ಕರ್ನಾಟಕದಲ್ಲಿ ಹೋಂಡಾಗೆ ಫುಲ್ ಡಿಮ್ಯಾಂಡ್: ಮಾರಾಟವಾದ ವಾಹನಗಳು ಎಷ್ಟು ಗೊತ್ತಾ?

ಕರ್ನಾಟಕದ ದ್ವಿಚಕ್ರ ವಾಹನ ಖರೀದಿದಾರರಿಗೆ ಹೋಂಡಾ ವಾಹನಗಳು ಆದ್ಯತೆಯ ಆಯ್ಕೆಯಾಗಿವೆ. ಜೂನ್ 2001 ರಲ್ಲಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ 5 ಮಿಲಿಯನ್ (50 ಲಕ್ಷ) ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಅಸಾಧಾರಣ ವಿಶ್ವಾಸಾರ್ಹತೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ನೀಡುತ್ತಿರುವುದೇ ನಮ್ಮ ವಾಹನಗಳ ಹೆಚ್ಚಿನ ಸಂಖ್ಯೆಯ ಮಾರಾಟಕ್ಕೆ ಕಾರಣವಾಗಿದೆ. ಹೋಂಡಾದ ಈ ಸಾಧನೆಯು ಗ್ರಾಹಕರ ತೃಪ್ತಿಗಾಗಿ ಹೋಂಡಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

ಹೋಂಡಾ ಆಕ್ಟಿವಾ ಮತ್ತು ಶೈನ್ ರಾಜ್ಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಮಾದರಿಗಳಾಗಿವೆ. ಹೋಂಡಾ ಕರ್ನಾಟಕದಲ್ಲಿ 400 ಕ್ಕೂ ಹೆಚ್ಚು ನೆಟ್‌ವರ್ಕ್ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ (12 ಬಿಗ್‌ವಿಂಗ್ ಔಟ್‌ಲೆಟ್‌ಗಳನ್ನು ಒಳಗೊಂಡಂತೆ). 5 ಮಿಲಿಯನ್ ಮಾರಾಟದ ಮೈಲಿಗಲ್ಲು ಕರ್ನಾಟಕದ ಹೋಂಡಾ ಗ್ರಾಹಕರ ದೃಢವಾದ ನಂಬಿಕೆ ಮತ್ತು ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ನಂಬಿದೆ.

honda-motorcycle-and-scooter-5-million-sales-in-karnataka

ಕಂಪನಿಯ ಉತ್ಪನ್ನ ಶ್ರೇಣಿಯು ನಾಲ್ಕು ಸ್ಕೂಟರ್ ಮಾದರಿಗಳನ್ನು ಒಳಗೊಂಡಿದೆ. ಅವುಗಳೆಂದರೆ ಮೋಟಾರ್‌ಸೈಕಲ್ ವಿಭಾಗದಲ್ಲಿ 100 ಹಾಗೂ 110cc ವಿಭಾಗದಲ್ಲಿ ಶೈನ್ 100, Dre CD ಡಿಲಕ್ಸ್ 110x ನಾದ್ಯಂತ ಒಂಬತ್ತು ಅತ್ಯಾಕರ್ಷಕ ಮಾದರಿಗಳಿವೆ. ಹಾಗೆಯೇ ಸ್ಕೂಟರ್ ವಿಷಯಕ್ಕೆ ಬಂದರೆ 110cc ಸ್ಕೂಟರ್‌ಗಳಲ್ಲಿ ಆಕ್ಟೀವಾ ಮತ್ತು ಡಿಯೋ, 125cc ಸ್ಕೂಟರ್‌ಗಳಲ್ಲಿ ಆಕ್ಟೀವಾ 125 ಮತ್ತು ಡಿಯೋ 125 ಇವೆ.

