Hero Xtreme 125R: ಮೊಬೈಲ್‌ಫೋನ್ ಬೆಲೆಗೆ, ಬೈಕ್ ತನ್ನಿ ಮನೆಗೆ! EMI, ಲೋನ್ ಕಂಪ್ಲೀಟ್ ಡೀಟೇಲ್ಸ್!
ಹೀರೋ ಮೋಟೋಕಾರ್ಪ್ ಇತ್ತೀಚೆಗೆ ಲಾಂಚ್ ಮಾಡಿದ ಬೈಕ್‌ಗಳಲ್ಲಿ ಹೀರೋ ಎಕ್ಸ್‌ಟ್ರೀಂ 125 ಆರ್ ಸಹ ಒಂದು. ಇದರ ಅಗ್ರೆಸಿವ್ ಡಿಸೈನ್ ಮತ್ತು ಆಕರ್ಷಕ ಫೀಚರ್‌ಗಳಿಂ 125 ಸಿಸಿ ಸೆಗ್ಮೆಂಟ್ ಅನ್ನು ಆಳಲಿ ಹೊರಟಿದೆ ಎಂದು ಈಗಾಗಲೇ ಹಲವು ಆಟೋಮೊಬೈಲ್ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಇಂದಿನ ಈ ಲೇಖನದಲ್ಲಿ ಈ ಬೈಕ್‌ನ ಡೌನ್‌ಪೇಮೆಂಟ್, ಇಎಂಐ,ಆನ್‌ರೊಡ್ ಬೆಲೆಗಳನ್ನು ನೋಡಲಿದ್ದೇವೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ. ಮೊದಲಿಗೆ ಈ ಬೈಕ್‌ನ ಬೆಲೆಯನ್ನು ನೋಡುವುದಾದರೆ, 98,709 ಬೆಲೆಯಿಂದ ಹೀರೋ ಎಕ್ಸ್‌ಟ್ರೀಂ 125 (Hero Xtreme 125R) ಆರ್ ಬೈಕ್ ಆರಂಭವಾಗುತ್ತಿದೆ. ಇದಕ್ಕೆ ರೋಡ್ ಟ್ಯಾಕ್ಸ್ ಮತ್ತು ಇನ್ಸುರೆನ್ಸ್ ಸೇರಿ ಇದರ ಆನ್ ರೋಡ್ ಬೆಲೆ 1,28,302 ರೂ ಆಗುತ್ತದೆ.

ಇನ್ನು ಈ ಬೈಕ್‌ನ ಲೋನ್ ವಿಚಾರಗಳಿಗಾಗಿ ಡೌನ್ ಪೇಮೆಂಟ್ ಅನ್ನು ನೋಡುವುದಾದರೆ, ಈ ಬೈಕ್ ಖರೀದಿ ಮಾಡಲು ನೀವು ಕನಿಷ್ಟವೆಂದರೂ, ನೀವು 13000 ಡೌನ್ ಪೇಮೆಂಟ್ ಮಾಡಬುದಾಗಿದೆ. ಸುಮಾರು 9.7 % ಬಡ್ಡಿದರದಲ್ಲಿ ಮೂರು ವರ್ಷಗಳಿಗೆ ಲೋನ್ ಮಾಡಿದರೆ ನಿಮ್ಮ ಇಎಂಐ ಮೊತ್ತ 3,704 ರೂಗಳಷ್ಟು ಪ್ರತೀ ತಿಂಗಳಿಗೆ ಬರುತ್ತದೆ.
ಇನ್ನು ಈ ಬೈಕ್‌ನ ಇತರ ಮಾಹಿತಿಗಳನ್ನು ನೋಡುವುದಾದರೆ, ಕ್ರಮವಾಗಿ ರೂ.95,000 ದಿಂದ ರೂ.99,500 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿವೆ. ಈ ಬೈಕ್ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದ್ದು, ನೋಡುಗರನ್ನು ಆಕರ್ಷಿಸುತ್ತದೆ. ಮುಂಭಾಗ ಎಕ್ಸ್‌ಟ್ರಿಮ್ 200ಎಸ್ (Xtreme 200S) ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುವ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದಿದೆ. ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಹಿಂಭಾಗದ ವಿನ್ಯಾಸವು ಆಕರ್ಷಕವಾಗಿದೆ.

ನೂತನ ಬೈಕ್, ಕಪ್ಪು (Black) ಸೇರಿದಂತೆ 3 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಈ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ - ಕೂಲ್ಡ್ ಎಂಜಿನ್ ಹೊಂದಿದ್ದು, 11.5 bhp ಗರಿಷ್ಠ ಪವರ್, 10.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ (ಮುಂಭಾಗ) 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ ಮುಂಭಾಗ ಡಿಸ್ಕ್ ಮತ್ತು ಹಿಂಭಾಗ ಡ್ರಮ್/ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಈ ಬೈಕ್, ಆಕರ್ಷಕ ಡಿಜಿಟಲ್ ಕನ್ಸೋಲ್, ಆರಾಮದಾಯಕವಾಗಿ ಪ್ರಯಾಣಿಸಲು ಸ್ಪ್ಲಿಟ್ - ಸೀಟ್ ಸೆಟಪ್ (Split - Seat Setup) ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್‌ಗೆ ಟಿವಿಎಸ್ ರೈಡರ್ 125 (TVS Raider 125) ದೊಡ್ಡ ಪ್ರತಿಸ್ಪರ್ಧಿಯಾಗಿದ್ದು, ಇದರ ಸಿಂಗಲ್ ಡಿಸ್ಕ್ ವೇರಿಯೆಂಟ್ ರೂ.95,000 ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








