ಬ್ರಿಟೀಷ್ ಮಾರುಕಟ್ಟೆಯನ್ನು ಆಳಲು ಹೊರಟ ಭಾರತೀಯ ಬೈಕ್: ಯುಕೆ ನಲ್ಲಿ ಟ್ರಯಂಫ್‌ಗೆ ನೇರ ಹಣಾಹಣಿ!
ಇತ್ತೀಚೆಗೆ ಪ್ರಖ್ಯಾತ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಾದ ಹೀರೋ ಕೆಲ ತಿಂಗಳ ಹಿಂದೆಯಷ್ಟೇ ಹೀರೋ ಮಾರ್ವಿಕ್ ಎಂಬ 400 ಸಿಸಿ ಸೆಗ್ಮೆಂಟ್‌ನ ಬೈಕ್ ಒಂದನ್ನು ಬಿಡುಗಡೆ ಮಾಡಿತ್ತು. ಹಾರ್ಲೆ ಮತ್ತು ಹೀರೋ ಸಹಯೋಗದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಎಕ್ಸ್440 ಎಂಬ ಬೈಕನ್ನು ಹಾರ್ಲೆ ಡೇವಿಡ್ಸನ್ ಲಾಂಚ್ ಮಾಡಿತ್ತು.
ಹಾರ್ಲೆ ಡೇವಿಡ್ಸನ್ ಎಕ್ಸ್440 (Hero Marvick 440) ಬೈಕ್‌ನಲ್ಲಿರುವ ಅದೇ ಎಂಜಿನ್ ಬಳಸಿಕೊಂಡು ಹೀರೋ ತನ್ನ ಮಾರ್ವಿಕ್ 440 ಬೈಕ್ ಅನ್ನು ಸಿದ್ದಗೊಳಿಸಿತ್ತು. ಆಕರ್ಷಕ ಲುಕ್ ಮತ್ತು ಉತ್ತಮ ಪರ್ಫಾಮೆನ್ಸ್ ನಿಡುವ ಈ ಬೈಕ್, ಇದೀಗ ನಿಧಾನವಾಗಿ ಭಾರತೀಯರ ಫೇವರೀಟ್ ಆಗಿ ಬದಲಾಗುವ ಕಾಲ ದೂರವಿಲ್ಲ. ಇದೀಗ ಈ ಬೈಕ್ ಯುನೈಟೆಡ್ ಕಿಂಗ್‌ಡಂ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ತಿಳಿದು ಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇರುವಂತೆಯೇ, ಯುಕೆ ಮಾರುಕಟ್ಟೆಯಲ್ಲೂ ಈ ಬೈಕ್, ಟ್ರಯಂಫ್ ಸ್ಪೀಡ್ ೪೦೦ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳೊಂದಿಗೆ ಪೈಪೋಟಿಗೆ ಬೀಳಲಿದೆ ಎಂದು ತಿಳಿದು ಬಂದಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಜಾಗತಿಕ ಮಾರುಕಟ್ಟೆಗೆ ತನ್ನ ಮಾರ್ವಿಕ್ 440 ಬೈಕ್ ಅನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೀರೋ ಮಾರ್ವಿಕ್‌ನ ಕುರಿತಾಗಿ ನೋಡುವುದಾದರೆ, ಹೀರೋ ಮಾರ್ವಿಕ್ ಬೈಕ್ (Hero Marvick 440) 440 ಸಿಸಿ ಆಯಿಲ್/ ಏರ್ - ಕೋಲ್ಡ್ ಎಂಜಿನ್ ಹೊಂದಿದೆ. ಈ ಮೇಲೆ ತಿಳಿಸಿದಂತೆ ಹೀರೋ ಕಂಪನಿ ಮಾರುಕಟ್ಟೆಗೆ ತಂದ ಮೊದಲ 400ಸಿಸಿ ಸೆಗ್ಮೆಂಟ್ ಬೈಕ್ ಇದಾಗಿದೆ. ಇದು ಮಾತ್ರವಲ್ಲದೇ ಹೀರೋ ತನ್ನ ಪ್ರಸಿದ್ದ ಬೈಕ್ ಮಾಡೆಲ್ ಆದ ಎಕ್ಸ್‌ಪಲ್ಸ್ ನ 400 ಸಿಸಿ ಆವೃತ್ತಿಯನ್ನು ಸಹ ಅಭಿವೃದ್ದಿ ಪಡಿಸುತ್ತಿದ್ದು, ಆದಷ್ಟು ಬೇಗ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ.

ಇನ್ನು ಹೀರೋ ಮಾರ್ವಿಕ್ ತನ್ನ 440 ಸಿಸಿ ಎಂಜಿನ್ ಸಹಾಯದಿಂದ ಸುಮಾರು 26 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 37 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಹೀರೋ ಮಾವ್ರಿಕ್ 440 ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ (ರೇರ್) 7 - ಸ್ಟೆಪ್ ಅಡ್ಜಸ್ಟ್ಏಬಲ್ ಟ್ವಿನ್ ಶಾಕ್ ಸೆಟಪ್ ಅನ್ನು ಹೊಂದಿದೆ. ಆಸನ (ಸೀಟ್) ಎತ್ತರ 803 ಎಂಎಂ ಇದೆ. ವೀಲ್‌ಬೇಸ್ 1388 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಅಳತೆಯಲ್ಲಿದ್ದು, ಈ ಬೈಕ್ 191 ಕೆಜಿ ತೂಕವಿದೆ.

ಹೀರೋ ಮಾರ್ವಿಕ್‌ನ ಬೆಲೆಯನ್ನು ನೋಡುವುದಾದರೆ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಸುಮಾರು ಎರಡೂ ಕಾಲು ಲಕ್ಷದೊಳಗೆ ಒಂದು ಕ್ರೂಸರ್ ಪವರ್‌ಫುಲ್ ಬೈಕ್ ಬೇಕೆನ್ನುವವರಿಗೆ ಹೀರೋ ಮಾರ್ವಿಕ್ 440 ಒಂದು ಉತ್ತಮ ಆಯ್ಕೆಯಾಗಬಲ್ಲದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








