73 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ.

Best Electric Scooter In India Tvs Iqube Hero Vida Bajaj Chetak

ಬಜಾಜ್ ಚೇತಕ್ ಪ್ರೀಮಿಯಂ ಆವೃತ್ತಿ ಸಂಪೂರ್ಣ ಚಾರ್ಜ್ ನಲ್ಲಿ 108 ಕಿ.ಮೀ ರೇಂಜ್ (ಮೈಲೇಜ್) ಕೊಡಲಿದ್ದು, 63 ಕೆಎಂಪಿಹೆಚ್ ಗರಿಷ್ಠ ವೇಗವನ್ನು ಹೊಂದಲಿದೆ. ಇವೆರೆಡು ರೂಪಾಂತರಗಳ ಬ್ಯಾಟರಿ ಪ್ಯಾಕ್ ಹೆಚ್ಚು-ಕಮ್ಮಿ 4 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತವೆ. ಟರ್ನ್-ಬೈ -ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಮತ್ತು ಡಿಸ್ಪ್ಲೇ ಥೀಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ (Hero) ಕೂಡ ವಿಡಾ (Vida) ಹೆಸರಿನ ಇ-ಸ್ಕೂಟರ್‌ನ್ನು ಮಾರಾಟಗೊಳಿಸುತ್ತದೆ. ಇದು ವಿ1 ಪ್ಲಸ್ (V1 Plus) ಹಾಗೂ ವಿ1 ಪ್ರೊ (V1 Pro) ಎಂಬ ರೂಪಾಂತರ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ರೂ.1.15 ಲಕ್ಷದಿಂದ ರೂ.1.45 ಲಕ್ಷ ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Best Electric Scooter In India Tvs Iqube Hero Vida Bajaj Chetak

ವಿಡಾ ವಿ1 ಪ್ಲಸ್ ಮಾದರಿ 3.44 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, 100 ಕಿಲೋಮೀಟರ್ ಓಡುತ್ತದೆ. ವಿಡಾ ವಿ1 ಪ್ರೊ ಆವೃತ್ತಿಯು ಪೂರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ಕ್ರಮಿಸುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಒಳಗೊಂಡಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ.

ಭಾರತದಲ್ಲಿ ಟಿವಿಎಸ್ ಐಕ್ಯೂಬ್‌ (Tvs iQube) ಸಹ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಇದು ಐಕ್ಯೂಬ್‌ ಮತ್ತು ಐಕ್ಯೂಬ್ ಎಸ್ ಎಂಬ 2 ರೂಪಾಂತರ ಆಯ್ಕೆಯಲ್ಲಿ ದೊರೆಯಲಿದ್ದು, ಬೆಂಗಳೂರಿನಲ್ಲಿ ಕ್ರಮವಾಗಿ ರೂ.1,47,968 ದಿಂದ ರೂ.1,53,909 ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು 3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ಓಡಬಲ್ಲವು.

Best Electric Scooter In India Tvs Iqube Hero Vida Bajaj Chetak

ಟಿವಿಎಸ್ ಐಕ್ಯೂಬ್‌ ರೂಪಾಂತರಗಳೆರೆಡು 75 ಕೆಎಂ/ಹೆಚ್ ಗರಿಷ್ಠ ವೇಗವನ್ನು ಪಡೆಯಲಿವೆ. 4 ಗಂಟೆ 30 ನಿಮಿಷದಲ್ಲಿ ಇವುಗಳ ಬ್ಯಾಟರಿ 0- 80% ಚಾರ್ಜ್ ಆಗುತ್ತದೆ. ಪ್ರಮುಖವಾಗಿ ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಫ್ರಂಟ್ (ಮುಂಭಾಗ) ಡಿಸ್ಕ್, ರೇರ್ (ಹಿಂಭಾಗ) ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 20, 2024, 18:36 [IST]
English summary
Best electric scooters in india tvs iqube hero vida bajaj chetak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+