Pure EV: ದೀಪಾವಳಿಗೆ ಸಿಹಿಸುದ್ದಿ.. ಈ ಎಲೆಕ್ಟ್ರಿಕ್ ಬೈಕ್‌ಗಳಿಗೆ 20,000 ರಿಯಾಯಿತಿ, 99,999ಕ್ಕೆ ಹೊಸ ಗಾಡಿ!
ಹೈದರಾಬಾದ್ ಮೂಲದ ಪ್ಯೂರ್ ಇವಿ (Pure EV) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Two wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಇ-ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ದೊಡ್ಡ ಪ್ರಮಾಣದಲ್ಲಿ ಖರೀದಿದಾರರನ್ನು ಸೆಳೆಯಲು ಕಂಪನಿಯು ಸೀಮಿತ ಅವಧಿಗೆ ಇಕೋಡ್ರೈಫ್ಟ್ ಮತ್ತು ಇಟ್ರಿಸ್ಟ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ಭಾರಿ ರಿಯಾಯಿತಿ ಘೋಷಣೆ ಮಾಡಿದೆ.
ಪ್ಯೂರ್ ಇವಿ ಇಕೋಡ್ರೈಫ್ಟ್ (ecoDryft) ಹಾಗೂ ಇಟ್ರಿಸ್ಟ್ ಎಕ್ಸ್ (eTryst X) ಎಲೆಕ್ಟ್ರಿಕ್ ಬೈಕ್ ಖರೀದಿ ಮೇಲೆ ರೂ.20,000 ರಿಯಾಯಿತಿ ನೀಡಿದೆ. ಅಕ್ಟೋಬರ್ 24 ರಿಂದ ನವೆಂಬರ್ 10 ರವರೆಗೆ ಮಾತ್ರ ಈ ಹಣಕಾಸಿನ ಪ್ರಯೋಜನಗಳು ಲಭ್ಯವಾಗಲಿದ್ದು, ಇವೆರಡು ಇ-ಮೋಟಾರ್‌ಸೈಕಲ್‌ಗಳು ರೂ.99,999 ಆರಂಭಿಕ ಬೆಲೆಯನ್ನು ಹೊಂದಿವೆ.

ನೂತನ ಪ್ಯೂರ್ ಇವಿ ಇಕೋಡ್ರೈಫ್ಟ್ (Pure EV EcoDryft) ಎಲೆಕ್ಟ್ರಿಕ್ ಬೈಕ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 106 ರಿಂದ 151 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಈ ಪ್ಯೂರ್ ಇವಿ ಇಕೋಡ್ರೈಫ್ಟ್ ಇ-ಮೋಟಾರ್‌ಸೈಕಲ್ 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿರವ ಬ್ಯಾಟರಿ ಪ್ಯಾಕ್ 3 ಗಂಟೆಗಳಲ್ಲಿ 20 ರಿಂದ 80% ಚಾರ್ಜ್ ಆಗುತ್ತದೆ. ಕೇವಲ 10 ಸೆಕೆಂಡುಗಳಲ್ಲಿ 0-60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 95 ಕೆಜಿ ತೂಕವಿದೆ.
ನೂತನ ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಬೈಕ್ ರೆಡ್, ಬ್ಲ್ಯೂ, ಗ್ರೇ ಮತ್ತು ಬ್ಲ್ಯಾಕ್ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದೆ. ಇದು ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರೈವ್, ಕ್ರಾಸ್‌ಓವರ್ ಮತ್ತು ಥ್ರಿಲ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಡಿಸ್ಕ್ ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಪ್ಯೂರ್ ಇವಿ ಇಟ್ರಿಸ್ಟ್ ಎಕ್ಸ್ (Pure EV eTryst X) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕುರಿತಂತೆ ಮಾತನಾಡುವುದಾದರೆ, ಇದು 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 111 ರಿಂದ 171 ಕಿಲೋಮೀಟರ್‌ವರೆಗೆ ಓಡುತ್ತದೆ. 94 ಟಾಪ್ ಸ್ಪೀಡ್‌ನ್ನು ಹೊಂದಿದೆ.
ಈ ಇಟ್ರಿಸ್ಟ್ ಎಕ್ಸ್ ಇ-ಮೋಟಾರ್‌ಸೈಕಲ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ. ಇದರ ಬ್ಯಾಟರಿ ಪ್ಯಾಕ್ 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಬಿಡುತ್ತದೆ. ಡ್ರೈವ್, ಕ್ರಾಸ್‌ಓವರ್ ಮತ್ತು ಥ್ರಿಲ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಎಲ್ಇಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಒಟ್ಟಾರೆಯಾಗಿ ಪ್ಯೂರ್ ಇವಿ ಇಕೋಡ್ರೈಫ್ಟ್ ಹಾಗೂ ಇಟ್ರಿಸ್ಟ್ ಎಕ್ಸ್ ಎಲೆಕ್ಟ್ರಿಕ್ ಬೈಕ್‌ಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ಭಾರಿ ರಿಯಾಯಿತಿ ಪಡೆದುಕೊಂಡಿರುವುದರಿಂದ ಹೆಚ್ಚಿನ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ. ಇದರಿಂದ ಮಾರಾಟ ಪ್ರಮಾಣ ಸುಲಭವಾಗಿ ಹೆಚ್ಚಾಗುವ ನೀರಿಕ್ಷೆಯಿದೆ. ಮುಂಬರುವ ದಿನಗಳಲ್ಲಿ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








