Honda: ಆಕ್ಟೀವಾಗಿಂತ ಸ್ಟೈಲಿಷ್ ಸ್ಕೂಟರ್ ಬಿಡುಗಡೆಗೆ ಸಜ್ಜಾದ ಹೋಂಡಾ! ವಿಶೇಷತೆಗಳೇನು?

ಭಾರತೀಯ ಸ್ಕೂಟರ್ ವಿಭಾಗವನ್ನು ಆಳುತ್ತಿರುವ ಹೋಂಡಾ ಕಂಪನಿಯು, ಆಕ್ಟೀವಾಗಿಂತ ಹೆಚ್ಚಿನ ಸಿಸಿ, ಸ್ಟೈಲಿಷ್, ಮೈಲೇಜ್ ನೀಡುವ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಹೊರಟಿರುವುದಾಗಿ ವರದಿಯಾಗಿದೆ. ಈ ಹೊಸ ಸ್ಕೂಟರ್‌ಗಾಗಿ ಸ್ಟೈಲೋ 160 ಎಂಬ ಪೇಟೆಂಟ್ ಪಡೆದುಕೊಂಡಿರುವುದು ಇದೀಗ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಸ್ಟೈಲೋ 160 ನಿಯೋ ರೆಟ್ರೊ ಸ್ಕೂಟರ್ ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಈ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಸದ್ಯ ಭಾರತದಲ್ಲಿ ಹೆಚ್ಚಾಗಿ 110 ಸಿಸಿ ಮತ್ತು 125 ಸಿಸಿ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಆದ್ರೂ ಈಗಿನ ಪೀಳಿಗೆ ಇನ್ನಷ್ಟು ಪವರ್ ನೀಡುವ ಸ್ಕೂಟರ್ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.

honda-new-scooter-stylo-160-will-launch-soon-in-india

ಇದೇ ಕಾರಣಕ್ಕೆ ಯಮಹಾ ಈಗಾಗಲೇ ಏರೋಕ್ಸ್ 155 ಸ್ಕೂಟರ್ ಅನ್ನು ಇಳಿಸಿದೆ, ಹೀರೋ ಮೋಟೊಕಾರ್ಪ್ ಕ್ಸೂಮ್ 160 ಅನ್ನು ಸಿದ್ಧಪಡಿಸುತ್ತಿದೆ. ಒಂದು ವೇಳೆ ಈ ಸೆಗ್‌ಮೆಂಟ್‌ನಲ್ಲಿ ಈ ಎರಡೂ ಸ್ಕೂಟರ್‌ಗಳು ಯಶಸ್ವಿಯಾದರೆ ಸ್ಕೂಟರ್ ವಿಭಾಗದಲ್ಲಿ ದಶಕಗಳಿಂದ ಅಗ್ರ ಸ್ಥಾನದಲ್ಲಿರುವ ಹೋಂಡಾ ತನ್ನ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇದೆ, ಹಾಗಾಗಿ ಹೋಂಡಾ ಇತ್ತೀಚೆಗೆ ಸ್ಟೈಲೋ 160 ಸ್ಕೂಟರ್ ವಿನ್ಯಾಸ ಪೇಟೆಂಟ್ ಪಡೆದುಕೊಂಡಿದೆ ಎಂದು ತೋರುತ್ತಿದೆ.

ಸ್ಟೈಲೋ 160 ವಿಶೇಷತೆಗಳು: ಹೋಂಡಾ ಸ್ಟೈಲೋ 160 ಬೈಕಿನ ಪ್ರಮುಖ ಆಕರ್ಷಣೆಯೆಂದರೆ ಅದರ ನಿಯೋ - ರೆಟ್ರೊ ಸ್ಟೈಲ್ ಆಗಿದೆ. ಇದರ ಹೆಕ್ಸಾಗೋನಲ್ ಎಲ್ಇಡಿ ಹೆಡ್ ಲ್ಯಾಂಪ್, ವೃತ್ತಾಕಾರದ ರಿಯರ್ ವ್ಯೂ ಮಿರರ್‌ಗಳು, ಸಿ-ಆಕಾರದ ಎಲ್ಇಡಿ ಡಿಆರ್‌ಎಲ್, ಎಡ್ಜಿ ಎಲ್ಇಡಿ ಟೈಲ್ ಲ್ಯಾಂಪ್, ಆರಾಮದಾಯಕ ಸೀಟ್ ಮತ್ತು ದೃಢವಾದ ಗ್ರಾಬ್ ರೈಲ್ ಕೆಲವು ಪ್ರಮುಖ ಹೈಲೈಟ್‌ಗಳಾಗಿವೆ.

