ಬಡವರು ಖರೀದಿಸಬಹುದು.. ಈ ಬೈಕ್‌ಗಳು ಕಡಿಮೆ ಬೆಲೆಗೆ ಸಿಗುತ್ತವೆ: ಮೈಲೇಜ್ ಕೂಡ ಸೂಪರ್!

ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ಕೆಲಸಗಳಿಗೆ ದ್ವಿಚಕ್ರ ವಾಹನಗಳು ಅನಿವಾರ್ಯವಾಗಿವೆ. ಇಲ್ಲಿ ಕೈಗೆಟುಕುವ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡುವ ಹೀರೋ ಪ್ಯಾಶನ್ ಪ್ಲಸ್, ಬಜಾಜ್ ಪ್ಲಾಟಿನಾ 110, ಹೋಂಡಾ ಶೈನ್ 100 ಬೈಕ್‌ಗಳ ಕುರಿತು ವಿವರಿಸಿದ್ದೇವೆ.

ಮೊದಲಿಗೆ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬಗ್ಗೆ ಮಾತನಾಡೋಣ. ಇದು ರೂ.77,361 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ.

Economic Price Bikes Poor People Also Buy Easily Hero Passion Plus Bajaj Platina 110 Honda Shine 100

ಈ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್ ಸುಮಾರು 70 ಕೆಎಂಪಿಎಲ್ ಕೊಡುತ್ತದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಆಕರ್ಷಕ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಪಡೆದಿದೆ. ಬ್ಲ್ಯಾಕ್ ಹೆವಿ ಗ್ರೇ, ಬ್ಲ್ಯಾಕ್ ಗ್ರೇ ಸ್ಟ್ರೈಪ್, ಸ್ಪೋರ್ಟ್ಸ್, ಬ್ಲ್ಯಾಕ್ ನೆಕ್ಸಸ್ ಬ್ಲೂ ಬಣ್ಣಗಳೊಂದಿಗೂ ಸಿಗುತ್ತದೆ.

ಬಜಾಜ್ ಪ್ಲಾಟಿನಾ 110 (Bajaj Platina 110) ಬೈಕ್ ರೂ.70,451 ದಿಂದ 80,012 ಎಕ್ಸ್ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಇದು 115.45 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 8.6 ಪಿಎಸ್ ಗರಿಷ್ಠ ಪವರ್ ಮತ್ತು 9.81 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

Economic Price Bikes Poor People Also Buy Easily Hero Passion Plus Bajaj Platina 110 Honda Shine 100

ಈ ಪ್ಲಾಟಿನಾ 110 ಮೋಟಾರ್‌ಸೈಕಲ್, 70 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 123 ಕೆಜಿ ತೂಕವಿರುವ ಈ ಬೈಕ್, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿದೆ. ಟ್ಯೂಬ್ ಲೈಸ್ ಟೈಯರ್ಸ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ (DRL), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಹೋಂಡಾ ಶೈನ್ 100 (Honda Shine 100) ಬೈಕ್, ರೂ.66,600 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 98.98 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 7.38 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

Economic Price Bikes Poor People Also Buy Easily Hero Passion Plus Bajaj Platina 110 Honda Shine 100

ಈ ಶೈನ್ ಮೋಟಾರ್‌ಸೈಕಲ್, 55 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 9-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಪಡೆದಿದೆ. 99 ಕೆಜಿ ತೂಕವಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಶೈನ್ ಬೈಕ್‌ಗೆ ಹೀರೋ ಹೆಚ್ಎಫ್ ಡಿಲಕ್ಸ್, ಬಜಾಜ್ ಪ್ಲಾಟಿನಾ 100 ಪ್ರಬಲ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, March 31, 2024, 10:30 [IST]
English summary
Economic price bikes poor people also buy easily hero passion plus bajaj platina 110 honda shine 100
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+