Honda: ದೇಶೀಯ ಕಂಪನಿಗಳಿಗೆ ತೀವ್ರ ಸ್ಪರ್ಧೆ.. ತುಂಬಿದ ಶೋರೂಂ, ಆಕ್ಟಿವಾ ಸ್ಕೂಟರ್ ಆಯ್ತು ಗೇಮ್ ಚೇಂಜರ್!
ದೇಶದ ಪ್ರಖ್ಯಾತ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India - HMSI) ಹೊರ ಹೊಮ್ಮಿದೆ. ಕಂಪನಿಯ ಬೈಕ್ ಹಾಗೂ ಸ್ಕೂಟರ್‌ಗಳು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಮುಖ ವಾಹನ ಉತ್ಪಾದಕ ಕಂಪನಿಗಳ ಸೆಪ್ಟೆಂಬರ್ (2024) ತಿಂಗಳ ಮಾರಾಟದ ಅಂಕಿಅಂಶಗಳು ಪ್ರಕಟಗೊಂಡಿದ್ದು, ಹೋಂಡಾ ಮೋಟಾರ್‌ಸೈಕಲ್ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ.
ಹೋಂಡಾ, ಕಳೆದ ತಿಂಗಳು (ಸೆಪ್ಟೆಂಬರ್ 2024) ಒಟ್ಟು 5,83,633 ಯುನಿಟ್ ದ್ವಿಚಕ್ರ ವಾಹನಗಳನ್ನು (ದೇಶೀಯ ಮಾರಾಟ - ವಿದೇಶಕ್ಕೆ ರಫ್ತು) ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸದ 5,26,998 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 10.75% ಬೆಳವಣಿಗೆಯಾಗಿದೆ.

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ತಿಂಗಳಿಂದ ತಿಂಗಳಿಗೂ ಕೂಡ ಉತ್ತಮವಾಗಿಯೇ ಅಭಿವೃದ್ಧಿಯಾಗಿದೆ. ಆಗಸ್ಟ್‌ನಲ್ಲಿ ಮಾರಾಟ ಮಾಡಿದ 5,38,852 ಯುನಿಟ್‌ಗೆ ಹೋಲಿಕೆ ಮಾಡಿದರೆ ಶೇಕಡ 8.31% ಪ್ರಗತಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿಯಾಗಿ 44,781 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಆದರೂ ಒಟ್ಟಾರೆ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಎರಡನೇ ಸ್ಥಾನದಲ್ಲಿದೆ.
ಮೊದಲ ಸ್ಥಾನದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ಇದ್ದು, ಸರಿ ಸುಮಾರು 6,37,050 ಯುನಿಟ್ ದ್ವಿಚಕ್ರ ವಾಹನ (ಬೈಕ್ - ಸ್ಕೂಟರ್) ಮಾರಾಟ ಮಾಡಿದೆ. ಮೂರನೇ ಸ್ಥಾನದಲ್ಲಿರುವ ಟಿವಿಎಸ್ ಮೋಟಾರ್ (TVS Motor), ಬರೋಬ್ಬರಿ 4,82,495 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ನಾಲ್ಕನೇ ಸ್ಥಾನದಲ್ಲಿರುವ ಬಜಾಜ್ ಆಟೋ (Bajaj Auto) 4,00,489 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿದೆ.

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ದ್ವಿಚಕ್ರ ವಾಹನ ಮಾರಾಟದಲ್ಲಿ ಈ ಮಟ್ಟಿಗೆ ಪ್ರಗತಿ ಸಾಧಿಸಲು ಹಲವು ಬೈಕ್ ಹಾಗೂ ಸ್ಕೂಟರ್‌ಗಳು ಪ್ರಮುಖ ಕಾರಣವಾಗಿವೆ. ಅದರಲ್ಲೂ ಹೋಂಡಾ ಆಕ್ಟಿವಾ (Honda Activa) ಗೇಮ್ ಚೇಂಜರ್ ಸ್ಕೂಟರ್ ಆಗಿದೆ. ಇನ್ನುಳಿದಂತೆ ಶೈನ್ 125 (Shine 125) ಮತ್ತು ಎಸ್‌ಪಿ 125 (SP 125) ಮಾದರಿಗಳಿಗೆ (ಮಾಡೆಲ್) ಪ್ರತ್ಯೇಕ ಅಭಿಮಾನಿ ಬಳಗವಿದ್ದು, ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಸದ್ಯ, ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹೋಂಡಾ ಆಕ್ಟಿವಾ 125 ಸ್ಕೂಟರ್, ರೂ.83,084 ದಿಂದ ರೂ.92,257 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 51.23 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಹೋಂಡಾ ಆಕ್ಟಿವಾ 6ಜಿ ಕಡಿಮೆ ಸಾಮರ್ಥ್ಯದ ಎಂಜಿನ್ ಪಡೆದಿದ್ದು, ರೂ.78,623 ದಿಂದ ರೂ.84,624 ದರವನ್ನು ಒಳಗೊಂಡಿದೆ.
ನೂತನ ಹೋಂಡಾ ಶೈನ್ 125 ಮೋಟಾರ್‌ಸೈಕಲ್, ರೂ.81,549 ದಿಂದ ರೂ.85,550 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 123.94 ಸಿಸಿ ಪೆಟ್ರೋಲ್ ಸಿಸಿ ಎಂಜಿನ್ ಹೊಂದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹೋಂಡಾ ಎಸ್‌ಪಿ 125 ಬೈಕ್ ರೂ.87,860 ದಿಂದ ರೂ.91,860 ದರವನ್ನು ಹೊಂದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications