Hero Mavrick 440: ಹೀರೋ ಮಾವ್ರಿಕ್ 440 ಬೈಕ್ ವಿಡಿಯೋ ರಿವ್ಯೂ, ಹೇಗಿದೆ ಗೊತ್ತಾ?
ಗುಜರಾತ್‌ನ ರಾನ್ ಆಫ್ ಕಚ್ (Rann of Katch)ನಲ್ಲಿ ಹೊಸ ಹೀರೋ ಮಾವ್ರಿಕ್ 440 (Hero Mavrick 440) ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ ಮಾಡಲು ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ಅವಕಾಶ ದೊರೆಯಿತು. ಈ ಬೈಕ್ ಹೇಗೆ ಕಾರ್ಯನಿರ್ವಹಿಸುತ್ತದೆ. ವಿನ್ಯಾಸ, ವೈಶಿಷ್ಟ್ಯಗಳೇನು ಎಂಬುದರ ಬಗ್ಗೆ ವಿಡಿಯೋ ವಿಮರ್ಶೆ ಇಲ್ಲಿದೆ.
ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೋ (Hero), ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡಲು ಇತ್ತೀಚೆಗೆ ಮಾವ್ರಿಕ್ 440 (Mavrick 440) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿತ್ತು. ಇದರ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.
ಈ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ನೋಡಲು ಸ್ಟೈಲಿಶ್ ಲುಕ್‌ನ್ನು ಒಳಗೊಂಡಿದೆ. ಮುಸ್ಕ್ಯುಲರ್ ಫ್ಯುಯೆಲ್ (ಇಂಧನ) ಟ್ಯಾಂಕ್, ದಪ್ಪನಾದ ಚಕ್ರ (Wheels)ಗಳನ್ನು ಪಡೆದಿದೆ. ರೌಂಡ್ ಹೆಡ್‌ಲೈಟ್, 'ಹೆಚ್' ಆಕಾರದ ಡಿಆರ್‌ಎಲ್ ಖರೀದಿದಾರರನ್ನು ಸೆಳೆಯುತ್ತದೆ. ಹಿಂಭಾಗದ ವಿನ್ಯಾಸವು ಅತ್ಯುತ್ತಮವಾಗಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ನೂತನ ಹೀರೋ ಮಾವ್ರಿಕ್ 440 (Hero Mavrick 440) ಮೋಟಾರ್‌ಸೈಕಲ್ 440 ಸಿಸಿ ಆಯಿಲ್/ ಏರ್ - ಕೋಲ್ಡ್ ಎಂಜಿನ್ ಹೊಂದಿದ್ದು, 26 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 37 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಈ ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ (ರೇರ್) 7-ಸ್ಟೆಪ್ ಅಡ್ಜಸ್ಟ್ಏಬಲ್ ಟ್ವಿನ್ ಶಾಕ್ ಸೆಟಪ್ ಅನ್ನು ಹೊಂದಿದೆ. ಹಾಗೆಯೇ ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಮುಂಭಾಗ 320 ಎಂಎಂ ಮತ್ತು ಹಿಂಭಾಗ 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.
ಹೀರೋ ಮಾವ್ರಿಕ್ 440 ಮೋಟಾರ್‌ಸೈಕಲ್ ಆಸನ (ಸೀಟ್) ಎತ್ತರ 803 ಎಂಎಂ ಇದೆ. ವೀಲ್‌ಬೇಸ್ 1388 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಅಳತೆಯಲ್ಲಿದ್ದು, ಈ ಬೈಕ್ 191 ಕೆಜಿ ತೂಕವಿದೆ. ಇನ್ನು, ಕೈಗೆಟುಕುವ ಬೆಲೆಯಲ್ಲಿ ಉತ್ತಮವಾದ ಬೈಕ್ ಖರೀದಿಸಲು ಎದುರು ನೋಡುತ್ತಿರುವವರಿಗೆ ಇದು ಸರಿಯಾದ ಆಯ್ಕೆಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








