ವರ್ಷಾಂತ್ಯಕ್ಕೆ ಒಂದೇ ತಿಂಗಳು ಬಾಕಿ: 2025 ರಲ್ಲಿ ಎಲೆಕ್ಟ್ರಿಕ್ ಆಕ್ಟೀವಾ-ಆಕ್ಸೆಸ್ ರಣಭೀಕರ ಪೈಪೋಟಿ!

ಭಾರತದಲ್ಲಿ ಹೋಂಡಾ ಎಲೆಕ್ಟ್ರಿಕ್ ಆಕ್ಟೀವಾ (Honda Electric Activa)ಬಿಡುಗಡೆಯಾಗುವ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಮಾರಾಟದಲ್ಲಿರುವ ಜನಪ್ರಿಯ ಓಲಾ, ಎಥರ್‌ನಂತಹ ಬ್ರಾಂಡ್‌ಗಳಿಗೆ ಆಕ್ಟೀವಾ ಇವಿ ಕಠಿಣ ಪ್ರತಿಸ್ಪರ್ಧಿಯಾಗುವ ಜೊತೆಗೆ ಅವುಗಳ ಮಾರಾಟ ಕುಸಿತಕ್ಕೆ ಕಾರಣವಾದ್ರೂ ಅಚ್ಚರಿಯಿಲ್ಲ. ಏಕೆಂದರೆ ಜನ ಹೋಂಡಾ ಆಕ್ಟೀವಾ ಮೇಲೆ ಹೊಂದಿರುವ ಪ್ರೀತಿ ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಎಲೆಕ್ಟ್ರಿಕ್ ಆಕ್ಟೀವಾಗೂ ಉತ್ತಮ ಪ್ರತಿಕ್ರಿಯೆ ಸಿಗುವುದರಲ್ಲಿ ಅನುಮಾನವಿಲ್ಲ. ಆದ್ರೆ ಆಕ್ಟೀವಾಗೆ ಈ ಖುಷಿ ತುಂಬಾ ದಿನ ಇರುವುದಿಲ್ಲ ಎನ್ನಿಸುತ್ತಿದೆ. ಎದುರಾಳಿ ಸುಜುಕಿ ಎಲೆಕ್ಟ್ರಿಕ್ ಆಕ್ಸೆಸ್ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.

ಪ್ರಸ್ತುತ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇವಿ ಸ್ಟಾರ್ಟ್ಅಪ್ ಕಂಪನಿಗಳು ಮಾತ್ರ ಪ್ರಾಬಲ್ಯ ಹೊಂದಿವೆ. ಇವನ್ನು ಹೊರತುಪಡಿಸಿ ಹೀರೋ ಮೋಟೊಕಾರ್ಪ್, ಬಜಾಜ್ ಆಟೋ ಮತ್ತು ಟಿವಿಎಸ್ ಮೋಟಾರ್ ಕಂಪನಿ ಸೇರಿದಂತೆ ಬೆರಳೆಣಿಕೆಯಷ್ಟು ಜನಪ್ರಿಯ ಬ್ರಾಂಡ್‌ಗಳು ಮಾತ್ರ ತಮ್ಮ ಹಿಡಿತವನ್ನು ಉಳಿಸಿಕೊಂಡಿವೆ ಎಂದು ಹೇಳಬಹುದು.

honda-activa-electric-rival-suzuki-access-ev-to-be-launched-in-2025

ಇತ್ತೀಚೆಗೆ, ರಾಯಲ್ ಎನ್‌ಫೀಲ್ಡ್ ಕೂಡ ಜಾಗತಿಕವಾಗಿ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾಸೈಕಲ್ ಫ್ಲೈಯಿಂಗ್ ಫ್ಲೀ ಸಿ6 ಅನ್ನು ಬಹಿರಂಗಪಡಿಸಿದೆ. ಆದ್ರೆ ಸುಜುಕಿ ಮಾತ್ರ ಇನ್ನೂ ಇವಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ. ಇನ್ನೇನು ಹೋಂಡಾ ಕೂಡ ಶೀಘ್ರದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಕ್ಟಿವಾ ಇವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಹೋಂಡಾ ಇತ್ತೀಚೆಗೆ ಆಕ್ಟಿವಾ ಇವಿಯ ಟೀಸರ್ ಅನ್ನು ಕೂಡ ಹಂಚಿಕೊಂಡಿದ್ದು, ಅದರ ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ತಂತ್ರಜ್ಞಾನವನ್ನು ತೋರಿಸಿದೆ. ಈ ಎಲ್ಲಾ ಬೆಳವಣಿಗೆಗಳು ಸುಜುಕಿಗೆ ತಿಳಿಯದೇ ಇರುವುದಿಲ್ಲ, ಮಾರುಕಟ್ಟೆಗೆ ಎಂಟ್ರಿಕೊಡಲು ಸರಿಯಾದ ಸಮಯಕ್ಕೆ ಸುಜುಕಿ ಕಾಯುತ್ತಿರುವುದಾಗಿ ಕೆಲ ಮೂಲಗಳು ತಿಳಿಸಿವೆ. ಸರಿಯಾದ ಸಮಯಕ್ಕೆ ಎಲೆಕ್ಟ್ರಿಕ್ ಸುಜುಕಿ ಆಕ್ಸೆಸ್ ಎಂಟ್ರಿಕೊಡಲಿದೆ ಎಂದು ಹೇಳಲಾಗುತ್ತಿದೆ.

honda-activa-electric-rival-suzuki-access-ev-to-be-launched-in-2025

ಶೀಘ್ರದಲ್ಲೇ ಆಕ್ಸಿಸ್ ಇವಿ: ಸುಜುಕಿ ಕಂಪನಿಯು ಶೀಘ್ರದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಆಕ್ಸೆಸ್ ಇವಿ (Suzuki Access Electric), ಹೋಂಡಾ ಆಕ್ಟಿವಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ. ಕಂಪನಿ ಈ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ, ಬರ್ಗ್‌ಮ್ಯಾನ್ ಮ್ಯಾಕ್ಸಿ-ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯು ಅಭಿವೃದ್ಧಿ ಹಂತಲ್ಲಿದ್ದು, ಟೆಸ್ಟಿಂಗ್ ವೇಳೆ ರಸ್ತೆಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದೆ.

ಸದ್ಯ ಬರ್ಗ್ ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೂ ಕೆಲ ಬಲ್ಲ ಮೂಲಗಳ ಪ್ರಕಾರ, ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಇ-ಸ್ಕೂಟರ್ ಬಿಡುಗಡೆಗೂ ಮುನ್ನ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಹೊಸ ಆಕ್ಸೆಸ್ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

honda-activa-electric-rival-suzuki-access-ev-to-be-launched-in-2025

ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಬಗ್ಗೆ ಹೆಚ್ಚಿನ ವಿವರಗಳು ಹೊರಬರಲಿವೆ, ಸುಜುಕಿ ಆಕ್ಸೆಸ್ ಇವಿ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.20 ಲಕ್ಷವಿರಬಹುದು. ಹಲವು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಬರ್ಗ್‌ಮ್ಯಾನ್ ಹಾಗೂ ಆಕ್ಸಿಸ್ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದೇ ಪವರ್ ಟ್ರೇನ್ ಸೆಟಪ್ ಬಳಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 26, 2024, 11:54 [IST]
English summary
Honda activa electric rival suzuki access ev to be launched in 2025
Read more on suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+