ಆ್ಯಕ್ಟೀವಾ ಹೊಡೆತಕ್ಕೆ ಕಂಗಾಲು: ಕೇವಲ ದಕ್ಷಿಣ ಭಾರತ ಮಾರಾಟ ಕಂಡು ಬೆಚ್ಚಿಬಿದ್ದ ಪ್ರತಿಸ್ಪರ್ಧಿಗಳು

ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹೋಂಡಾ ಕಂಪನಿಯು ಇಂದು ತಮಿಳುನಾಡು, ಕರ್ನಾಟಕ, ತೆಲಂಗಾಣ, ಕೇರಳದಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವುದಾಗಿ ಘೋಷಿಸಿದೆ. ದಕ್ಷಿಣ ಭಾರತದಲ್ಲಿ ಒಟ್ಟು 10 ಮಿಲಿಯನ್ (1 ಕೋಟಿ) ಯೂನಿಟ್ 'ಆ್ಯಕ್ಟೀವಾ' ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ದೇಶದ ಸಾರ್ವಕಾಲಿಕ ಅತ್ಯಂತ ಆದ್ಯತೆಯ ಮತ್ತು ನೆಚ್ಚಿನ ಸ್ಕೂಟರ್ ಎಂದು ತನ್ನ ಸ್ಥಾನಮಾನವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ಹೋಂಡಾ ಹೇಳಿಕೊಂಡಿದೆ.

2001 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೋಂಡಾ ಆ್ಯಕ್ಟೀವಾ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಮಾಡಿದೆ. ಸ್ಕೂಟರ್ ಬಿಡುಗಡೆಯಾದಾಗಿನಿಂದ ವಿಶ್ವಾಸಾರ್ಹತೆ, ನಾವೀನ್ಯತೆ ಮತ್ತು ಶೈಲಿಗೆ ಜನಪ್ರಿಯತೆ ಪಡೆದಿದೆ. ದಕ್ಷಿಣ ಭಾರತದಲ್ಲಿ, ಆ್ಯಕ್ಟೀವಾದ ಮೊದಲ 5 ಮಿಲಿಯನ್ (50 ಲಕ್ಷ) ಮಾರಾಟದ ಮೈಲಿಗಲ್ಲನ್ನು 2017 (16 ವರ್ಷಗಳ ನಂತರ) ರಲ್ಲಿ ಸಾಧಿಸಲಾಯಿತು.

honda-activa-achieves-10-million-sales-in-south-india

ಇದಾದ ಬಳಿಕ ಮುಂದಿನ 5 ಮಿಲಿಯನ್ ಮಾರಾಟಗಳು ಕೇವಲ 7 ವರ್ಷಗಳಲ್ಲಿ ಸಾಧಿಸಲಾಗಿದೆ, ಇದು ಸ್ಕೂಟರ್ ಜನಪ್ರಿಯತೆಯನ್ನು ಎತ್ತಿ ತೋರಿಸಿದೆ. ಇದು 110 ಸಿಸಿ ಮತ್ತು 125 ಸಿಸಿ ಮಾದರಿಗಳು ಸೇರಿದಂತೆ ಸಂಪೂರ್ಣ ಆಕ್ಟಿವಾ ಮಾರಾಟವನ್ನು ಒಳಗೊಂಡಿದೆ. ಇನ್ನೂ ಮಾರಾಟದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ, ಮುಂಬರುವ ದಿನಗಳಲ್ಲಿ ಇನ್ನೂ ಹಲವು ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ದಕ್ಷಿಣ ಭಾರತದಾದ್ಯಂತ 1,700 ಟಚ್‌ಪಾಯಿಂಟ್‌ಗಳೊಂದಿಗೆ ಹೋಂಡಾದ ದೃಢವಾದ ಮಾರಾಟ ಮತ್ತು ಸೇವಾ ಜಾಲವು ಪ್ರತಿಯೊಂದು ಮೂಲೆಗೆ ತಲುಪಲು ಸಹಾಯ ಮಾಡಿದೆ. ಈ 10 ಮಿಲಿಯನ್ ಮಾರಾಟದ ಮೈಲಿಗಲ್ಲು ಡೀಲರ್ ಪಾಲುದಾರರು ಮತ್ತು ಸಹವರ್ತಿಗಳ ಬೆಂಬಲದೊಂದಿಗೆ ಹೋಂಡಾದ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ.

honda-activa-achieves-10-million-sales-in-south-india

ಆ್ಯಕ್ಟೀವಾವನ್ನು ಹೊರತುಪಡಿಸಿ, ಕಂಪನಿಯ ಸ್ಕೂಟರ್ ಲೈನ್-ಅಪ್‌ನ 110cc ಮತ್ತು 125cc ಆವೃತ್ತಿಗಳಲ್ಲಿ ಡಿಯೊ ಕೂಡ ಇದೆ. 100-110cc ಮೋಟಾರ್‌ಸೈಕಲ್ ವಿಭಾಗದಲ್ಲಿ ಶೈನ್ 100, CD 110 ಡ್ರೀಮ್ ಡಿಲಕ್ಸ್‌ನಾದ್ಯಂತ ಒಂಬತ್ತು ಅತ್ಯಾಕರ್ಷಕ ಬೈಕ್‌ಗಳು ಇವೆ. 125cc ವಿಭಾಗದಲ್ಲಿ ಶೈನ್ 125 & SP125, 160cc ವಿಭಾಗದಲ್ಲಿ ಯೂನಿಕಾರ್ನ್ & SP160 ಮತ್ತು 180-200cc ವಿಭಾಗದಲ್ಲಿ ಹಾರ್ನೆಟ್ 2.0 & CB200X ಮೋಟಾರ್‌ಸೈಕಲ್‌ಗಳು ಇವೆ.

ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗಕ್ಕೆ ಬರುವುದಾದರೆ 300cc - 500cc ನಡುವೆ CB350, H'ness CB350, CB350RS, CB300F, CB300R, NX500, XL750 ಟ್ರಾನ್ಸಾಲ್ಪ್, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಟೂರ್ ಅನ್ನು ಒಳಗೊಂಡಿದೆ. ಇದಲ್ಲದೆ, ಹಾರ್ನೆಟ್ 2.0 ಮತ್ತು CB200X ಅನ್ನು ಈಗ ಬಿಗ್‌ವಿಂಗ್ ಶೋರೂಮ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

honda-activa-achieves-10-million-sales-in-south-india

ಹೋಂಡಾ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, "ದಕ್ಷಿಣ ಭಾರತದಲ್ಲಿ 10 ಮಿಲಿಯನ್ ಆಕ್ಟಿವಾ ಮಾರಾಟವನ್ನು ಸಾಧಿಸಿರುವುದು ನಮ್ಮ ಗ್ರಾಹಕರ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ. ಇದು ನಿರಂತರವಾಗಿ ನಾವೀನ್ಯತೆಯನ್ನು ಇರಿಸಿಕೊಳ್ಳಲು ಮತ್ತು ಅಸಾಧಾರಣ ಮೌಲ್ಯವನ್ನು ಒದಗಿಸಲು ನಮ್ಮ ಪಟ್ಟುಬಿಡದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಗ್ರಾಹಕರು ಮತ್ತು ಡೀಲರ್ ಪಾಲುದಾರರ ಬೆಂಬಲಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಮುಂಬರುವ ವರ್ಷಗಳಲ್ಲಿ ಉತ್ಕೃಷ್ಟತೆಯನ್ನು ನೀಡಲು ಬದ್ಧರಾಗಿದ್ದೇವೆ. ಈ ಸಾಧನೆಯು ನಮ್ಮ ಮುಂಬರುವ ದಿನಗಳಲ್ಲಿ ಹೆಚ್ಚಿನ ಅಪ್‌ಡೇಟ್‌ಗಳೊಂದಿಗೆ ಆಕ್ಟೀವಾವನ್ನು ಗ್ರಾಹಕರಿಗೆ ನೀಡಲು ಪ್ರೋತ್ಸಾಹಿಸಿದೆ ಎಂದು ನಿರ್ದೇಶಕ ಯೋಗೇಶ್ ಮಾಥುರ್ ಹೇಳಿದರು.

More from DriveSpark

Article Published On: Wednesday, September 18, 2024, 11:26 [IST]
English summary
Honda activa achieves 10 million sales in south india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+