ಹೊಸ 3ನೇ ಅಸೆಂಬ್ಲಿ ಲೈನ್ ಉದ್ಘಾಟಿಸಿದ ಹೋಂಡಾ... ಬೃಹತ್ ಉದ್ಯೋಗವಕಾಶಗಳ ಸಾಧ್ಯತೆ!

'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಗುಜರಾತ್ ರಾಜ್ಯದ ವಿಠಲಾಪುರದಲ್ಲಿ ತನ್ನ ನಾಲ್ಕನೇ ದ್ವಿಚಕ್ರ ವಾಹನ ಘಟಕದಲ್ಲಿ ಹೊಸ 3 ನೇ ಅಸೆಂಬ್ಲಿ ಲೈನ್ ಅನ್ನು ಉದ್ಘಾಟಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ಷಿಕ ಉತ್ಪಾದನಾ ಸಾಮರ್ಥ್ಯ: ಹೋಂಡಾದ ಅತ್ಯಾಧುನಿಕ ವಿಠಲಾಪುರ ಸೌಲಭ್ಯವು ವಿಶ್ವದ ಅತಿದೊಡ್ಡ ಸ್ಕೂಟರ್ ಸ್ಥಾವರವಾಗಿದೆ. ಸರ್ಕಾರದ 'ಮೇಕ್ ಇನ್ ಇಂಡಿಯಾ' ದೃಷ್ಟಿಗೆ ಹೊಂದಾಣಿಕೆ ಮಾಡುವ ಸ್ಥಳೀಯ ಉತ್ಪಾದನೆಗೆ ಕಂಪನಿಯ ದೃಢವಾದ ಬದ್ಧತೆಯನ್ನು ಇದು ಉದಾಹರಿಸುತ್ತದೆ. ಗುಜರಾತ್ ಸ್ಥಾವರದಲ್ಲಿ ಹೊಸ 3 ನೇ ಅಸೆಂಬ್ಲಿ ಲೈನ್‌ನ ಪ್ರಾರಂಭವು ಇನ್ನೂ 6.5 ಲಕ್ಷ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

honda-inaugurates-new-3rd-assembly-line-at-its-gujarat-plant

ಹೋಂಡಾದ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಾದ, ಆಕ್ಟಿವಾ ಮತ್ತು ಇತರ ಸ್ಕೂಟರ್ ಮಾದರಿಗಳಾದ ಡಿಯೋ, ಆಕ್ಟಿವಾ 125 ಮತ್ತು ಡಿಯೋ 125 ಅನ್ನು ವಿಠಲಾಪುರ ಸೌಲಭ್ಯದಲ್ಲಿ ತಯಾರಿಸಲಾಗುತ್ತದೆ. ಹೋಂಡಾದ ಗುಜರಾತ್ ಸ್ಥಾವರವು ಥೈಲ್ಯಾಂಡ್, US, ಯುರೋಪ್, ಜಪಾನ್ ಮುಂತಾದ ಜಾಗತಿಕ ಬೇಡಿಕೆಯನ್ನು ಪೂರೈಸಲು ಜಾಗತಿಕ ಎಂಜಿನ್‌ಗಳನ್ನು (250cc ಮತ್ತು ಅದಕ್ಕಿಂತ ಹೆಚ್ಚಿನ ವರ್ಗದ ದ್ವಿಚಕ್ರ ವಾಹನಗಳಿಗೆ) ತಯಾರಿಸಲು ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ.

ಹಾಗಾಗಿ ದ್ವಿಚಕ್ರ ವಾಹನ ಉತ್ಪಾದನಾ ಸಾಮರ್ಥ್ಯದಲ್ಲಿ ಜಾಗತಿಕವಾಗಿ ಹೋಂಡಾಗೆ ಭಾರತವು ಪ್ರಮುಖ ಉತ್ಪಾದನಾ ನೆಲೆಯಾಗಿದೆ. ವಿಠಲಾಪುರದಲ್ಲಿ ಹೋಂಡಾದ ದ್ವಿಚಕ್ರ ವಾಹನ ಘಟಕವು ಪೂರೈಕೆ ಸರಪಳಿಯೊಂದಿಗೆ ಈಗಾಗಲೇ ರಾಜ್ಯದಲ್ಲಿ ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಇದೀಗ ಹೊಸ 3ನೇ ಅಸೆಂಬ್ಲಿ ಲೈನ್ ವಿಸ್ತರಣೆಯು ಹೆಚ್ಚುವರಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲಿದೆ ಎಂದು ಹೋಂಡಾ ಹೇಳಿದೆ.

honda-inaugurates-new-3rd-assembly-line-at-its-gujarat-plant

ಹೋಂಡಾ ಉತ್ಪಾದನಾ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳನ್ನು ಕೂಡ ಹೆಚ್ಚಿಸಲು ಯೋಜಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ, ರೆಸ್ಟ್ ರೂಂಗಳು, ಶಿಶುವಿಹಾರದಂತಹ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳಾ ಭದ್ರತಾ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಮತ್ತು ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಹೋಂಡಾ ಹೇಳಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸುತ್ಸುಮು ಒಟಾನಿ ಮಾತನಾಡಿ, ನಾವು ಗುಜರಾತ್‌ನ ವಿಠಲಾಪುರ ಸೌಲಭ್ಯದಲ್ಲಿ ಹೊಸ 3 ನೇ ಅಸೆಂಬ್ಲಿ ಲೈನ್ ಅನ್ನು ಉದ್ಘಾಟಿಸಿರುವುದರಿಂದ ಮಹತ್ವದ ಮೈಲಿಗಲ್ಲನ್ನು ದಾಟಿದ್ದೇವೆ. ಗ್ರಾಹಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು, ಈ ಸಾಮರ್ಥ್ಯದ ವಿಸ್ತರಣೆ ಯೋಜನೆಯನ್ನು ಕೈಗೊಳ್ಳುವುದರಿಂದ ನಮಗೆ ವಾರ್ಷಿಕ ಉತ್ಪಾದನೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದರು.

honda-inaugurates-new-3rd-assembly-line-at-its-gujarat-plant

ಭಾರತ ಸೇರಿದಂತೆ ವಿದೇಶಗಳಲ್ಲೂ ನಮ್ಮ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಗುಜರಾತ್ ಘಟಕವು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಸ್ಕೂಟರ್ ಮಾದರಿಗಳನ್ನು ಉತ್ಪಾದಿಸುತ್ತದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸ್ಕೂಟರೀಕರಣದ ಪ್ರವೃತ್ತಿಯನ್ನು ಮುನ್ನಡೆಸಲು ನಮಗೆ ಸಹಾಯ ಮಾಡುತ್ತದೆ ಎಂದು ಸುತ್ಸುಮು ಒಟಾನಿ ಅವರು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 13:12 [IST]
English summary
Honda inaugurates new 3rd assembly line at its gujarat plant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+