ನಾಳೆ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ... ರಿವರ್ಸ್ ಗೇರ್ ಕೂಡ ಇದೆ, ಬೆಲೆ ಎಷ್ಟು?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ದೇಶೀಯ ವಾಹನ ತಯಾರಕರು ಮಾತ್ರವಲ್ಲ, ಈಗ ಅಂತರಾಷ್ಟ್ರೀಯವಾಗಿ ಗುರ್ತಿಸಿಕೊಂಡಿರುವ ಪ್ರಮುಖ ವಿದೇಶಿ ವಾಹನ ತಯಾರಕ ಕಂಪನಿಗಳು ಕೂಡ ಭಾರತವನ್ನು ಪ್ರಮುಖ ಮಾರುಕಟ್ಟೆಯಾಗಿ ನೋಡುತ್ತಿವೆ. ಹೌದು ನಾಳೆ (ಅಕ್ಟೋಬರ್ 1) ಬಿಎಂಡಬ್ಲ್ಯು ತನ್ನ ಹೊಸ ಸಿಇ 02 (CE 02) ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಹೊಸ ಬಿಎಂಡಬ್ಲ್ಯು ಸಿಇ 02 ಅನ್ನು ಕಂಪನಿಯು ದೇಶೀಯ ಪಾಲುದಾರರಾದ ಟಿವಿಎಸ್ ಮೋಟಾರ್ ಕಂಪನಿಯೊಂದಿಗಿನ ಸಹಕಾರದಲ್ಲಿ ಭಾರತದಲ್ಲಿ ತಯಾರಿಸಿದೆ.

ಹೇಳಬೇಕೆಂದರೆ ಬಿಎಂಡಬ್ಲ್ಯು ಭಾರತದಲ್ಲಿ ಕೆಲವೇ ವಾರಗಳ ಹಿಂದೆಯಷ್ಟೇ ಸಿಇ 04 (CE 04) ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿತ್ತು. ಇದು ಬಿಡುಗಡೆಯಾದ ಕೆಲವೇ ವಾರಗಳ ನಂತರ ಸಿಇ 02 ಬಿಡುಗಡೆಗೆ ಕಂಪನಿ ಸಜ್ಜಾಗಿದೆ. ಈ ಮೂಲಕ ಐಷಾರಾಮಿ ಬ್ರಾಂಡ್ ಭಾರತದಲ್ಲಿ ತನ್ನ ಹೊಸ ವಾಹನಗಳ ಶ್ರೇಣಿಯನ್ನು ವಿಸ್ತರಿಸುತ್ತಿದೆ.

bmw-ce-02-electric-scooter-will-be-launching-on-october-1st

BMW CE 02 ನಿರೀಕ್ಷಿತ ಬೆಲೆ: ಬೆಲೆಯ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ, ಈ ಮಾದರಿಯನ್ನು ಭಾರತದಲ್ಲಿ ತಯಾರಿಸಲಾಗಿರುವುದರಿಂದ ರೂ.5 ಲಕ್ಷಕ್ಕಿಂತ ಕಡಿಮೆ (ಎಕ್ಸ್ ಶೋರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಮಾರಾಟದಲ್ಲಿರುವ ಇತರ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಗಮನಾರ್ಹವಾಗಿ ದುಬಾರಿಯಾಗಿದೆ.

ವಿಶೇಷತೆಗಳೇನು?: ಹೊಸ ಬಿಎಂಡಬ್ಲ್ಯು ಸಿಇ 02 ವಾಹನವು, ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ಎರಡರ ಮಿಶ್ರಣದಲ್ಲಿ ಡಿಸೈನ್ ಮಾಡಲಾಗಿದೆ. ಸೈ-ಫೈ ಸಿನಿಮಾಗಳಲ್ಲಿ ನೋಡುವ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಪಡೆದುಕೊಂಡಿದೆ. ಕಡಿಮೆ ಬಾಡಿ ಪ್ಯಾನೆಲ್‌ಗಳು, ಫ್ಲಾಟ್ ಸೀಟ್ ಮತ್ತು ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

