Honda: ಹೋಂಡಾ ದ್ವಿಚಕ್ರ ವಾಹನಗಳಿಗೆ ಫುಲ್ ಡಿಮ್ಯಾಂಡ್.. ಆಕ್ಟಿವಾ ಸ್ಕೂಟರ್ ಆಯ್ತು ಗೇಮ್ ಚೇಂಜರ್!
ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India - HMSI) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಹೋಂಡಾ ಕಂಪನಿಯು ಸೋಮವಾರದಂದು ಜೂನ್ (2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾದ ಪ್ರಗತಿ ಸಾಧಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಯೋಣ.
ಹೋಂಡಾ ಕಂಪನಿಯು ಕಳೆದ ತಿಂಗಳು (ಜೂನ್ 2024) ಒಟ್ಟು 5,18,799 ಯುನಿಟ್ ದ್ವಿಚಕ್ರ (Two Wheeler) ವಾಹನಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 60% ಬೆಳವಣಿಗೆ ಕಂಡಿದೆ. ದೇಶೀಯವಾಗಿ 4,82,597 ಯುನಿಟ್ ವಾಹನಗಳನ್ನು ಮಾರಿದ್ದು, ವಿದೇಶಕ್ಕೂ 36,202 ಯುನಿಟ್ ರಫ್ತು ಮಾಡಿದೆ. ಹೋಂಡಾ ಈ ಮಟ್ಟಿಗೆ ಅಭಿವೃದ್ಧಿ ಸಾಧಿಸಲು 'ಆಕ್ಟಿವಾ' ಸ್ಕೂಟರ್ ಪ್ರಮುಖ ಕಾರಣವಾಗಿದೆ.

ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್ ಕುರಿತಂತೆ ಮಾತನಾಡುವುದಾದರೆ, ಇದು ರೂ.82,634 ದಿಂದ ರೂ.91,807 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.3 ಪಿಎಸ್ ಶಕ್ತಿ (ಪವರ್) ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಹೊರ ಹಾಕುತ್ತದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಸ ಆಕ್ಟಿವಾ 125 ಸ್ಕೂಟರ್ ಎಲ್‌ಇಡಿ ಹೆಡ್‌ಲೈಟ್, ಡಿಆರ್‌ಎಲ್ (ಡೇಟೈಮ್ ರನ್ನಿಂಗ್ ಲೈಟ್ಸ್), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. 109 ಕೆಜಿ ತೂಕವಿರುವ ಈ ಸ್ಕೂಟರ್, 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಹೋಂಡಾ ಶೈನ್ 100 (Honda Shine 100) ಬಗ್ಗೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ರೂ.66,600 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 98.98 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.38 ಪಿಎಸ್ ಪವರ್ ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 68 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೋಂಡಾ ಯುನಿಕಾರ್ನ್ (Honda Unicorn) ಬೈಕ್ ಸಹ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದು ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 162.71 ಸಿಸಿ ಏರ್-ಕೋಲ್ಡ್ ಫ್ಯುಯೆಲ್ ಇಂಜೆಕ್ಟ್ದ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 12.91 ಪಿಎಸ್ ಪವರ್ ಹಾಗೂ 14.58 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಹೋಂಡಾ ಎಸ್‌ಪಿ 125 (Honda SP 125) ಮೋಟಾರ್‌ಸೈಕಲ್ ರೂ.87,410 ದಿಂದ ರೂ.91,960 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. 123.94 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 10.87 ಪಿಎಸ್ ಶಕ್ತಿ ಹಾಗೂ 10.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications