Famous Scootes: 80,000 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಪ್ರಮುಖ ಕಂಪನಿಯ ಸ್ಕೂಟರ್‌ಗಳಿವು
ಭಾರತದಲ್ಲಿ ಸ್ಕೂಟರ್‌ಗಳು (Scootes) ಯುವಕರಿಂದ ಹಿರಿಯರವರೆಗೆ ಎಲ್ಲರಿಗೂ ಮೆಚ್ಚಿನ ದ್ವಿಚಕ್ರ ವಾಹನಗಳಾಗಿವೆ. ಆದರೆ, ಈಗಲೂ ಹೊಸ ಸ್ಕೂಟರ್ ಖರಿಸುವವರಿಗೆ ತಮ್ಮ ಬಜೆಟ್ ಬೆಲೆಗೆ ಯಾವ ಸ್ಕೂಟರ್ ಉತ್ತಮ, ಮೈಲೇಜ್ ಎಷ್ಟಿರಲಿದೆ ಎಂಬ ಹಲವು ಗೊಂದಲವಿರುತ್ತದೆ. ಇಲ್ಲಿ 80,000ಕ್ಕಿಂತ ಕಡಿಮೆ ಬೆಲೆಗೆ ದೊರೆಯುವ ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಮೊದಲಿಗೆ ಹೋಂಡಾ ಆಕ್ಟಿವಾ 6ಜಿ (Honda Activa 6G) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂಪಾಂತರಗಳಿಗೆ ಅನುಗುಣವಾಗಿ ರೂ.76,234 ದಿಂದ ರೂ.82,734 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್, 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7.79 PS ಗರಿಷ್ಠ ಪವರ್, 8.84 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 45 - 50 kmpl ಮೈಲೇಜ್ ನೀಡುತ್ತದೆ.

ಆಕ್ಟಿವಾ 6ಜಿ ಸ್ಕೂಟರ್ ಬೆಲೆಗೆ ಅನುಗುಣ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪೀಡೋಮೀಟರ್, ಓಡೋಮೀಟರ್, ಫ್ಯುಯೆಲ್ ಗೇಜ್ ಬಗ್ಗೆ ಮಾಹಿತಿ ಒದಗಿಸಲು ಅನಲಾಗ್ ಯುನಿಟ್ ಅನ್ನು ಹೊಂದಿದ್ದು, 85 Kmph ಟಾಪ್ ಸ್ವೀಡ್ ಪಡೆಯಲಿದೆ. 106 ಕೆಜಿ ತೂಕವಿರುವ ಈ ಸ್ಕೂಟರ್, ಎಲ್ಇಡಿ ಹೆಡ್ ಲೈಟ್, ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಬ್ಲೂ, ರೆಡ್, ಯೆಲ್ಲೋ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಲಭ್ಯವಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸೆಸ್ 125 (Suzuki Access 125) ಸಹ ಜನಪ್ರಿಯ ಸ್ಕೂಟರ್ ಆಗಿದೆ. ವೇರಿಯೆಂಟ್ಸ್ ಅನ್ವಯ ರೂ.79,899 ದಿಂದ ರೂ.90,500 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು 124 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 8.5 bhp ಪವರ್, 10 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 45 kmpl ವರೆಗೆ ಮೈಲೇಜ್ ಕೊಡುತ್ತದೆ.

ಈ ಸುಜುಕಿ ಆಕ್ಸೆಸ್ 125, ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಎಲ್ಇಡಿ ಹೆಡ್ ಲೈಟ್, ಸೆಮಿ ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್, ಇಕೋ ಅಸಿಸ್ಟ್ ಇಂಡಿಕೇಟರ್ ಒಳಗೊಂಡಂತೆ ಹಲವು ಫೀಚರ್ಸ್ ಪಡೆದಿದೆ. 103 ಕೆಜಿ ತೂಕವಿರುವ ಈ ಸ್ಕೂಟರ್‌ನ ಬೇಸ್ ವೇರಿಯೆಂಟ್ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಉಳಿದಿಲ್ಲ ಮಾದರಿಗಳು ಮುಂಭಾಗ ಡಿಸ್ಕ್, ಹಿಂಭಾಗ ಡ್ರಮ್ ಬ್ರೇಕ್ ಹೊಂದಿವೆ.
ಹೀರೋ ಜೂಮ್ (Hero Xoom) ಕುರಿತು ಹೇಳುವುದಾದರೆ, ಇದು ರೂ.71,484 ರಿಂದ ರೂ.79,967 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎಲ್ಎಕ್ಸ್, ವಿಎಕ್ಸ್ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ವಿನ್ಯಾಸದ ದೃಷ್ಟಿಯಿಂದಲೂ ಅತ್ಯಾಧುನಿಕವಾಗಿದ್ದು, ಬ್ರೈಟ್ ಎಲ್ಇಡಿ ಹೆಡ್‌ಲೈಟ್, ಹೆಚ್-ಆಕಾರದ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. ಜೊತೆಗೆ 12-ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದುಕೊಂಡಿದೆ.

ಈ ಹೀರೋ ಜೂಮ್ ಸ್ಕೂಟರ್, 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.05 bhp ಗರಿಷ್ಠ ಪವರ್ ಹಾಗೂ 8.70 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಐ3ಎಸ್ ಐಡಲ್ ಸ್ಟಾರ್ಟ್/ ಸ್ಟಾಪ್ ತಂತ್ರಜ್ಞಾನವನ್ನು ಪಡೆದಿದ್ದು, 45 kmpl ಮೈಲೇಜ್ ನೀಡುತ್ತದೆ. ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್, ಬ್ಲ್ಯಾಕ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ವೈಶಿಷ್ಟ್ಯದ ವಿಚಾರಗಳ ಬಗ್ಗೆ ಮಾತನಾಡುವುದರೆ, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಅನ್ನು ಹೊಂದಿದೆ. ಇಲ್ಲಿ ಕಾಲರ್ ಐಡಿ, ಇನ್-ಕಮಿಂಗ್ ಕಾಲ್, ಮೆಸೇಜ್ ಸೇರಿದಂತೆ ವಿವಿಧ ಮಾಹಿತಿ ಲಭ್ಯವಾಗುತ್ತದೆ. ಸುರಕ್ಷತೆಯ ಸಲುವಾಗಿ ಮುಂಭಾಗ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗ ಡ್ರಮ್ ಬ್ರೇಕ್ ಪಡೆದಿದ್ದು, 109 ಕೆಜಿ ತೂಕವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications