ಕೊನೆಗೂ ಹೋಂಡಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಹಿರಂಗ: ಆಕ್ಟೀವಾ ಇವಿ?

ಹೋಂಡಾ ಕೊನೆಗೂ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದೆ. ಇಐಸಿಎಂಎ 2024 ರಲ್ಲಿ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್, ಇ-ಬೈಕ್ ಪರಿಕಲ್ಪನೆಗಳನ್ನು ಪ್ರದರ್ಶಿಸಿದೆ. ಈ ಆಟೋ ಶೋನಲ್ಲಿ ಹೋಂಡಾ ಸಿಯುವಿ ಇ: ಎಲೆಕ್ಟ್ರಿಕ್ ಸ್ಕೂಟರ್, ಹೋಂಡಾ ಇವಿ ಫನ್ ಕಾನ್ಸೆಪ್ಟ್, ಹೋಂಡಾ ಇವಿ ಅರ್ಬನ್ ಕಾನ್ಸೆಪ್ಟ್ ಎಂಬ ದ್ವಿಚಕ್ರ ಇವಿ ವಾಹನಗಳನ್ನು ಪ್ರದರ್ಶಿಸಲಾಗಿದೆ. ಜಪಾನಿನ ದೈತ್ಯ ಕಂಪನಿಯು ಪ್ರದರ್ಶನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಪರಿಕಲ್ಪನೆಗಳ ಶ್ರೇಣಿಯನ್ನು ತೋರಿಸಿದೆ, ಇವುಗಳಲ್ಲಿ ಒಂದು ಇ-ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಹೋಂಡಾ ಇವಿ ಫನ್ ಕಾನ್ಸೆಪ್ಟ್: ಇವಿ ಫನ್ ಕಾನ್ಸೆಪ್ಟ್ ಸ್ಪೋರ್ಟಿ ಎಲೆಕ್ಟ್ರಿಕ್ ನೇಕೆಡ್ ಬೈಕ್ ಆಗಿದ್ದು, ಇದು ಮಧ್ಯಮ ಗಾತ್ರದ ಇಂಧನ ಚಾಲಿತ ಮೋಟಾರ್‌ಸೈಕಲ್‌ ಅಷ್ಟೇ ಪರ್ಫಾಮೆನ್ಸ್ ನೀಡುತ್ತದೆ. 2025 ರಲ್ಲಿ ಪರಿಚಯಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಇವಿ ಫನ್ ಕಾನ್ಸೆಪ್ಟ್ ಇನ್ನೂ ಕಾನ್ಸೆಪ್ಟ್ ಹಂತದಲ್ಲಿದ್ದರೂ, ಅಂತಿಮಗೊಳಿಸಿದ ಬ್ರೇಕ್‌ಗಳು ಮತ್ತು ಸಸ್ಪೆಂಷನ್‌ಗಳ ಉಪಸ್ಥಿತಿಯು ಅಭಿವೃದ್ಧಿಯ ಮುಂದುವರಿದ ಹಂತದಲ್ಲಿದೆ ಎಂದು ಸೂಚಿಸುತ್ತದೆ.

honda-showcases-electric-scooter-e-bike-concepts-at-eicma

ವಿನ್ಯಾಸದ ವಿಷಯಕ್ಕೆ ಬಂದರೆ ಸ್ಪೋರ್ಟಿ ನೇಕೆಡ್ ಸಿಂಗಲ್-ಸೈಡೆಡ್ ಸ್ವಿಂಗ್ ಆರ್ಮ್ ಆಕರ್ಷಕ ಲುಕ್‌ ನೀಡಿದೆ. ಭಾರತೀಯ ಗ್ರಾಹಕರಿಗೆ ಎದ್ದು ಕಾಣುವ ವಿಷಯವೆಂದರೆ ಇವಿ ಫನ್ ಕಾನ್ಸೆಪ್ಟ್‌ನ ಹೆಡ್ ಲೈಟ್ ಓಲಾ ರೋಡ್ ಸ್ಟರ್ ಎಲೆಕ್ಟ್ರಿಕ್ ಬೈಕ್ ಅನ್ನು ಹೋಲುತ್ತದೆ. ಆದರೆ ಉಳಿದ ವಿನ್ಯಾಸ ಅಂಶಗಳಲ್ಲಿ ಎರಡೂ ಕೂಡ ತುಂಬಾ ವ್ಯತ್ಯಾಸವನ್ನು ಹೊಂದಿವೆ.

ಇವಿ ಫನ್ ಕಾನ್ಸೆಪ್ಟ್ ಮಾದರಿಯು ಬ್ಯಾಟರಿ ಸಿಸಿಎಸ್ 2 ಕ್ವಿಕ್ ಚಾರ್ಜರ್ ನೊಂದಿಗೆ ಹೊಂದಿಕೆಯಾಗುತ್ತದೆ, ಇದು ಹೆಚ್ಚಿನ ಚಾರ್ಜಿಂಗ್ ಆಯ್ಕೆಗಳ ಸಾಧ್ಯತೆಯನ್ನು ಹೊಂದಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ ಬರೋಬ್ಬರಿ 100 ಕಿ.ಮೀ ಗಿಂತ ಹೆಚ್ಚಿನ ದೂರ ಓಡಿಸಬಹುದು ಎಂದು ಹೋಂಡಾ ಹೇಳಿಕೊಂಡಿದೆ.

honda-showcases-electric-scooter-e-bike-concepts-at-eicma

ಹೋಂಡಾ ಇವಿ ಅರ್ಬನ್ ಕಾನ್ಸೆಪ್ಟ್: ಇವಿ ಅರ್ಬನ್ ಕಾನ್ಸೆಪ್ಟ್ ಮಾದರಿಯ ಪವರ್ ಟ್ರೇನ್ ಹಾಗೂ ಬ್ಯಾಟರಿ ಸೇರಿದಂತೆ ಇತರ ಯಾವುದೇ ವಿವರಗಳ ಬಗ್ಗೆ ಮಾಹಿತಿ ಒದಗಿಸಿಲ್ಲ. ಅಲ್ಲಿಗೆ ಇದರ ಬಿಡುಗಡೆಯು ತುಂಬಾ ದೂರವಿದೆ ಎಂದು ಊಹಿಸಬಹುದು. ಒಟ್ಟಾರೆ ಇದರ ಡಿಸೈನ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಬಿಎಂಡಬ್ಲ್ಯು ಸಿಇ 04 ನಂತೆಯೇ ಇದೆ, ಇದು ಹೋಂಡಾದಲ್ಲಿ ದುಬಾರಿ ವಾಹನವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹೋಂಡಾ ಸಿಯುವಿ ಇ: ಎಲೆಕ್ಟ್ರಿಕ್ ಸ್ಕೂಟರ್: ಸಿಯುವಿ ಇ: ಎಲೆಕ್ಟ್ರಿಕ್ ಸ್ಕೂಟರ್ ಕಳೆದ ವರ್ಷ ತೋರಿಸಲಾದ ಇಎಂ 1 ಇ ನಂತರ ಹೋಂಡಾದ ಶ್ರೇಣಿಗೆ ಸೇರಿದ ಎರಡನೇ ಇವಿಯಾಗಿದೆ. ಇದು ಎರಡು ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ '70 ಕಿ.ಮೀ' ಓಡಿಸಬಹುದು ಎಂದು ಹೋಂಡಾ ಹೇಳಿಕೊಂಡಿದೆ.

honda-showcases-electric-scooter-e-bike-concepts-at-eicma

ಈ ಮಾದರಿಯನ್ನು ಪೂರ್ವವೀಕ್ಷಣೆ ಮಾಡುವ ಪರಿಕಲ್ಪನೆಯನ್ನು ಕಳೆದ ವರ್ಷದ ಟೋಕಿಯೊ ಮೋಟಾರ್ ಪ್ರದರ್ಶನದಲ್ಲಿ ತೋರಿಸಲಾಯಿತು. ಹೋಂಡಾ ನಿಮಗೆ ಸಿಯುವಿ-ಇಯೊಂದಿಗೆ ಎರಡು ಡಿಸ್ಪ್ಲೇಗಳ ಆಯ್ಕೆಯನ್ನು ನೀಡಿದೆ, ಬ್ಲೂಟೂತ್ ಸಂಪರ್ಕದೊಂದಿಗೆ 5-ಇಂಚಿನ ಅಥವಾ 7-ಇಂಚಿನ ಟಿಎಫ್ಟಿ ಡಿಸ್ಪ್ಲೇ ಕೂಡ ನೀಡಲಾಗಿದೆ. ಸಿಯುವಿ ಇ: ರಿವರ್ಸ್ ಜೊತೆಗೆ ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ಇಕೋ ಎಂಬ 3 ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 5, 2024, 19:21 [IST]
English summary
Honda showcases electric scooter e bike concepts at eicma
Read more on honda motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+