Best Mileage Bikes: ಅಗ್ಗದ ಬೆಲೆಯ ಸಾಮಾನ್ಯ ಜನರ ಫೆವರೆಟ್ ಬೈಕ್‌ಗಳಿವು!
ಭಾರತದಲ್ಲಿ 125cc ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಅಗ್ಗದ ಬೆಲೆ, ಅತ್ಯುತ್ತಮ ಮೈಲೇಜ್ ಹಾಗೂ ಆಧುನಿಕ ಡಿಸೈನ್‌ನೊಂದಿಗೆ 125cc ಬೈಕ್‌ಗಳು ಗ್ರಾಹಕರನ್ನು ಮೆಚ್ಚಿಸುತ್ತಿವೆ. ಇವುಗಳಲ್ಲಿ ಬೆಸ್ಟ್ ಮಾಡಲ್‌ಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಬನ್ನಿ 125cc ವರ್ಗದಲ್ಲಿ ಅತ್ಯಂತ ಕೈಗೆಟಕುವ ದರದ ಬೆಸ್ಟ್ ಬೈಕ್‌ಗಳನ್ನು ಇಲ್ಲಿ ನೋಡೋಣ.
ಹೀರೋ ಸೂಪರ್ ಸ್ಪ್ಲೆಂಡರ್: ದೇಶದ ಮೋಟಾರ್‌ಸೈಕಲ್ ಇತಿಹಾಸದಲ್ಲಿ ತನಗೊಂದು ಪುಟವನ್ನು ಭದ್ರಪಡಿಸಿಕೊಂಡಿರುವ ಹೀರೋ ಸೂಪರ್ ಸ್ಪ್ಲೆಂಡರ್ ಬೆಲೆಯು, ಪ್ರಸ್ತುತ 80,848 ರೂ. (ಎಕ್ಸ್ ಶೋರೂಂ, ದೆಹಲಿ) ನಿಂದ ಆರಂಭವಾಗುತ್ತದೆ. ಸೂಪರ್ ಸ್ಪ್ಲೆಂಡರ್ ಇಂಧನ-ಸಮರ್ಥ ಮತ್ತು ಬಾಳಿಕೆ ಬರುವ ಮೋಟಾರ್‌ಸೈಕಲ್ ಎಂದು ಜನಪ್ರಿಯತೆ ಪಡೆದಿದೆ. ಇದು 10.72 bhp ಮತ್ತು 10.6 Nm ಟಾರ್ಕ್ ಉತ್ಪಾದಿಸುವ 124.7cc ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದಲ್ಲದೆ, ಹೀರೋನ ಸೇವಾ ನೆಟ್‌ವರ್ಕ್ ಸೂಪರ್ ಸ್ಪ್ಲೆಂಡರ್ ಅನ್ನು ನಿಮ್ಮ ದೈನಂದಿನ ಪ್ರಯಾಣಿಕ ಬೈಕ್‌ನಂತೆ ಪಡೆಯಲು ಹೆಚ್ಚು ಸುಲಭವಾಗಿಸುತ್ತದೆ. ಇದರ ಮೈಲೇಜ್ ನೊಡುವುದಾದ್ರೆ ಲೀಟರ್‌ಗೆ 57-60 kmpl ಇದೆ.

ಹೋಂಡಾ ಶೈನ್: ಹೋಂಡಾ ಶೈನ್ 125 ಸಿಸಿ ಕಮ್ಯೂಟರ್ ಬೈಕ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಹೋಂಡಾ ಶೈನ್ ಸಿಂಗಲ್ ಸಿಲಿಂಡರ್ 123.94cc ಎಂಜಿನ್ ಹೊಂದಿದ್ದು, ಇದು 10.59 bhp ಪವರ್ ಮತ್ತು 11 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ನೋಡುವುದಾದ್ರೆ ಲೀ.ಗೆ 55 kmpl ಇದೆ. ಬೆಲೆಯು 79,800 ರೂ. ನಿಂದ (ಎಕ್ಸ್ ಶೋರೂಂ, ದೆಹಲಿ) ಪ್ರಾರಂಭವಾಗುತ್ತದೆ.
ಹೋಂಡಾ ಎಸ್‌ಪಿ 125: 125cc ಕಮ್ಯೂಟರ್ ವಿಭಾಗದಲ್ಲಿ ನೀವು ನೋಡಬಹುದಾದ ಮತ್ತೊಂದು ಹೋಂಡಾ ಬೈಕ್ SP 125 ಆಗಿದೆ. ಇದರ 124cc ಎಂಜಿನ್ 10.72 bhp ಪವರ್ ಮತ್ತು 10.9 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ನೋಡುವುದಾದ್ರೆ ಲೀ.ಗೆ 65kmpl ನೀಡುತ್ತದೆ. ಮೂಲ ಮಾದರಿಯ ಬೆಲೆಯು 86,017 ರೂ. ನಿಂದ ಆರಂಭವಾಗುತ್ತದೆ (ಎಕ್ಸ್ ಶೋರೂಂ, ದೆಹಲಿ).

ಬಜಾಜ್ CT125X & ಪಲ್ಸರ್ 125: ಬಜಾಜ್ CT125X ಭಾರತದಲ್ಲಿ ಸದ್ಯ ಅತ್ಯಂತ ಕೈಗೆಟುಕುವ 125cc ಬೈಕ್ ಆಗಿದೆ. ಬಜಾಜ್ CT125X ಬೈಕ್ 124.4cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಇದು 10.7 bhp ಪವರ್ ಮತ್ತು 11 Nm ಟಾರ್ಕ್ ಹೊರಹಾಕುತ್ತದೆ. ಲೀ.ಗೆ 61.3 kmpl ಮೈಲೇಜ್ ನೀಡುತ್ತದೆ. 74,016 (ಎಕ್ಸ್ ಶೋರೂಂ, ದೆಹಲಿ) ರೂ.ನಿಂದ ಇದರ ಬೆಲೆ ಪ್ರಾರಂಭವಾಗುತ್ತದೆ. ಹಾಗೆಯೇ ಬಜಾಜ್ ಪಲ್ಸರ್ 125 ಬೆಲೆಯು 80,416 ರೂ. (ಎಕ್ಸ್ ಶೋರೂಂ, ದೆಹಲಿ) ನಿಂದ ಆರಂಭವಾಗುತ್ತದೆ. ಇದು 11.64 bhp ಪವರ್ ಮತ್ತು 10.8 Nm ಟಾರ್ಕ್ ಉತ್ಪಾದಿಸುವ 125cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ. ಮೈಲೇಜ್ ನೋಡುವುದಾದ್ರೆ, ಲೀ.ಗೆ 50kmpl ಇದೆ.
ಇವಿಷ್ಟು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡವರಿಗೂ ಲಭ್ಯವಾಗುವಂತಹ 125cc ವಿಭಾಗದ ಬೆಸ್ಟ್ ಬೈಕ್‌ಗಳಾಗಿವೆ. ಕಳೆದ ವರ್ಷ ಈ ವಿಭಾಗವು ಕೆಲವು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ಅಪ್‌ಡೇಟ್‌ಗಳೊಂದಿಗೆ ಮೇಲಿನ ಕೆಲ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಹತ್ತಿರದ ಡೀಲರ್‌ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








