ದಿನನಿತ್ಯದ ಬಳಕೆಗೆ ಬೆಸ್ಟ್ ಸ್ಕೂಟರ್‌ಗಳಿವು.. ಬೆಲೆಯೂ ಕಮ್ಮಿ, ಭಾರೀ ಮೈಲೇಜ್
ನೀವು ದಿನನಿತ್ಯದ ಬಳಕೆಗೆ ಹೊಸ ಸ್ಕೂಟರ್‌ನ್ನು ಖರೀದಿಸಲು ಆಲೋಚಿಸಿದ್ದರೆ, ಟಿವಿಎಸ್ ಜೂಪಿಟರ್ 125, ಸುಜುಕಿ ಆಕ್ಸೆಸ್ 125, ಹೀರೋ ಪ್ಲೆಷರ್ ಪ್ಲಸ್ ಉತ್ತಮ ಆಯ್ಕೆಯಾಗಬಲ್ಲವು. ಇವು ಕೈಗೆಟುಕುವ ಬೆಲೆಯಲ್ಲಿ ಸಿಗುವುದರೊಂದಿಗೆ ಗರಿಷ್ಠ ಮೈಲೇಜ್ ಕೂಡ ನೀಡುತ್ತವೆ. ಬನ್ನಿ.. ಈ ಸ್ಕೂಟರ್‌ಗಳ ವಿಶೇಷತೆಗಳ ಬಗ್ಗೆ ತಿಳಿಯೋಣ.
ಟಿವಿಎಸ್ ಜೂಪಿಟರ್ 125 (TVS Jupiter 125), ರೂ.89,155 ರಿಂದ 99,805 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು ಡ್ರಮ್, ಡಿಸ್ಕ್, ಸ್ಮಾರ್ಟ್ ಕನೆಕ್ಟ್ ರೂಪಾಂತರ ಹಾಗೂ ಪ್ರಿಸ್ಟಿನ್ ವೈಟ್, ಇಂಡಿಬ್ಲೂ, ಡಾನ್ ಆರೆಂಜ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಜೂಪಿಟರ್ 125 ಸ್ಕೂಟರ್ 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.2 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ನಗರದಲ್ಲಿ 57.27 ಕೆಎಂಪಿಎಲ್ ಹಾಗೂ ಹೆದ್ದಾರಿಯಲ್ಲಿ 52.91 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಜೊತೆಗೆ 108 ಕೆಜಿ ತೂಕವಿದೆ.
ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ರೂ.83,482 ರಿಂದ 94,082 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು 124 ಸಿಸಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.7 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 10 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 45 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಲು ಸಾಧ್ಯವಾಗುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ ಮುಂಭಾಗ (ಫ್ರಂಟ್) ಡಿಸ್ಕ್ ಅಥವಾ ಡ್ರಮ್, ಹಿಂಭಾಗ (ರೇರ್) ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದು ಸರಿ ಸುಮಾರು 103 ಕೆಜಿ ತೂಕವಿದೆ.
ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಸ್ಕೂಟರ್, ರೂ.71,788 ರಿಂದ 83,918 ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಇದು ಎಲ್ಎಕ್ಸ್, ವಿಎಕ್ಸ್ ಸೇರಿದಂತೆ 3 ರೂಪಾಂತರ ಮತ್ತು ಪರ್ಲ್ ಸಿಲ್ವರ್ ವೈಟ್, ಮ್ಯಾಟ್ ವರ್ನಿಯರ್ ಗ್ರೇ, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ ರೆಡ್, ಮ್ಯಾಟ್ ಮೆಡ್ ರೆಡ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.
ಈ ಪ್ಲೆಷರ್ ಪ್ಲಸ್ ಸ್ಕೂಟರ್ 110.9 ಸಿಸಿ ಎಂಜಿನ್ ಪಡೆದಿದ್ದು, 8.1 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 50 ಕೆಎಂಪಿಎಲ್ ಮೈಲೇಜ್ ಕೊಡಲಿದ್ದು, 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಅನ್ನು ಹೊಂದಿದೆ. ಜೊತೆಗೆ 106 ಕೆಜಿ ತೂಕವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








