ಬಡವರ ಬಂಡಿಗಳು: ಅತ್ಯಂತ ಅಗ್ಗದ ಬೆಲೆಗೆ ಅತ್ಯುತ್ತಮ ಮೈಲೇಜ್ ನೀಡುವ ಬೈಕ್‌ಗಳಿವು!

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡವರಿಗೂ ಲಭ್ಯವಾಗುವಂತೆ ಹಲವು ಬ್ರಾಂಡ್‌ಗಳು 125cc ವಿಭಾಗದಲ್ಲಿ ಕೆಲವು ಬೈಕ್‌ಗಳನ್ನು ನೀಡುತ್ತಿವೆ. ಕಳೆದ ವರ್ಷ ಈ ವಿಭಾಗವು ಕೆಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಕೆಲ ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಾಗಿ 125cc ವರ್ಗದಲ್ಲಿ ಅತ್ಯಂತ ಕೈಗೆಟಕುವ ದರದ ಬೈಕ್‌ಗಳನ್ನು ಇಲ್ಲಿ ನೋಡೋಣ.

ಬಜಾಜ್ CT125X: ಬಜಾಜ್ CT125X ಭಾರತದಲ್ಲಿ ಸದ್ಯ ಅತ್ಯಂತ ಕೈಗೆಟುಕುವ 125cc ಬೈಕ್ ಆಗಿದೆ. 74,016 (ಎಕ್ಸ್ ಶೋರೂಂ, ದೆಹಲಿ) ರೂ.ನಿಂದ ಇದರ ಬೆಲೆ ಆರಂಭವಾಗುತ್ತದೆ. ಬಜಾಜ್ CT125X ಬೈಕ್ 124.4cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಇದು 10.7 bhp ಪವರ್ ಮತ್ತು 11 Nm ಟಾರ್ಕ್ ಹೊರಹಾಕುತ್ತದೆ. ಇದರ ಮೈಲೇಜ್ ನೋಡುವುದಾದ್ರೆ ಲೀ.ಗೆ 61.3 kmpl ಇದೆ.

best-mileage-bikes-under-1-lakh-bajaj-hero-honda

ಹೋಂಡಾ ಶೈನ್: ಹೋಂಡಾ ಶೈನ್ 125 ಸಿಸಿ ಕಮ್ಯೂಟರ್ ಬೈಕ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಇದರ ಬೆಲೆಯು 79,800 ರೂ. ನಿಂದ (ಎಕ್ಸ್ ಶೋರೂಂ, ದೆಹಲಿ) ಪ್ರಾರಂಭವಾಗುತ್ತದೆ. ಹೋಂಡಾ ಶೈನ್ ಸಿಂಗಲ್ ಸಿಲಿಂಡರ್ 123.94cc ಎಂಜಿನ್ ಹೊಂದಿದ್ದು, ಇದು 10.59 bhp ಪವರ್ ಮತ್ತು 11 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ನೋಡುವುದಾದ್ರೆ ಲೀ.ಗೆ 55 kmpl ಇದೆ.

ಹೀರೋ ಸೂಪರ್ ಸ್ಪ್ಲೆಂಡರ್: ದೇಶದ ಮೋಟಾರ್‌ಸೈಕಲ್ ಇತಿಹಾಸದಲ್ಲಿ ತನಗೊಂದು ಪುಟವನ್ನು ಭದ್ರಪಡಿಸಿಕೊಂಡಿರುವ ಹೀರೋ ಸೂಪರ್ ಸ್ಪ್ಲೆಂಡರ್ ಬೆಲೆಯು, ಪ್ರಸ್ತುತ 80,848 ರೂ. (ಎಕ್ಸ್ ಶೋರೂಂ, ದೆಹಲಿ) ನಿಂದ ಆರಂಭವಾಗುತ್ತದೆ. ಇದು 10.72 bhp ಮತ್ತು 10.6 Nm ಟಾರ್ಕ್ ಉತ್ಪಾದಿಸುವ 124.7cc ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

best-mileage-bikes-under-1-lakh-bajaj-hero-honda

ಸೂಪರ್ ಸ್ಪ್ಲೆಂಡರ್ ಇಂಧನ-ಸಮರ್ಥ ಮತ್ತು ಬಾಳಿಕೆ ಬರುವ ಮೋಟಾರ್‌ಸೈಕಲ್ ಎಂದು ಜನಪ್ರಿಯತೆ ಪಡೆದಿದೆ. ಇದಲ್ಲದೆ, ಹೀರೋನ ಸೇವಾ ನೆಟ್‌ವರ್ಕ್ ಸೂಪರ್ ಸ್ಪ್ಲೆಂಡರ್ ಅನ್ನು ನಿಮ್ಮ ದೈನಂದಿನ ಪ್ರಯಾಣಿಕ ಬೈಕ್‌ನಂತೆ ಪಡೆಯಲು ಹೆಚ್ಚು ಸುಲಭವಾಗಿಸುತ್ತದೆ. ಇದರ ಮೈಲೇಜ್ ನೊಡುವುದಾದ್ರೆ ಲೀಟರ್‌ಗೆ 57-60 kmpl ಇದೆ.

ಹೋಂಡಾ ಎಸ್‌ಪಿ 125: 125cc ಕಮ್ಯೂಟರ್ ವಿಭಾಗದಲ್ಲಿ ನೀವು ನೋಡಬಹುದಾದ ಮತ್ತೊಂದು ಹೋಂಡಾ ಬೈಕ್ SP 125 ಆಗಿದೆ. ಮೂಲ ಮಾದರಿಯ ಬೆಲೆಯು 86,017 ರೂ. ನಿಂದ ಆರಂಭವಾಗುತ್ತದೆ (ಎಕ್ಸ್ ಶೋರೂಂ, ದೆಹಲಿ). ಇದರ 124cc ಎಂಜಿನ್ 10.72 bhp ಪವರ್ ಮತ್ತು 10.9 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ನೋಡುವುದಾದ್ರೆ ಲೀ.ಗೆ 65kmpl ನೀಡುತ್ತದೆ.

best-mileage-bikes-under-1-lakh-bajaj-hero-honda

ಬಜಾಜ್ ಪಲ್ಸರ್ 125: ಕೊನೆಯದಾಗಿ ಪಟ್ಟಿಯಲ್ಲಿ ಬಜಾಜ್ ಪಲ್ಸರ್ 125 ಇದ್ದು, ಇದರ ಬೆಲೆಯು ಮೂಲ ಮಾದರಿಗೆ 80,416 ರೂ. (ಎಕ್ಸ್ ಶೋರೂಂ, ದೆಹಲಿ) ನಿಂದ ಆರಂಭವಾಗುತ್ತದೆ. ಬೈಕ್ ಗಮನಾರ್ಹವಾಗಿ 11.64 bhp ಪವರ್ ಮತ್ತು 10.8 Nm ಟಾರ್ಕ್ ಉತ್ಪಾದಿಸುವ 125cc ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಇದರ ಮೈಲೇಜ್ ನೋಡುವುದಾದ್ರೆ, ಲೀ.ಗೆ 50kmpl ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 24, 2024, 13:18 [IST]
English summary
Best mileage bikes under 1 lakh bajaj hero honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+