bmw-ce-02-electric-scooter-will-be-launching-on-october-1st

ಮುಂಭಾಗದಲ್ಲಿ 239 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್, ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳು, ಹಿಂಭಾಗದಲ್ಲಿ ಮೊನೊಶಾಕ್, ವೈಡ್-ಆಸ್ಪೆಕ್ಟ್ 14-ಇಂಚಿನ ವೀಲ್ ಸೆಟಪ್ ಸೇರಿದಂತೆ ಪ್ರೀಮಿಯಂ ಹಾರ್ಡ್‌ವೇರ್‌ಗಳನ್ನು ಹೊಂದಿದೆ. ಎಲ್ಲವೂ ಪ್ರಮಾಣಿತ ಹಾಗೂ ಗರಿಷ್ಟ ಗುಣಮಟ್ಟದೊಂದಿಗೆ ಬರುವುದರಿಂದ ದುಬಾರಿ ಬೆಲೆ ಹೊಂದಿದೆ.

ಬ್ಯಾಟರಿ ಮತ್ತು ರೇಂಜ್: ಬಿಎಂಡಬ್ಲ್ಯು ಸಿಇ 02 ಸ್ಕೂಟರ್ ಪಿಎಂಎಸ್ ಏರ್‌ಕೂಲ್ಡ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 11 ಕಿಲೋವ್ಯಾಟ್ (14.7 ಬಿಹೆಚ್‌ಪಿ) ಮತ್ತು 4 ಕಿಲೋವ್ಯಾಟ್ (5.3 ಬಿಹೆಚ್‌ಪಿ) ಎಂಬ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. 4 ಕಿಲೋವ್ಯಾಟ್ ಆವೃತ್ತಿಯು 45 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೇ, 11 ಕಿಲೋವ್ಯಾಟ್ ಆವೃತ್ತಿಯು ಗಂಟೆಗೆ 95 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

bmw-ce-02-electric-scooter-will-be-launching-on-october-1st

ಒಮ್ಮೆ ಚಾರ್ಜ್ ಮಾಡಿದ್ರೆ 45 ಕಿ.ಮೀ ರೇಂಜ್ ನೀಡುವ 2 ಕಿಲೋವ್ಯಾಟ್ ಬ್ಯಾಟರಿಯನ್ನು ನೀಡಲಾಗಿದ್ದು, ನೀವು ಬಯಸಿದರೆ ಹೆಚ್ಚುವರಿಯಾಗಿ ಮತ್ತೊಂದು 2 ಕಿಲೋವ್ಯಾಟ್ ಬ್ಯಾಟರಿಯನ್ನು ಸೇರಿಸುವ ಆಯ್ಕೆಯನ್ನು ಸಹ ಪಡೆಯಬಹುದು, ಇವೆರಡನ್ನು ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಓಡಿಸಬಹುದು ಎಂದು ಹೇಳಲಾಗಿದೆ.

ಬಿಎಂಡಬ್ಲ್ಯು ಸಿಇ 02 ಸ್ಕೂಟರ್‌ನಲ್ಲಿ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ 3.5 ಇಂಚಿನ ಟಿಎಫ್‌ಟಿ ಡಿಸ್ಪ್ಲೆ ಅಳವಡಿಸಲಾಗಿದೆ. ನೀವು ಸರ್ಫ್ ಮತ್ತು ಫ್ಲೋ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಸಹ ಪಡೆಯಬಹುದು. ಆಲ್-ಎಲ್ಇಡಿ ಲೈಟಿಂಗ್, ಯುಎಸ್‌ಬಿ ಚಾರ್ಜಿಂಗ್, ರಿವರ್ಸ್ ಗೇರ್ ಮತ್ತು ಕೀಲೆಸ್ ಕಾರ್ಯಾಚರಣೆ ಸಹ ಇದೆ.

More from DriveSpark

Article Published On: Monday, September 30, 2024, 13:50 [IST]
English summary
Bmw ce 02 electric scooter will be launching on october 1st
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+