ನಾಳೆ ಭಾರತದಲ್ಲಿ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?
ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯು ತನ್ನ ಸಿಇ 04 (BMW CE 04) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೊನೆಗೂ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಸ್ಕೂಟರ್ ಕಂಪನಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ನಾಳೆ (ಜುಲೈ 24) ಬಿಡುಗಡೆಯಾಗಲಿದೆ. ಇದನ್ನು ಈ ಹಿಂದೆ ಡಿಸೆಂಬರ್ 2022 ರಲ್ಲಿ ಭಾರತದಲ್ಲಿ ಪ್ರದರ್ಶಿಸಲಾಗಿತ್ತು, ಅಂತಿಮವಾಗಿ ಇದನ್ನು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಿಎಂಡಬ್ಲ್ಯು ಸಿಇ 04 ಸ್ಕೂಟರ್ ಬಿಡುಗಡೆಯಾದ ಕೂಡಲೇ ವಿತರಣೆಗೆ ಲಭ್ಯವಿರಲಿದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯೋಣ.
ಬಿಎಂಡಬ್ಲ್ಯು ಸಿಇ 04 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಸೈನ್ಸ್-ಫಿಕ್ಷನ್ ಸಿನಿಮಾದಲ್ಲಿ ಕಂಡುಬರುವ ಫ್ಯೂಚರಿಸ್ಟಿಕ್ ವಾಹನದಂತೆ ಕಾಣುತ್ತದೆ. ಸ್ಕೂಟರ್‌ನ ಸುತ್ತಲೂ ದೊಡ್ಡ ಏಪ್ರನ್ ಮತ್ತು ಫ್ಲಾಟ್ ಬಾಡಿ ಪ್ಯಾನೆಲ್‌ಗಳು ಆಕರ್ಷಣೆಯನ್ನು ಹೆಚ್ಚಿಸಿವೆ. ಬೆಂಚ್ ತರಹದ ಸೀಟ್ ಗಮನ ಸೆಳೆಯುವ ಮತ್ತೊಂದು ವಿನ್ಯಾಸ ಅಂಶವಾಗಿದೆ. 780 ಎಂಎಂ ಸೀಟ್ ಎತ್ತರದೊಂದಿಗೆ ಇಬ್ಬರು ಆರಾಮವಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಲಾವಕಾಶವನ್ನು ಒದಗಿಸುತ್ತದೆ.

ಸಿಇ 04 ಸ್ಟೀಲ್ ಡಬಲ್ ಲೂಪ್ ಫ್ರೇಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್-ಬ್ರಿಡ್ಜ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಜ್ ಸಸ್ಪೆಂಷನ್ ಸ್ಟ್ರಟ್ ಹೊಂದಿರುವ ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಅನ್ನು ಹೊಂದಿದೆ. ಸ್ಕೂಟರ್ 15 ಇಂಚಿನ ವೀಲ್‌ಗಳನ್ನು ಹೊಂದಿದೆ. ಎರಡೂ ತುದಿಗಳಲ್ಲಿ 265 ಎಂಎಂ ಡಿಸ್ಕ್ (ABS ಸ್ಟ್ಯಾಂಡರ್ಡ್) ಬ್ರೇಕ್‌ಗಳನ್ನು ಹೊಂದಿದೆ.
ಪವರ್ & ಪರ್ಫಾಮೆನ್ಸ್: ಹೊಸ ಬಿಎಂಡಬ್ಲ್ಯು ಸ್ಕೂಟರ್ ಕೇವಲ 2.6 ಸೆಕೆಂಡುಗಳಲ್ಲಿ 50 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದರ ಟಾಪ್ ಸ್ಪೀಡ್ 120 ಕಿ.ಮೀಗಳಾಗಿದೆ. ಬಿಎಂಡಬ್ಲ್ಯು ಸಿಇ 04 ಸ್ಕೂಟರ್ 15 ಕಿಲೋವ್ಯಾಟ್, ಪರ್ಮನೆಂಟ್ ಮ್ಯಾಗ್ನೆಟ್, ಲಿಕ್ವಿಡ್ ಕೂಲ್ಡ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 41 ಬಿಹೆಚ್‌ಪಿ ಪವರ್ ಮತ್ತು 61 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದರ ಬ್ಯಾಟರಿ ಸಾಮರ್ಥ್ಯವು 8.9 ಕಿಲೋವ್ಯಾಟ್ ಇದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿ.ಮೀ ರೇಂಜ್ ನೀಡುತ್ತದೆ. ಬ್ಯಾಟರಿ ಖಾಲಿಯಾದ ನಂತರ, ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಶೇ100 ರಷ್ಟು ಚಾರ್ಜ್ ಮಾಡಲು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಹೈ ಸ್ಪೀಡ್ ಚಾರ್ಜರ್ ಮೂಲಕ ಕೇವಲ ಒಂದು ಗಂಟೆ ನಲವತ್ತು ನಿಮಿಷಗಳಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ವೈಶಿಷ್ಟ್ಯಗಳು: ಇದು ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್ ನೊಂದಿಗೆ 10.25 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ನಿಫ್ಟಿ ಸ್ಟೋರೇಜ್ ಕಂಪಾರ್ಟ್ಮೆಂಟ್ ಇದೆ, ಇದರಲ್ಲಿ ಗಾಳಿಯಾಡುವ ಜೊತೆಗೆ ನೀರು ಇಳಿಯದಂತೆ ನೋಡಿಕೊಳ್ಳುತ್ತದೆ. ಫೋನ್ ಅನ್ನು ಚಾರ್ಜ್ ಮಾಡಲು ಇದು ಯುಎಸ್‌ಬಿ ಟೈಪ್-ಸಿ ಚಾರ್ಜರ್ ಅನ್ನು ಸಹ ಹೊಂದಿದೆ.

ಸುರಕ್ಷತೆ: ವಾಹನದ ಸುರಕ್ಷತಾ ದೃಷ್ಟಿಯಿಂದ ಇಕೋ, ರೈನ್ ಮತ್ತು ರೋಡ್ ಎಂಬ ಮೂರು ರೈಡ್ ಮೋಡ್‌ಗಳನ್ನು ನೀಡಲಾಗಿದೆ. ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಪ್ರೊ ಅನ್ನು ಆಪ್ಷನಲ್ ಎಕ್ಸ್ಟ್ರಾಗಳಾಗಿ ನೀಡಲಾಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