ವೈಶಿಷ್ಟ್ಯಳು: ಸ್ಟೈಲೋ 160 ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್ ಹೊಂದಿದ್ದು, ಡಿಜಿಟಲ್ ಗಡಿಯಾರ, ಟ್ರಿಪ್‌ ಮೀಟರ್, ಸ್ಪೀಡೋಮೀಟರ್, ಸ್ಮಾರ್ಟ್ ಕೀ, ತೈಲ ಬದಲಾವಣೆ ಸ್ಥಿತಿ ಮತ್ತು ಎಬಿಎಸ್ ಸೂಚಕದಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಸಂಪೂರ್ಣ ಎಲೆಕ್ಟ್ರಾನಿಕ್ ಇಗ್ನಿಷನ್ ಮತ್ತು ಹ್ಯಾಂಡಲ್ ಬಾರ್ ಲಾಕಿಂಗ್ ಕೀಯಾದ ಹೋಂಡಾ ಸ್ಮಾರ್ಟ್ ಕೀ ಸಿಸ್ಟಮ್ ಜೊತೆಗೆ ಆಂಟಿ ಥೆಫ್ಟ್ ಅಲಾರಂನೊಂದಿಗೆ ಬರುತ್ತದೆ.

ಎಂಜಿನ್: ಹೋಂಡಾ ಸ್ಟೈಲೋ 160 ಸ್ಕೂಟರ್ 156.9 ಸಿಸಿ, ಲಿಕ್ವಿಡ್ ಕೂಲ್ಡ್, 4 ವಾಲ್ವ್ಸ್, ಇಎಸ್ಪಿ+ ಎಂಜಿನ್ ಹೊಂದಿದೆ. ಈ ಎಂಜಿನ್ 15.4 ಬಿ ಹೆಚ್‌ಪಿ ಪವರ್ ಹಾಗೂ 13.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್‌ಗೆ 45 ಕಿ.ಮೀ. ಮೈಲೇಜ್ ನೀಡಲಿದೆ. ಹೋಂಡಾ ಸ್ಟೈಲೋ 160' ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬೆಲೆಯು ಸುಮಾರು 1.50 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದು.

ಹಾರ್ಡ್‌ವೇರ್‌: ಸ್ಕೂಟರ್ ಸಿಂಗಲ್ ಸಸ್ಪೆಂಷನ್ ಹೊಂದಿರುವ ಸ್ವಿಂಗ್ ಆರ್ಮ್ ಅನ್ನು ಹೊಂದಿದೆ. ಎರಡೂ ಬದಿಗಳಲ್ಲಿ 12 ಇಂಚಿನ ವೀಲ್‌ಗಳು, ಮುಂಭಾಗದಲ್ಲಿ 110/90 ಮತ್ತು ಹಿಂಭಾಗದಲ್ಲಿ 130/80 ಟ್ಯೂಬ್ ಲೆಸ್ ಟೈರ್ ಗಳನ್ನು ಹೊಂದಿದೆ. ಈ ಸ್ಕೂಟರ್ 118 ಕೆ.ಜಿ (ಎಬಿಎಸ್) / 115 ಕೆ.ಜಿ (ಸಿಬಿಎಸ್) ತೂಕವನ್ನು ಹೊಂದಿದೆ. 151 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 24, 2024, 11:00 [IST]
English summary
Honda new scooter stylo 160 will launch soon in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+