ಎಲೆಕ್ಟ್ರಿಕ್ ಆಕ್ಟೀವಾ ಬಿಡುಗಡೆಗೆ ಮುಹೂರ್ತ ಫೀಕ್ಸ್? ಮಾಹಿತಿ ಸೋರಿಕೆ.. ಭರ್ಜರಿ ವಿಶೇಷತೆಗಳಿವೆ!
ಹೋಂಡಾ ದ್ವಿಚಕ್ರ ವಾಹನ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಅವರು ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿ ಹಂಚಿಕೊಡ್ಡಿದ್ದಾರೆ. ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್, 2025 ರ ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. ಈ ಪ್ರದರ್ಶನದ ಬಳಿಕ 2024-25ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ನಮ್ಮ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡುವ ಪ್ಲಾನ್ ಇದೆ. ಕಂಪನಿ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ತಡವಾಗಿ ಪ್ರವೇಶಿಸುತ್ತಿರುವುದು ನಿಜವಾದರೂ ಸಮಯವು ಮಾರುಕಟ್ಟೆಯ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ಕಳೆದ ವರ್ಷದ ಒಟ್ಟು ಮಾರುಕಟ್ಟೆಯ ಶೇಕಡಾ 5 ರಿಂದ ಪ್ರಸ್ತುತ ಶೇಕಡಾ 8 ಕ್ಕೆ ವಿಸ್ತರಿಸುತ್ತಿರುವುದರಿಂದ, ಈ ವಿಭಾಗವನ್ನು ಪ್ರವೇಶಿಸಲು ಇದು ನಮಗೆ ಸರಿಯಾದ ಸಮಯವಾಗಿದೆ. ಕಂಪನಿಯು 2030 ರ ವೇಳೆಗೆ ತನ್ನ ದೇಶೀಯ ಮಾರಾಟದ ಮೂರನೇ ಒಂದು ಭಾಗವನ್ನು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿಯಿದೆ ಎಂದಿದ್ದಾರೆ.

ಇದು ಎಲೆಕ್ಟ್ರಿಕ್ ಆಕ್ಟೀವಾ?: ಆಕ್ಟಿವಾ ಎಂಬ ಹೆಸರು ಜನರಲ್ಲಿ ಭಾರಿ ಯಶಸ್ಸನ್ನು ಗಳಿಸಿರುವ ಜೊತೆಗೆ ಉತ್ತಮ ಮಾರಾಟವನ್ನು ಪಡೆಯುತ್ತಿರುವ ಕಾರಣ ಇದೇ ಹೆಸರನ್ನು ಬಳಿಸಿಕೊಂಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಪ್ಲಾನ್ ಕಂಪನಿಯದ್ದು. ಈ ವರ್ಷದ ಅಂತ್ಯದ ವೇಳೆಗೆ ಹೋಂಡಾ ತನ್ನ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಪರಿಚಯಿಸಿದರೆ, ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು.
ಹೋಂಡಾ ಭಾರತದಲ್ಲಿ ಪ್ಲಾಟ್ ಫಾರ್ಮ್-ಇ ನಲ್ಲಿ ವಾಹನಗಳನ್ನು ತಯಾರಿಸಲು ನಿರ್ಧರಿಸಿದೆ. ಇದರಲ್ಲಿ ವಿವಿಧ ರೀತಿಯ ಮೋಟರ್‌ಗಳು, ಬ್ಯಾಟರಿ ಪ್ಯಾಕ್‌ಗಳು ಮತ್ತು ವಿಭಿನ್ನ ದೇಹ ಶೈಲಿಗಳಲ್ಲಿ ವಾಹನಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಈ ಪ್ಲಾಟ್‌ಫಾರ್ಮ್ ಹೊಂದಿರಲಿದೆ. ಭಾರತದಲ್ಲಿ ಈ ಪ್ಲಾಟ್‌ಫಾರ್ಮ್ ಮೂಲಕ ಕಂಪನಿಯು ಉತ್ಪಾದಿಸುವ ಮೊದಲ ವಾಹನ ಆಕ್ಟಿವಾ ಆಗಿರಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಈಗಾಗಲೇ ಜಪಾನಿನ ದ್ವಿಚಕ್ರ ವಾಹನ ತಯಾರಕರು ಸ್ಥಿರ ಬ್ಯಾಟರಿ, ಮೋಟಾರ್‌ಗಳು, ಕಂಟ್ರೋಲರ್‌ಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದ್ದಾರೆ. ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್‌ನ ಅಡಿಯಲ್ಲಿ ಸ್ಥಿರ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಹಬ್ ಮೋಟರ್ ಅನ್ನು ಹೊಂದಿರುತ್ತದೆ ಎಂದು ಪೇಟೆಂಟ್‌ಗಳು ಸುಳಿವು ನೀಡಿವೆ.
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ. ಒಂದು ವೇಳೆ ಉತ್ತಮ ರೇಂಜ್, ಅತ್ಯುತ್ತಮ ಫೀಚರ್ಸ್ ಹಾಗೂ ಆಧುನಿಕ ಡಿಸೈನ್‌ನೊಂದಿಗೆ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದರೆ, ಈಗಿರುವ ಎಲ್ಲಾ ಓಲಾ, ಎಥೆರ್ ನಂತಹ ಇವಿ ಸ್ಕೂಟರ್‌ಗಳಿಗೆ ಭಾರೀ ಹೊಡೆತ ಬೀಳಲಿದೆ.

ಇದರ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಯಾವುದೇ ದೋಷಗಳನ್ನು ಕಾಣದಿದ್ದರೇ ಅದರ ಮಾರಾಟ ಭರ್ಜರಿ ಏರಿಕೆ ಕಾಣಲಿದೆ. ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ (Honda Activa EV) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications