KTM Duke 125 ಬೆಲೆಗೆ ಯಾವೆಲ್ಲಾ ಬೈಕ್‌ಗಳು ಸಿಗುತ್ತೆ ಗೊತ್ತಾ?: ಪಲ್ಸರ್‌ನಿಂದ ಹಿಡಿದು MT 15 ವರೆಗೆ
ಕೆಟಿಎಂ ಬೈಕ್‌ಗಳೆಂದರೆ ಭಾರತೀಯ ಯುವಕರಿಗೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಕೆಟಿಎಂ ಡ್ಯೂಕ್ ಸರಣಿಯ ಬೈಕ್‌ಗಳೆಂದರೆ ನಮ್ಮ ಯುವಕರ ಪ್ರಾಣ ಎಂದರೂ ಅತಿಶಯೋಕ್ತಿ ಆಗಲಾರದು. ಕೆಟಿಎಂ ತನ್ನ ಡ್ಯೂಕ್ ಬೈಕ್ ಅನ್ನು 125, 200, 250 ಮತ್ತು 390 ಸಿಸಿ ಸೆಗ್ಮೆಂಟ್‌ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.
ಇದರಲ್ಲಿ ಕೆಟಿಎಂ ಡ್ಯೂಕ್ 125 (KTM Duke 125), ಕೆಟಿಎಂ ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಎಂಟ್ರಿ ಮಾಡೆಲ್ ಬೈಕ್. ಡಿಸೈನ್ ಮತ್ತು ವಿನ್ಯಾಸದಲ್ಲಿ ಇದೇ ಸರಣೀಯ ಇತರ ಬೈಕ್‌ಗಳನ್ನು ಹೋಲುತ್ತದೆಯಾದರೂ, ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಈ ಬೈಕ್‌ನ ಬೆಂಗಳೂರ ಆನ್ ರೋಡ್ ಬೆಲೆ ಸುಮಾರು 2,32,986 ರೂಗಳು. ಇಂದಿನ ಲೇಖನದಲ್ಲಿ ಈ ಬೆಲೆಗೆ ಭಾರತದಲ್ಲಿ ಇತರ ಯಾವ ಬೈಕ್‌ಗಳು ಸಿಗುತ್ತದೆ ಎಂದು ನೋಡೋಣ ಬನ್ನಿ.

1. ರಾಯಲ್ ಎನ್‌ಫೀಲ್ಡ್ ಹಂಟರ್ ೩೫೦: ರಾಯಲ್ ಎನ್‌ಫೀಲ್ಡ್ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಇದು ಎಂದರೆ ತಪ್ಪಾಗಲಾರದು. ಈ ಬೈಕ್ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆ ಸುಮಾರು 1.85 ಲಕ್ಷದಿಂದ ಆರಂಭವಾಗುತ್ತದೆ. 350 ಮಾದರಿಯಲ್ಲಿ 349 ಸಿಸಿ, ಫ್ಯೂ-ಇಂಜೆಕ್ಟೆಡ್ ಜೆ ಸರಣಿ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದು ಸಿಂಗಲ್-ಸಿಲಿಂಡರ್ ಪವರ್‌ಪ್ಲಾಂಟ್ ಮೂಲಕ 6,100 ಆರ್‌ಪಿಎಂನಲ್ಲಿ 20.2 ಬಿಎಚ್‌ಪಿ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
2. ಬಜಾಜ್ ಪಲ್ಸರ್ ಎನ್‌ಎಸ್ 200: ಬಜಾಜ್ ಪಲ್ಸರ್ ಎನ್‌ಎಸ್ 200 ಬೈಕ್ ನ ಹೆಸರನ್ನು ಕೇಳದೇ ಇರುವ ಯುವಕರ ಸಂಖ್ಯೆ ಕಮ್ಮಿ ಎಂದೇ ಹೇಳಬಹುದು. ಈ ಬೈಕ್ ಬೆಂಗಳೂರಿನಲ್ಲಿ 1,95,082 ರಿಂದ ಆರಂಭವಾಗುತ್ತದೆ. 200 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಸಹ ಪಡೆದಿದೆ.

3. ಟಿವಿಎಸ್ ರೊನಿನ್: ಬೆಂಗಳೂರಿನಲ್ಲಿ ಟಿವಿಎಸ್ ರೊನಿನ್ ಆನ್ ರೋಡ್ ಬೆಲೆ ಸುಮಾರು 1,90,209 ರೂಗಳು. ಟಿವಿಎಸ್ ರೊನಿನ್ ಬೈಕ್‌ನ ಎಂಜಿನ್ ಬಗ್ಗೆ ನೋಡುವುದಾದರೆ 225.9 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಇದ್ದು, ಇದರ ಸಹಾಯದಿಂದ ಈ ಬೈಕ್ ಸುಮಾರು 20.4 ಪಿಎಸ್ ಪವರ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಮೈಲೇಜ್ ಬಗ್ಗೆ ನೊಡುವುದಾದರೆ ಇದು ಪ್ರತೀ ಲೀಟರ್ ಪೆಟ್ರೋಲ್‌ಗೆ ಸುಮಾರು 43 ಕಿಮೀ ಮೈಲೇಜ್ ನೀಡುತ್ತದೆ.
4. ಯಮಹಾ ಎಂಟಿ 15- ಯುವಕರ ನೆಚ್ಚಿನ ಬೈಕ್‌ಗಳಲ್ಲಿ ಯಮಹಾ ೧೫ ಸಹ ಒಂದು. ಬೆಂಗಳೂರಿನಲ್ಲಿ ಯಮಹಾ ಎಂಟಿ 15 ಆನ್ ರೋಡ್ ಬೆಲೆ ಸುಮಾರು 2,13,690. ಎಂಟಿ-15 ಬೈಕ್ ಹೆಚ್ಚಿನ ಯುನಿಟ್ ಗಳನ್ನು ಆರ್15 ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ, ಬ್ಲೂಟೂತ್ ಅನ್ನು ಪಡೆಯುವ ಸಮಯವಾಗಿದೆ, ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಅದೇ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಹೊಂದಿರುತ್ತದೆ.

ಈ ಎಂಜಿನ್ 18.5 ಬಿಹೆಚ್‍ಪಿ ಪವರ್ ಮತ್ತು 13.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








