DriveSpark: ಡ್ರೈವ್‌ಸ್ಪಾರ್ಕ್‌ನಿಂದ ಬೈಕಿಂಗ್ ಕಮ್ಯುನಿಟಿ ಆರಂಭ, ನೀವು ಸೇರಬಹುದು
ಭಾರತದ ಜನಪ್ರಿಯ ಆಟೋಮೋಟಿವ್ ಸುದ್ದಿ ಮಾಧ್ಯಮವಾಗಿ ಡ್ರೈವ್‌ಸ್ಪಾರ್ಕ್ (DriveSpark) ಗುರುತಿಸಿಕೊಂಡಿದೆ. ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅನಾಥಾಶ್ರಮ ಸೇರಿದಂತೆ ಇತರೆ ಸಾಮಾಜಿಕ ಕಾರ್ಯಗಳಿಗೆ ನೆರವಾಗುವ ಸಲುವಾಗಿ, ಉತ್ಸಾಹಿ ಬೈಕ್ ಸವಾರರು ತೊಡಗಿಸಿಕೊಳ್ಳಲು ಬೈಕಿಂಗ್ ಕಮ್ಯುನಿಟಿ (Biking Community)ಯನ್ನು ಪ್ರಾರಂಭಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 17ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ 13 ಬೈಕ್ ಸವಾರರು ಭಾಗವಹಿಸಿದ್ದರು. ಇಲ್ಲಿ 350ಸಿಸಿ ಯಿಂದ 1650ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ರಾಯಲ್ ಎನ್‌ಫೀಲ್ಡ್, ಇಂಡಿಯನ್, ಬಿಎಂಡಬ್ಲ್ಯೂ, ಹಾರ್ಲೆ ಡೇವಿಡ್ಸನ್, ಬಜಾಜ್, ಕವಾಸಕಿ, ಮತ್ತು ಕೆಟಿಎಂನಂತಹ ಹೆಸರಾಂತ ಕಂಪನಿಗಳ ವಿವಿಧ ಮೋಟಾರ್‌ಸೈಕಲ್‌ಗಳನ್ನು ಪ್ರದರ್ಶಿಸಲಾಯಿತು.

ಆ ಬಳಿಕ, ಇದೇ ಬೈಕ್‌ಗಳಲ್ಲಿ ಬ್ಯಾಕ್‌ಅಪ್ ವಾಹನದೊಂದಿಗೆ 125 ಕಿಲೋಮೀಟರ್ ಸವಾರಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಚೆನ್ನೈ, ಕೊಯಮತ್ತೂರು, ಮಧುರೈ, ಕೊಚ್ಚಿ, ಮುಂಬೈ ಮತ್ತು ಮಲೇಷ್ಯಾದಲ್ಲಿ ನಮ್ಮ ಬೈಕಿಂಗ್ ಕಮ್ಯುನಿಟಿಗೆ ಜೊತೆಯಾಗಲು ಹಲವಾರು ಮೋಟಾರ್‌ಸೈಕಲ್ ಪ್ರಿಯರು ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸವಾರಿ (ರೈಡ್)ಯನ್ನು ಏರ್ಪಡಿಸಲಿದ್ದೇವೆ.
ಪ್ರಪಂಚದ ನಾನಾ ಮೂಲೆಯಿಂದ ಕೂಡ ಡ್ರೈವ್‌ಸ್ಪಾರ್ಕ್ ಬೈಕಿಂಗ್ ಕಮ್ಯುನಿಟಿ ಸೇರಲು ಮನವಿಗಳು ಬರುತ್ತಿದ್ದು, ನೇಪಾಳ, ಭೂತಾನ್, ಮೇಘಾಲಯ, ಜರ್ಮನಿ, ಇಟಲಿ, ಸಿಂಗಾಪುರ ಹಾಗೂ ಶ್ರೀಲಂಕಾದಲ್ಲೂ ನಮ್ಮ ಜಾಲವನ್ನು ವಿಸ್ತರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ನೀವು ಕೂಡ ಉತ್ಸಾಹಿ ಮೋಟಾರ್‌ಸೈಕಲ್ ಸವಾರರಾಗಿದ್ದರೆ ನಮ್ಮ ಬೈಕಿಂಗ್ ಕಮ್ಯುನಿಟಿಗೆ ಸೇರ್ಪಡೆಯಾಗಬಹುದು.
ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಗತ್ಯವಾದ ವಿವರಗಳನ್ನು ತುಂಬಿ, 'ಸಲ್ಲಿಸಲು' ಎಂಬ ಆಯ್ಕೆಯನ್ನು ಒತ್ತಬೇಕು. ಆ ನಂತರ ಡ್ರೈವ್‌ಸ್ಪಾರ್ಕ್ ಬೈಕಿಂಗ್ ಕಮ್ಯುನಿಟಿ ಸೇರುವ ಸಂಬಂಧ ವಾಟ್ಸಪ್ ಲಿಂಕ್ ಪಡೆಯುತ್ತಿರಿ. ಅಲ್ಲಿ ರೈಡ್ (ಸವಾರಿ) ಎಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾಹಿತಿಯನ್ನು ಕಾಲ ಕಾಲಕ್ಕೆ ಪಡೆಯುತ್ತೀರಿ.
ಅಸಂಖ್ಯಾತ ಆಟೋಮೋಟಿವ್ ಓದುಗರಿಗಾಗಿ ಡ್ರೈವ್‌ಸ್ಪಾರ್ಕ್ (DriveSpark) ವೆಬ್‌ಸೈಟ್‌ನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಸದ್ಯ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಾರು, ಬೈಕ್, ವೈರಲ್, ಟೆಸ್ಟ್ ಡ್ರೈವ್ ಸಂಬಂಧಿಸಿದ ಸುದ್ದಿ ಹಾಗೂ ವಿಡಿಯೋಗಳನ್ನು ಒದಗಿಸುತ್ತಿವೆ. ವಿಶೇಷವಾಗಿ ಕನ್ನಡ ಡ್ರೈವ್‌ಸ್ಪಾರ್ಕ್ ಫೇಸ್‌ಬುಕ್‌ನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದೆ.


Click it and Unblock the Notifications








