Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಇಂದು ಭಾರತದ ಪೂರ್ವ ಭಾಗದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವುದಾಗಿ ಘೋಷಿಸಿದೆ. ಕಂಪನಿಯ ಪ್ರಕಾರ ಪೂರ್ವ, ಭಾಗದ ಭಾರತದಲ್ಲಿ 8 ಮಿಲಿಯನ್ (80 ಲಕ್ಷ) ಯುನಿಟ್‌ಗಳನ್ನು ಮಾರಾಟ ಮಾಡಿ ಗಮನಾರ್ಹ ಸಾಧನೆಯನ್ನು ಸಾಧಿಸಿರುವುದಾಗಿ ಹೇಳಿಕೊಂಡಿದೆ.
ಈಶಾನ್ಯ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಲಾಗಿದೆ. ಗ್ರಾಹಕರಿಗೆ ಉತ್ತಮ - ಗುಣಮಟ್ಟದ, ನವೀನ ಮತ್ತು ವಿಶ್ವಾಸಾರ್ಹ ದ್ವಿಚಕ್ರ ವಾಹನಗಳನ್ನು ಒದಗಿಸುವ HMSI ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಪ್ರದೇಶದಲ್ಲಿನ ಗ್ರಾಹಕರ ಅನನ್ಯ ಅಗತ್ಯಗಳನ್ನು ಪೂರೈಸಲು ವಿಭಾಗಗಳಾದ್ಯಂತ ಹರಡಿರುವ ಉತ್ಪನ್ನಗಳ ವೈವಿಧ್ಯಮಯ ಪೋರ್ಟ್‌ಫೋಲಿಯೊದೊಂದಿಗೆ, HMSI ಕಾರ್ಯಕ್ಷಮತೆ, ಶೈಲಿ ಮತ್ತು ಬಾಳಿಕೆಗೆ ಸಮಾನಾರ್ಥಕವಾದ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ ಎಂದು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೇಳಿಕೊಂಡಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, "ಪೂರ್ವ ವಲಯದಲ್ಲಿ 8 ಮಿಲಿಯನ್ ಮಾರಾಟದ ಮೈಲಿಗಲ್ಲನ್ನು ತಲುಪಿರುವುದು ಹೋಂಡಾ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಮ್ಮ ಗ್ರಾಹಕರು ಮತ್ತು ಡೀಲರ್ ಪಾಲುದಾರರು ಅವರ ನಿರಂತರ ನಂಬಿಕೆ ಮತ್ತು ನಿಷ್ಠೆಗೆ ನಾವು ಕೃತಜ್ಞರಾಗಿರುತ್ತೇವೆ ಎಂದರು.
ಗ್ರಾಹಕರ ಹೆಚ್ಚುತ್ತಿರುವ ವೈಯಕ್ತಿಕ ಚಲನಶೀಲತೆಯ ಅಗತ್ಯಗಳನ್ನು ಪೂರೈಸುವ ಮೂಲಕ, ಪೂರ್ವ ಪ್ರದೇಶದ (ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಂತೆ) ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇ24.2 ರಷ್ಟು ಒಟ್ಟಾರೆ ಮಾರುಕಟ್ಟೆ ಪಾಲನ್ನು HMSI ಹೊಂದಿದೆ. ಇದರಲ್ಲಿ 'SP125' ಮತ್ತು 'Activa' ಹೋಂಡಾದ ಉತ್ತಮ - ಮಾರಾಟದ ಉತ್ಪನ್ನಗಳಾಗಿ ಮುಂದುವರೆದಿವೆ.

ಕಳೆದ 5 ವರ್ಷಗಳಲ್ಲಿ SP125 ನ ಮಾರಾಟವು ದ್ವಿಗುಣಗೊಂಡಿದೆ. HMSI ವಾಹನಗಳ ಆನ್‌ಲೈನ್ ಬುಕಿಂಗ್‌ಗಾಗಿ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ತನ್ನ ಡಿಜಿಟಲ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ಕಂಪನಿ ಹೆಚ್ಚಿಸಿದೆ. 1,100 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್‌ನೊಂದಿಗೆ ಭಾರತದ ಪೂರ್ವ ರಾಜ್ಯಗಳಲ್ಲಿ HMSI ಬಲವಾದ ಅಸ್ತಿತ್ವವನ್ನು ಹೊಂದಿದೆ. ಆಕ್ಟಿವಾ+ವಿಶೇಷ ಆವೃತ್ತಿ, ಡಿಯೊ, ಆಕ್ಟಿವಾ 125 ಮತ್ತು ಡಿಯೊ 125+ರೆಪ್ಸೊಲ್ ಆವೃತ್ತಿ ಮತ್ತು ಶೈನ್ 100, ಸಿಡಿ 110 ಡ್ರೀಮ್ ಡಿಲಕ್ಸ್, ಲಿವೊ, ಶೈನ್ 125+, SP160, Hornet 2.0+Repsol ಮತ್ತು CB200X ನಂತಹ ಮಾದರಿಗಳು RedWing ಔಟ್‌ಲೆಟ್‌ಗಳಲ್ಲಿ ಲಭ್ಯವಿದೆ.
ಮೇಲಿನ ಎಲ್ಲಾ ಮಾದರಿಗಳನ್ನು ಕೈಗೆಟುಕುವ ಬೆಲೆಗೆ ನೀಡಲಾಗುತ್ತಿದ್ದರೇ, ಮತ್ತೊಂದೆಡೆ ಹೋಂಡಾದ ಪ್ರೀಮಿಯಂ ಮೋಟಾರ್‌ಸೈಕಲ್‌ಗಳು ಬಿಗ್‌ವಿಂಗ್ ಟಾಪ್‌ಲೈನ್ (300cc - 1800cc) ಮೂಲಕ ಉನ್ನತ ಮಹಾನಗರಗಳಲ್ಲಿ ಮತ್ತು ಬಿಗ್‌ವಿಂಗ್ (300cc - 500cc ಮಧ್ಯಮ ಗಾತ್ರದ ಮೋಟಾರ್‌ಸೈಕಲ್‌ಗಳು) ಇತರ ಬೇಡಿಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ.
ಕಂಪನಿಯ ಬಿಗ್‌ವಿಂಗ್ ಉತ್ಪನ್ನ ಶ್ರೇಣಿಯು CB300F, CB300R, CB350, H'ness CB350, CB350RS, NX500, XL750 Transalp, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಟೂರ್ ಅನ್ನು ಒಳಗೊಂಡಿದೆ. ಇವು ತುಸು ದುಬಾರಿ ಮಾದರಿಗಳಾಗಿದ್ದು, ಒಟ್ಟಾರೆ ಭಾರತದಲ್ಲಿ ಎಲ್ಲಾ ರೀತಿಯ ಗ್ರಾಹಕರನ್ನು ಆಕರ್ಷಿಸಲು ತಕ್ಕ ಮಾದರಿಗಳನ್ನು ನೀಡುತ್ತಿರುವುದಾಗಿ ಹೋಂಡಾ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications