BMW CE 02: ನೂತನ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ವಿಡಿಯೋ ರಿವ್ಯೂ.. ನೀವೇ ನೋಡಿ!
ಜರ್ಮನಿ ಮೂಲದ ಬಿಎಂಡಬ್ಲ್ಯೂ ಮೊಟೊರಾಡ್ (BMW Motorrad), ದುಬಾರಿ ಬೆಲೆಯ ಐಷಾರಾಮಿ ಬೈಕ್ ಮತ್ತು ಸ್ಕೂಟರ್‌ಗಳ ತಯಾರಿಕೆಗೆ ಹೆಸರುವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಂದು ಹೊಚ್ಚ ಹೊಸ ಸಿಇ 02 (CE 02) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಆದ್ದೂರಿಯಾಗಿ ಬಿಡುಗಡೆ ಮಾಡಲಿದೆ. ನಮಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಟೆಸ್ಟ್ ರೈಡ್ ಮಾಡಲು ಕಂಪನಿಯು ದೆಹಲಿಗೆ ಆಹ್ವಾನಿಸಿತ್ತು. ಬನ್ನಿ.. ನೂತನ ಸ್ಕೂಟರ್ ಹೇಗಿದೆ ಎಂಬುದರ ವಿಡಿಯೋ ರಿವ್ಯೂ ನಿಮಗಾಗಿ ಇಲ್ಲಿದೆ.
ಹೊಸ ಬಿಎಂಡಬ್ಲ್ಯೂ ಸಿಇ 02 (BMW CE 02) ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ರೆಕ್ಟ್ಯಾಂಗುಲರ್ ಎಲ್ಇಡಿ ಹೆಡ್‌ಲೈಟ್, ವಿಂಡ್‌ಸ್ಕ್ರೀನ್, ಎಲ್ಇಡಿ ಡಿಆರ್‌ಎಲ್‌ಗಳು, 14-ಇಂಚಿನ ವೀಲ್‌ಗಳು, ಫ್ಲಾಟ್ ಸೀಟ್, ಎಲ್ಇಡಿ ಲೈಟಿಂಗ್ ಸೆಟಪ್ ಹಾಗೂ ಎರಡು ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.
ನೂತನ ಎಲೆಕ್ಟ್ರಿಕ್ ಸ್ಕೂಟರ್ 3.92 ಕೆಡಬ್ಲ್ಯೂಹೆಚ್ (Kwh) ಬ್ಯಾಟರಿ ಪ್ಯಾಕ್ & ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 108 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ತಿಳಿದುಬಂದಿದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದ್ದು, 3 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಫ್ಲೋ, ಸರ್ಫ್ ಹಾಗೂ ಫ್ಲ್ಯಾಶ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ 0.9 ಕೆಡಬ್ಲ್ಯೂ ಎಸಿ ಚಾರ್ಜರ್ ಉಪಯೋಗ ಮಾಡಿದಾಗ 5 ಗಂಟೆ 12 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. 1.5 ಕೆಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ ಮೂರುವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ನೂತನ ಎಲೆಕ್ಟ್ರಿಕ್ ಸ್ಕೂಟರ್ 970 ಎಂಎಂ ಉದ್ದ, 876 ಎಂಎಂ ಅಗಲ ಹಾಗೂ 1,140 ಎಂಎಂ ಎತ್ತರ ಮತ್ತು 1,350 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) 239 ಎಂಎಂ ಹಾಗೂ ಹಿಂಭಾಗ (ರೇರ್) ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ. 120/80-ಆರ್14 & 150/70-ಆರ್14 ಅಳತೆಯ ಟೈರ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications