ಬೆಲೆ ಕೇವಲ 1.19 ಲಕ್ಷ ರೂ.: 130 ಕಿ.ಮೀ ರೇಂಜ್ ನೀಡುವ ಹೊಸ 'ಜಿಟಿ ಟೆಕ್ಸಾ' ವಿಶೇಷತೆಗಳು!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ 'ಜಿಟಿ ಫೋರ್ಸ್' ಇತ್ತೀಚೆಗೆ ಜಿಟಿ ಟೆಕ್ಸಾ ಎಂಬ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ರೂ. 1,19,555 ಎಕ್ಸ್ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿದೆ. ಇದು ಒಂದೇ ಚಾರ್ಜ್‌ನಲ್ಲಿ 120 ರಿಂದ 130 ಕಿ.ಮೀ ರೇಂಜ್ ನೀಡುತ್ತದೆ. ಇದಕ್ಕೆ ನೀಡಲಾಗಿರುವ ಆಧುನಿಕ ಮೈಕ್ರೋ-ಚಾರ್ಜರ್‌ನೊಂದಿಗೆ, ಮೋಟಾರ್‌ಸೈಕಲ್ ಅನ್ನು ಕೇವಲ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಹೊಸ ಮೋಟಾರ್‌ ಸೈಕಲ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಹೊಸ GT ಟೆಕ್ಸಾ ಮೋಟಾರ್‌ಸೈಕಲ್, ಹೆಚ್ಚು ಇನ್ಸುಲೇಟೆಡ್ BLDC ಮೋಟಾರ್ ಅನ್ನು ಹೊಂದಿದ್ದು, 80 ಕಿ.ಮೀ ಗರಿಷ್ಟ ವೇಗವನ್ನು ತಲುಪಬಲ್ಲ ಸಾಮರ್ಥ್ಯದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ, ರಾಜಿಯಾಗದ ಪರ್ಫಾಮೆನ್ಸ್ ನೀಡುತ್ತದೆ. ಹಾಗೆಯೇ ಈ ಮೋಟಾರ್‌ಸೈಕಲ್‌ನಲ್ಲಿ 3.5 kWh Lithium-Ion ಬ್ಯಾಟರಿಯನ್ನು ಅಳವಡಿಸಲಾಗಿದ್ದು, 130 ಕಿ.ಮೀ ರೇಂಜ್ ನೀಡುತ್ತದೆ.

gt-texa-electric-motorcycle-price-features-range-details

ವೈಶಿಷ್ಟ್ಯಗಳು: ಹೊಸ GT ಟೆಕ್ಸಾ ಮೋಟಾರ್‌ಸೈಕಲ್‌ನಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಎಲ್ಇಡಿ ಹೆಡ್ಲೈಟ್, ಟೈಲ್ ಲೈಟ್ ಮತ್ತು ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಫ್ಯೂಚರಿಸ್ಟಿಕ್ ಆಗಿ ನೀಡಲಾಗಿದೆ. ಸವಾರರು ರಿಮೋಟ್ ಸ್ಟಾರ್ಟ್ ಅಥವಾ ಕೀಲಿಯನ್ನು ಬಳಸಿಕೊಂಡು ಈ ಬೈಕ್ ಅನ್ನು ಪ್ರಾರಂಭಿಸಬಹುದು, ಇದರಲ್ಲಿನ 17.78 CM LED ಡಿಸ್ಪ್ಲೇ ಅನುಕೂಲಕರ ಮಾಹಿತಿಯನ್ನು ಒದಗಿಸುತ್ತದೆ.

ಬ್ರೇಕಿಂಗ್ & ಟೈರ್: GT ಟೆಕ್ಸಾ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಎರಡೂ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ ನೀಡಿಲಾಗಿದೆ, ಹಾಗೆಯೇ ಉತ್ತಮ ಬ್ರೇಕಿಂಗ್‌ಗಾಗಿ E-ABS ಇದೆ. ಟೈರ್‌ಗಳಿಗೆ ಅನುಗುಣವಾಗಿ ಮುಂಭಾಗದಲ್ಲಿ 457.2 ಎಂಎಂ ಮತ್ತು ಹಿಂಭಾಗದಲ್ಲಿ 431.8 ಎಂಎಂ ಅಳತೆಯ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.

gt-texa-electric-motorcycle-price-features-range-details

770 ಮಿ.ಮೀ ಸ್ಯಾಡಲ್ ಎತ್ತರ ಮತ್ತು 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 120 ಕೆ.ಜಿ ಹಗುರವಾದ ಕರ್ಬ್ ತೂಕದಿಂದ ಸವಾರರು ಸುಲಭವಾಗಿ ಬೈಕ್ ಅನ್ನು ನಿಯಂತ್ರಿಸಬಹುದು. ಕಂಪನಿಯು ಕೇವಲ ಈ ಒಂದು ಮೋಟಾರ್‌ ಸೈಕಲ್ ಮಾತ್ರವಲ್ಲದೇ ರೂ. 55,555 ದಿಂದ ಆರಂಭಿಸಿ ರೂ. 84,555 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಕೈಗೆಟುಕುವ ದ್ವಿಚಕ್ರ ವಾಹನಗಳನ್ನು ನೀಡುತ್ತಿದೆ.

ಬ್ಲಾಕ್ & ರೆಡ್ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ GT ಟೆಕ್ಸಾ ಮೋಟಾರ್‌ಸೈಕಲ್, 180 ಕೆ.ಜಿ ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿಗಳ ಗ್ರೇಡಬಿಲಿಟಿಯೊಂದಿಗೆ ನಗರ ಪ್ರದೇಶಗಳಲ್ಲಿ ಸಲೀಸಾಗಿ ರೈಡ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ನೀಡಲಾಗಿದ್ದು, ಒರಟಾದ ರಸ್ತೆಗಳಲ್ಲಿಯೂ ಆರಾಮದಾಯಕ ಸವಾರಿ ಮಾಡಬಹುದು ಎಂದು ಕಂಪನಿ ತಿಳಿಸಿದೆ.

gt-texa-electric-motorcycle-price-features-range-details

GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಸೇರಿದಂತೆ GT ಯ ಇತ್ತೀಚಿನ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ-ವೇಗದ EV ದ್ವಿಚಕ್ರ ವಾಹನಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ತನ್ನ ಪರಿಸರ ಸ್ನೇಹಿ ವಾಹನಗಳನ್ನು ಹೆಚ್ಚಿಸಲು, 2024ರ ಅಂತ್ಯದ ವೇಳೆಗೆ ಒಟ್ಟು 100 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 28, 2024, 13:33 [IST]
English summary
Gt texa electric motorcycle price features range details
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+