ಒಂದೇ ವರ್ಷದಲ್ಲಿ 56 ಲಕ್ಷ ಬೈಕ್‌ ಮಾರಿದ ಭಾರತೀಯ ಕಂಪನಿ: ಅತಿರಥ, ಮಹಾರಥರೇ ಥರ ಥರ!

ಹೀರೋ ಮೋಟೋಕಾರ್ಪ್‌ ಭಾರತದ ಅತ್ಯಂತ ಪ್ರಸಿದ್ದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ. ಇದು ಭಾರತದಲ್ಲಿ ಮಾತ್ರವಲ್ಲದೇ, ಸತತ 23 ವರ್ಷಗಳಿಂದಲೇ ವಿಶ್ವದಲ್ಲೇ ಅತ್ಯಂತ ದೊಡ್ಡ ಬೈಕ್‌ ನಿರ್ಮಾಣ ಕಂಪನಿಯಾಗಿದೆ. ಗ್ರಾಹಕರ ನಾಡಿ ಮಿಡಿತವನ್ನು ಅರಿತಿರುವ ಹೀರೋ, ಹಲವು ಪ್ರಸಿದ್ದ ಬೈಕ್‌ಗಳನ್ನು ಮಾರುಕಟ್ಟೆಗೆ ತಂದಿದೆ.

ಸತತವಾಗಿ ಎಲ್ಲಾ ಆರ್ಥಿಕ ವರ್ಷವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬರುತ್ತಿರುವ ಹೀರೋ, ಇದೀಗ 2023 ರ ಆರ್ಥಿಕ ವರ್ಷವನ್ನು ಸಹ ಭರ್ಜರಿಯಾಗಿಯೇ ಮುಗಿಸಿದೆ. ಮಾಹಿತಿಗಳ ಪ್ರಕಾರ ಹೀರೋ ಕಂಪನಿಯು 2023-24 ಆರ್ಥಿಕ ವರ್ಷದಲ್ಲಿ ಸುಮಾರು 56,21,455 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಕೇವಲ ಮಾರ್ಚ್‌ ತಿಂಗಳಲ್ಲಿ ಮಾತ್ರವೇ ಸುಮಾರು 4.9 ಯೂನಿಟ್‌ಗಳನ್ನು ಭಾರತದ ಒಳಗೆ ಮತ್ತು ಹೊರಗೆ ಮಾರಾಟ ಮಾಡಿದೆ ಎಂದು ತಿಳಿದು ಬಂದಿದೆ.

Hero Motocorp Sells 56 Lakh Units In 2023-24 Financial Year

ಇನ್ನು ಹೀರೋ ಕಂಪನಿಯ ಎಲೆಕ್ಟ್ರಿಕ್‌ ವಾಹನಗಳು ಸಹ ಸಾಕಷ್ಟು ಮಾರಾಟವನ್ನು ಪಡೆದುಕೊಂಡಿದ್ದು, ಈಗಾಗಲೇ ಹೀರೋ, ಮತ್ತೊಂದು ಪ್ರಸಿದ್ದ ಇವಿ ನಿರ್ಮಾಣ ಕಂಪನಿಯಾದ ಏಥರ್ ಜೊತೆ ಸೇರಿ ಭಾರತದ 100 ಕ್ಕೂ ಅಧಿಕ ನಗರಗಳಲ್ಲಿ 2000 ಚಾರ್ಜಿಂಗ್‌ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಈಗಾಗಲೇ ಹಲವಾರು ಬೈಕ್‌ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಗೆ ಬಿಟ್ಟಿರುವ ಹೀರೋ, ಜನರ ಮೆಚ್ಚುಗೆಗೆ ಪಾತ್ರವಾದ ಮಾಡೆಲ್‌ಗಳಲ್ಲಿ ಮಾರ್ವಿಕ್‌ ಸಹ ಒಂದು. ಹಾರ್ಲೆ ಡೇವಿಡ್ಸನ್‌ ಎಕ್ಸ್‌440 (Hero Marvick 440) ಬೈಕ್‌ನಲ್ಲಿರುವ ಅದೇ ಎಂಜಿನ್‌ ಬಳಸಿಕೊಂಡು ಹೀರೋ ತನ್ನ ಮಾರ್ವಿಕ್‌ 440 ಬೈಕ್‌ ಅನ್ನು ಸಿದ್ದಗೊಳಿಸಿತ್ತು. ಆಕರ್ಷಕ ಲುಕ್‌ ಮತ್ತು ಉತ್ತಮ ಪರ್ಫಾಮೆನ್ಸ್‌ ನಿಡುವ ಈ ಬೈಕ್‌, ಇದೀಗ ನಿಧಾನವಾಗಿ ಭಾರತೀಯರ ಫೇವರೀಟ್‌ ಆಗಿ ಬದಲಾಗುವ ಕಾಲ ದೂರವಿಲ್ಲ.

Hero Motocorp Sells 56 Lakh Units In 2023-24 Financial Year

ಹೀರೋ ಮಾರ್ವಿಕ್‌ನ ಬೆಲೆಯನ್ನು ನೋಡುವುದಾದರೆ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಸುಮಾರು ಎರಡೂ ಕಾಲು ಲಕ್ಷದೊಳಗೆ ಒಂದು ಕ್ರೂಸರ್‌ ಪವರ್‌ಫುಲ್‌ ಬೈಕ್‌ ಬೇಕೆನ್ನುವವರಿಗೆ ಹೀರೋ ಮಾರ್ವಿಕ್‌ 440 ಒಂದು ಉತ್ತಮ ಆಯ್ಕೆಯಾಗಬಲ್ಲದು.

ಹೀರೋ ಇತ್ತೀಚೆಗೆ ತಂದ ಬೈಕ್‌ಗಳಲ್ಲಿ ಪ್ರಮುಖವಾದ ಮತ್ತೊಂದು ಬೈಕ್‌ ಎಂದರೆ ಅದು, ಹೀರೋ ಎಕ್ಸ್‌ಟ್ರೀಂ 125 ಆರ್‌. ಈ ಬೈಕ್‌ನ ಮಾಹಿತಿಗಳನ್ನು ನೋಡುವುದಾದರೆ, ಕ್ರಮವಾಗಿ ರೂ.95,000 ದಿಂದ ರೂ.99,500 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿವೆ. ಈ ಬೈಕ್ ಅತ್ಯಾಧುನಿಕ ವಿನ್ಯಾಸ ಹೊಂದಿದ್ದು, ನೋಡುಗರನ್ನು ಆಕರ್ಷಿಸುತ್ತದೆ. ಮುಂಭಾಗ ಎಕ್ಸ್‌ಟ್ರಿಮ್ 200ಎಸ್ (Xtreme 200S) ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುವ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದಿದೆ. ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಹಿಂಭಾಗದ ವಿನ್ಯಾಸವು ಆಕರ್ಷಕವಾಗಿದೆ.

ನೂತನ ಬೈಕ್, ಕಪ್ಪು (Black) ಸೇರಿದಂತೆ 3 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಈ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್‌ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ - ಕೂಲ್ಡ್ ಎಂಜಿನ್ ಹೊಂದಿದ್ದು, 11.5 bhp ಗರಿಷ್ಠ ಪವರ್, 10.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 3, 2024, 15:37 [IST]
English summary
Hero motocorp sells 56 lakh units in 2023 24 financial year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+