ಬಡವರ ಬಂಡಿ ಯೂನಿಕಾರ್ನ್ ಹೊಸ ಅವತಾರದಲ್ಲಿ ಬಿಡುಗಡೆ: ಅದೇ ಬೆಲೆಗೆ ಪ್ರೀಮಿಯಂ ಫೀಚರ್ಸ್!
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು ಹೊಸ OBD2B ಕಂಪ್ಲೈಂಟ್ ಆಗಿರುವ ಹೊಸ ಯೂನಿಕಾರ್ನ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್ ಈಗಾಗಲೇ ಉತ್ತಮ ಬೇಡಿಕೆಯೊಂದೆಗೆ ಕಮ್ಯೂಟರ್ ಸೆಗ್ಮೆಂಟಿನಲ್ಲಿ ಜನಪ್ರಿಯತೆ ಪಡೆದಿದ್ದು, ಬದಲಾಗುತ್ತಿರುವ ಇಂದಿನ ಪ್ರಗತಿಶೀಲ ಸವಾರರ ಬೇಡಿಕೆಗಳನ್ನು ಪೂರೈಸಲು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಹೊಸ 2025 ಹೋಂಡಾ ಯುನಿಕಾರ್ನ್ ಅನ್ನು ರೂ. 1,19,481 ಎಕ್ಸ್ ಶೋರೂಂ ಬೆಲೆಯಲ್ಲಿ ಪರಿಚಯಿಸಲಾಗಿದೆ. ಹೊಸ ಯುನಿಕಾರ್ನ್ ಬೈಕ್‌ನ ಸುಧಾರಿತ ವೈಶಿಷ್ಟ್ಯಗಳು ಮತ್ತು ಹೊಸ ಎಂಜಿನ್ ಅಪ್‌ಡೇಟ್ ತಿಳಿಯೋಣ.
ಹೋಂಡಾ ಯುನಿಕಾರ್ನ್ (Honda unicorn) ಎರಡು ದಶಕಗಳಿಂದ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಹೆಸರಾಗಿದೆ. ಆಕರ್ಷಕ ವಿನ್ಯಾಸ, ಸುಧಾರಿತ ತಂತ್ರಜ್ಞಾನದ ಸಂಯೋಜನೆಯೊಂದಿಗೆ, ಲಕ್ಷಾಂತರ ಸವಾರರಿಗೆ ಬೆಸ್ಟ್ ಆಯ್ಕೆಯಾಗಿ ನಿರೂಪಿಸಿಕೊಂಡಿದೆ. ಇದೀಗ ಹೊಸ 2025 ರ ಮಾದರಿಯು ಇತ್ತೀಚಿನ ಕಾರ್ಬನ್ ಹೊರಸೂಸುವಿಕೆ ಮಾನದಂಡಗಳಿಗೆ ಬದ್ಧವಾಗಿ ಡಿಸೈನ್, ಸೌಕರ್ಯ ಮತ್ತು ತಂತ್ರಜ್ಞಾನದ ಮಿಶ್ರಣದೊಂದಿಗೆ ಎಂಟ್ರಿಕೊಟ್ಟಿದೆ.

ಮುಂಭಾಗದಲ್ಲಿ, ಇದು ಕ್ರೋಮ್ ಅಲಂಕರಣಗಳೊಂದಿಗೆ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಪಡೆದುಕೊಂಡು ಅದರ ಸರಳವಾದ ವಿನ್ಯಾಸದೊಂದಿಗೆ ಮುಂದುವರಿದಿದೆ. ಹೊಸ ಯುನಿಕಾರ್ನ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ರೇಡಿಯಂಟ್ ರೆಡ್ ಮೆಟಾಲಿಕ್ ಎಂಬ ಮೂರು ಬಣ್ಣದ ಆಯ್ಕೆಗಳೊಂದಿಗೆ ಒಂದೇ ವೇರಿಯೆಂಟ್‌ನಲ್ಲಿ ಲಭ್ಯವಿದೆ.
ಇದು ಹೊಸ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಿದ್ದು, ಇದರಲ್ಲಿ ಗೇರ್ ಇಂಡಿಕೇಷನ್, ಸರ್ವಿಸ್ ರೀಸನ್ ಇಂಡಿಕೇಟರ್, ಇಕೋ ಇಂಡಿಕೇಟರ್‌ನಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಮೇಲಾಗಿ, ಪ್ರಯಾಣದಲ್ಲಿರುವಾಗ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ.

ಹೊಸ ಹೋಂಡಾ ಯೂನಿಕಾರ್ನ್ ಎಂಜಿನ್ ಬಗ್ಗೆ ಹೇಳುವುದಾದ್ರೆ, 162.71cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. ಇದು ಮುಂಬರುವ ಸರ್ಕಾರಿ ನಿಯಮಗಳನ್ನು ಪೂರೈಸಲು OBD2B ಕಂಪ್ಲೈಂಟ್ ಆಗಿದೆ. ಈ ಎಂಜಿನ್ 7500 RPM ನಲ್ಲಿ 9.7 kW ಪವರ್ ಮತ್ತು 5250 RPM ನಲ್ಲಿ 14.58 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೇ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಹೋಂಡಾ ಯುನಿಕಾರ್ನ್ ಯಾವಾಗಲೂ ಭಾರತದ ಪ್ರೀಮಿಯಂ ಪ್ರಯಾಣಿಕ ವಿಭಾಗದಲ್ಲಿ ಪ್ರವರ್ತಕವಾಗಿದೆ. ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸೌಕರ್ಯಗಳಿಗೆ ಸಮಾನಾರ್ಥಕವಾಗಿದೆ. ಹೊಸ 2025 ಮಾದರಿಯ ಬಿಡುಗಡೆಯೊಂದಿಗೆ, ಅದರ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಹೊಸ ವೈಶಿಷ್ಟ್ಯಗಳು ಮತ್ತು ನವೀಕರಣಗಳು ಯುನಿಕಾರ್ನ್‌ನ ಆಕರ್ಷಣೆಯನ್ನು ಹೆಚ್ಚಿಸಲಿದೆ ಎಂದು ಹೋಂಡಾ ಇಂಡಿಯಾದ ಸಿಇಒ ಟ್ಸುಟ್ಸುಮು ಒಟಾನಿ ಹೇಳಿದರು.
2025 ಯುನಿಕಾರ್ನ್ ಹೋಂಡಾದ ಸಾಬೀತಾದ ಎಂಜಿನಿಯರಿಂಗ್ ಅನ್ನು ಸುಧಾರಿತ ವೈಶಿಷ್ಟ್ಯಗಳು, ಪ್ರಾಯೋಗಿಕತೆ ಮತ್ತು ನವೀಕರಿಸಿದ OBD2B-ಕಾಂಪ್ಲೈಂಟ್ ಎಂಜಿನ್‌ನಂತಹ ಪ್ರಬಲ ಅಂಶಗಳೊಂದಿಗೆ ಸಂಯೋಜಿಸುತ್ತದೆ. ಈ ಮೂಲಕ ಹೊಸ ಯುನಿಕಾರ್ನ್ ಪ್ರೀಮಿಯಂ ಪ್ರಯಾಣಿಕರ ವಿಭಾಗದಲ್ಲಿ ಮಾನದಂಡವನ್ನು ಹೊಂದಿಸುತ್ತದೆ. ವಿವೇಚನಾಶೀಲ ಸವಾರರಿಗೆ ಇದು ಆದ್ಯತೆಯ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೋಂಡಾ ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