ಉಳಿದಂತೆ 125cc ವಿಭಾಗದಲ್ಲಿ ಶೈನ್ 125 ಮತ್ತು SP125, 160cc ವಿಭಾಗದಲ್ಲಿ ಯುನಿಕಾರ್ನ್ ಮತ್ತು SP160 ಹಾಗೆಯೇ 180-200cc ವಿಭಾಗದಲ್ಲಿ ಹಾರ್ನೆಟ್ 2.0 ಮತ್ತು CB200X ಮೋಟಾರ್‌ಸೈಕಲ್‌ಗಳನ್ನು ಗ್ರಾಹಕರಿಗೆ ಖರೀದಿಗೆ ನೀಡಲಾಗುತ್ತಿದೆ. ಇವೆಲ್ಲವು ಸದ್ಯ ಭಾರತದಲ್ಲಿ ಹೋಂಡಾಗೆ ಪ್ರಮುಖ ಮಾರಾಟದ ಮಾದರಿಗಳಾಗಿವೆ. ಹೋಂಡಾದಲ್ಲಿ ಪ್ರೀಮಿಯಂ ಮೋಟಾರ್‌ಸೈಕಲ್‌ಗಳು ಕೂಡ ಇದ್ದು, ಕೆಳಗಗಿನಂತಿವೆ.

honda-motorcycle-and-scooter-5-million-sales-in-karnataka

ಹೋಂಡಾ ಪ್ರೀಮಿಯಂ ಮೋಟಾರ್‌ಸೈಕಲ್ ರಿಟೇಲ್ ಫಾರ್ಮ್ಯಾಟ್ ಅನ್ನು ಬಿಗ್‌ವಿಂಗ್ ಟಾಪ್‌ಲೈನ್ ಮೂಲಕ ಸಂಪೂರ್ಣ ಪ್ರೀಮಿಯಂ ಮೋಟಾರ್‌ಸೈಕಲ್ ಶ್ರೇಣಿಗೆ 200cc ನಿಂದ ಹಿಡಿದು 1800cc ವಾಹನಗಳನ್ನು ಉನ್ನತ ಮಹಾನಗರಗಳಲ್ಲಿ ಖರೀದಿಗೆ ಲಭ್ಯವಾಗಿಸಿದೆ. ಹಾಗೆಯೇ ಬಿಗ್‌ವಿಂಗ್ ಮೂಲಕ ಪ್ರತ್ಯೇಕವಾಗಿ ಮಧ್ಯಮ ಗಾತ್ರದ ಮೋಟಾರ್‌ಸೈಕಲ್ (200cc - 500cc) ಗಳನ್ನು ಮಾರಾಟ ಮಾಡಲಾಗುತ್ತದೆ.

ಕಂಪನಿಯ ವೈವಿಧ್ಯಮಯ ಶ್ರೇಣಿಯ ಮೋಟಾರ್‌ಸೈಕಲ್‌ಗಳನ್ನು ನೋಡುವುದಾದ್ರೆ CB300R, NX500, XL750 ಟ್ರಾನ್ಸಾಲ್ಪ್, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಟೂರ್, CB350, H'ness CB350, CB350RS, CB300F (ಹೊಸ ಫ್ಲೆಕ್ಸ್-ಫ್ಯುಯೆಲ್ ಆವೃತ್ತಿಯೊಂದಿಗೆ) ಅನ್ನು ಒಳಗೊಂಡಿದೆ. ಇದಲ್ಲದೆ, ಹಾರ್ನೆಟ್ 2.0 ಮತ್ತು CB200X ಅನ್ನು ಈಗ ಬಿಗ್‌ವಿಂಗ್ ಶೋರೂಮ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

honda-motorcycle-and-scooter-5-million-sales-in-karnataka

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, "ಗ್ರಾಹಕರ ನಿರಂತರ ಬೆಂಬಲ ಹಾಗೂ ಅವರ ನಂಬಿಕೆಯು ನಮ್ಮ ಶ್ರೇಷ್ಠತೆಯ ಹಾದಿಯಲ್ಲಿ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಹೋಂಡಾ ಬ್ರ್ಯಾಂಡ್‌ನಲ್ಲಿನ ನಂಬಿಕೆ ಮತ್ತು 5 ಮಿಲಿಯನ್ ಮೈಲಿಗಲ್ಲನ್ನು ತಲುಪಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಾವು ಕರ್ನಾಟಕದ ನಮ್ಮ ಗ್ರಾಹಕರಿಗೆ ಕೃತಜ್ಞರಾಗಿರುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 31, 2024, 12:00 [IST]
English summary
Honda motorcycle and scooter 5 million sales in karnataka
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+