ರೋಡ್ ಟೆಸ್ಟ್: ಬಡವರ ಬಂಧು ಹೀರೋ ಸ್ಪ್ಲೆಂಡರ್ ಶೀಘ್ರದಲ್ಲೇ ಎಲೆಕ್ಟ್ರಿಕ್ ಆಗಲಿದೆಯೇ?

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡೀಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ದಿ ಪಡಿಸುತ್ತಿದ್ದಾರೆ. ಇದರ ನಡುವೆ ಹಲವು ಸ್ಟಾರ್ಟ್ಅಪ್ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತಿವೆ.

ಇದೀಗ ದೇಶದ ಅತಿ ದೊಡ್ಡ ದ್ವಿಚಕ್ರ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಹೀರೋ ಸ್ಪ್ಲೆಂಡರ್ (Hero Splendor) ಪ್ರೊಟೊಟೈಪ್ ಅನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಹೀರೋ ಸ್ಪ್ಲೆಂಡರ್ ಪ್ರೊಟೊಟೈಪ್ ಮೋಟಾರ್‌ಸೈಕಲ್ ಕೆಂಪು ತಾತ್ಕಾಲಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿದೆ ಮತ್ತು ಅದರ ಎಂಜಿನ್ ಬೇ ಸೇರಿದಂತೆ ಹಲವಾರು ಅಂಶಗಳನ್ನು ಮರೆಮಾಚಿದೆ.

Hero Splendor

ಈ ಹೀರೋ ಸ್ಪ್ಲೆಂಡರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ಭಾರತದಲ್ಲಿನ ಕಮ್ಯೂಟರ್ ಬೈಕ್ ವಿಭಾಗದ ರಾಜ. ಈ ಬೈಕ್ ಹೀರೋ ಮೋಟೋಕಾರ್ಪ್ ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಸ್ಪ್ಲೆಂಡರ್ ಬೈಕ್ ಸ್ಪಾಟ್ ಟೆಸ್ಟ್ ನಡೆಸುವುತ್ತಿರುವುದನ್ನು ಟೀ BHP ಬಹಿರಂಗಪಡಿಸಿದೆ. ಇದರಿಂದ ಈ ಬೈಕನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುತ್ತಿದಿರಬಹುದು ಎಂದು ಹೇಳಿದ್ದರು.

ಆದರೆ ಇದು ನಿಜವಲ್ಲ. GoGo A1 ಎಂಬುದು ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳನ್ನು ಮಾರಾಟ ಮಾಡುವ ಕಂಪನಿಯಾಗಿದೆ. ಹೀರೋ ಸ್ಪ್ಲೆಂಡರ್‌ನಲ್ಲಿ ಈ ಕಂಪನಿ ನಡೆಸುತ್ತಿರುವ ಪರೀಕ್ಷೆ ಇದಾಗಿದೆ ಎಂಬ ಸುಳಿವು ಲಭಿಸಿದೆ. ನೀವು ಎಲೆಕ್ಟ್ರಿಕ್ ವಾಹನವನ್ನು ಬಳಸಲು ಆಸಕ್ತಿ ಹೊಂದಿದ್ದರೆ, ಎರಡು ಆಯ್ಕೆಗಳಿವೆ. ಮೊದಲನೆಯದು, ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಆಯ್ಕೆಗಳಿಂದ ನೀವು ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಬಹುದು. ನೀವು ಬಯಸಿದ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್‌ಗಳನ್ನು ಆಯ್ಕೆ ಮಾಡಬಹುದು.

Hero Splendor

ಮತ್ತೊಂದು ಆಯ್ಕೆಯೆಂದರೆ, ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳನ್ನು ಅಳವಡಿಸುವ ಮೂಲಕ ಸಾಮಾನ್ಯ ಎಂಜಿನ್ ವಾಹನಗಳನ್ನು ಇವಿಗಳಾಗಿ ಪರಿವರ್ತಿಬಹುದು. GoGo A1 ಎಂಬುದು ಪೆಟ್ರೋಲ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಇವಿಗಳಾಗಿ ಪರಿವರ್ತಿಸುವ ಪರಿವರ್ತನೆ ಕಿಟ್‌ಗಳನ್ನು ಒದಗಿಸುವ ಕಂಪನಿಯಾಗಿದೆ. ಕಂಪನಿಯು ಹೀರೋ ಮೋಟೋಕಾರ್ಪ್, ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾ ಉತ್ಪನ್ನಗಳಿಗೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‌ಗಳನ್ನು ಮಾರಾಟ ಮಾಡುತ್ತದೆ.

GoGo A1 ಹೀರೋ ಸ್ಪ್ಲೆಂಡರ್ ಬೈಕ್‌ಗಾಗಿ ಹೊಸ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ ಎಂದು ವರದಿಯಾಗಿದೆ. ಇದರ ಭಾಗವಾಗಿ, ಕಂಪನಿಯು ಪುಣೆ ನಗರದ ಮೂಲಕ ಸ್ಪ್ಲೆಂಡರ್ ಬೈಕ್‌ನ ಪ್ರಯೋಗವನ್ನು ನಡೆಸಿತು. ಬೈಕ್ ಪರೀಕ್ಷೆಯ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಗಮನ ಸೆಳೆದಿವೆ. ಹೊಸ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಯಾವಾಗ ಮಾರಾಟವಾಗಲಿದೆ ಅಥವಾ ಅದರ ಬೆಲೆ ಎಷ್ಟು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.

Hero Splendor

GoGo A1 ಸ್ವತಃ ಈ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತದೆ ಎಂದು ಭಾವಿಸೋಣ. ಇನ್ನು ಹೀರೋ ಸ್ಪ್ಲೆಂಡರ್ ಬೈಕ್ ಬಗ್ಗೆ ಹೇಳುವುದಾದರೆ, ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನ ಮಾದರಿಗಳಲ್ಲಿ ಒಂದಾಗಿದೆ. ಹಲವಾರು ಐಸಿ ಎಂಜಿನ್ ವಾಹನಗಳ ಎಲೆಕ್ಟ್ರಿಕ್ ಆವೃತ್ತಿಗಳು ಈಗಾಗಲೇ ಭಾರತೀಯ ಮಾರುಕಟ್ಟೆಯ ಗ್ರಾಹಕರ ವಶಪಡಿಸಿಕೊಂಡಿವೆ.

ವಿವಿಧ ಐಸಿ ಎಂಜಿನ್ ಕಾರುಗಳ ಎಲೆಕ್ಟ್ರಿಕ್ ಆವೃತ್ತಿಗಳು ಈಗಾಗಲೇ ಭಾರತೀಯ ಮಾರುಕಟ್ಟೆಯನ್ನು ವಶಪಡಿಸಿಕೊಂಡಿವೆ. ಉದಾಹರಣೆಗೆ ಟಾಟಾ ಮೋಟಾರ್ಸ್‌ನ ನೆಕ್ಸಾನ್ ಮತ್ತು ಟಿಯಾಗೊ ಇವಿಗಳು. ಟಾಟಾ ಎಲೆಕ್ಟ್ರಿಕ್ ತನ್ನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದನ್ನು ಪಂಚ್ ಅನ್ನು ಸಹ ನೀಡಿದೆ. ಅದೇ ಧಾಟಿಯಲ್ಲಿ, ಕಂಪನಿಯ ಲಕ್ಷಾಂತರ ಅಭಿಮಾನಿಗಳು ಹೀರೋ ತನ್ನ ಜನಪ್ರಿಯ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಕಾಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 20, 2024, 18:24 [IST]
English summary
Hero splendor electric bike spied in india with gogo a1 kit details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+