ದಿನನಿತ್ಯದ ಬಳಕೆಗೆ ಇವೇ ಉತ್ತಮ: ಕೇವಲ ರೂ.44,999 ಆರಂಭಿಕ ಬೆಲೆ.. ಮೈಲೇಜ್ ಕೂಡ ಜಾಸ್ತಿ

ಭಾರತದಲ್ಲಿ ಮಧ್ಯಮ ವರ್ಗ ಹಾಗೂ ರೈತಾಪಿ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ದಿನನಿತ್ಯದ ಬಳಕೆಗೆ ಯಾವುದೇ ದ್ವಿಚಕ್ರ ವಾಹನವನ್ನು ಖರೀದಿಸಲು ಯೋಚಿಸಿದರೂ ಸರಿಸುಮಾರು ರೂ.1 ಲಕ್ಷದಷ್ಟು ಹಣ ಇರಲೇಬೇಕು. ಇಲ್ಲಿ ತೀರಾ ಅಗ್ಗದ ದರಕ್ಕೆ ದೊರೆಯುವ ಟಿವಿಎಸ್ ಎಕ್ಸ್ಎಲ್ ಮತ್ತು ಕೈನೆಟಿಕ್ ಇ-ಲೂನಾ ಮೊಪೆಡ್ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಟಿವಿಎಸ್ ಎಕ್ಸ್ಎಲ್ 100 (TVS XL 100) ಮೊಪೆಡ್ ಬಗ್ಗೆ ಮಾತನಾಡೋಣ. ಇದು ರೂ.44,999 ದಿಂದ ರೂ.57,804 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಕಂಫರ್ಟ್, ಹೆವಿ ಡ್ಯೂಟಿ, ಕಂಫರ್ಟ್ ಐ-ಟಚ್ ಸ್ಟಾರ್ಟ್ ಸೇರಿದಂತೆ ವಿವಿಧ ರೂಪಾಂತರ ಹಾಗೂ ಗ್ರೇ-ಬ್ಲ್ಯಾಕ್, ರೆಡ್-ಬ್ಲ್ಯಾಕ್, ಬ್ಲೂ, ಗ್ರೀನ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

Best Moped In India Tvs Xl 100 And Kinetic E Luna Rs 44 999 Starting Price

ಟಿವಿಎಸ್ ಎಕ್ಸ್ಎಲ್ 99.7 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 4.4 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 6.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಈ ಮೊಪೆಡ್ 80 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ.

ಟಿವಿಎಸ್ ಎಕ್ಸ್ಎಲ್ 100, ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ (ಹಿಂಭಾಗ) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಜೊತೆಗೆ 2 ತುದಿಗಳಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 2.5-ಇಂಚಿನ ಟೈಯರ್ಸ್, 16-ಇಂಚಿನ ಸ್ಪೋಕ್ ವೀಲ್ಸ್ ಅನ್ನು ಒಳಗೊಂಡಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ 130 ಕೆಜಿ ತೂಕದ ವಸ್ತುಗಳನ್ನು ಸಾಗಿಯಬಹುದು.

Best Moped In India Tvs Xl 100 And Kinetic E Luna Rs 44 999 Starting Price

ಟಿವಿಎಸ್ ಕಂಪನಿಯು ಎಲೆಕ್ಟ್ರಿಕ್ ರೂಪದಲ್ಲಿಯೂ ಎಕ್ಸ್ಎಲ್ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಎಕ್ಸ್ಎಲ್ ರೀತಿಯಲ್ಲಿಯೇ ಕೈನೆಟಿಕ್ ಇ-ಲೂನಾ (Kinetic E-Luna) ಮೊಪೆಡ್ ಸಹ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಎಕ್ಸ್1, ಎಕ್ಸ್2 ಎಂಬ ಎರಡು ರೂಪಾಂತರಗಳ ಆಯ್ಕೆಯನ್ನು ಹೊಂದಿದ್ದು, ರೂ.69,990 ದಿಂದ ರೂ.74,990 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ನೂತನ ಕೈನೆಟಿಕ್ ಇ-ಲೂನಾ ಮೊಪೆಡ್, 2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಲಭ್ಯವಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 110 ಕಿಲೋಮೀಟರ್ ಓಡುತ್ತದೆ. ಗಂಟೆಗೆ 50 ಗರಿಷ್ಠ ವೇಗ (ಟಾಪ್ ಸ್ವೀಡ್) ವನ್ನು ಪಡೆಯಲಿದೆ. ಇದರ ಬ್ಯಾಟರಿಯೂ 4 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಈ ಎಲೆಕ್ಟ್ರಿಕ್ ಮೊಪೆಡ್, ಕಾಂಬಿ ಬ್ರೇಕಿಂಗ್ ಸಿಸ್ಟಮ್, 16-ಇಂಚಿನ ವೀಲ್ಸ್, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೈಟ್ ಸ್ಟಾಂಡ್ ಸೆನ್ಸರ್, ಸೇಫ್ಟಿ ಲಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಮಲ್ಬೆರಿ ರೆಡ್, ಓಷನ್ ಬ್ಲೂ, ಪರ್ಲ್ ಯೆಲ್ಲೋ, ಸ್ಪಾರ್ಕ್ಲಿಂಗ್ ಗ್ರೀನ್ ಸೇರಿದಂತೆ 4 ಬಣ್ಣಗಳೊಂದಿಗೂ ದೊರೆಯುತ್ತದೆ. ನೀವು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಕೈನೆಟಿಕ್ ಇ-ಲೂನಾವನ್ನು ಕಾಯ್ದಿರಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 2, 2024, 18:29 [IST]
English summary
Best moped in india tvs xl 100 and kinetic e luna rs 44999 starting price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+